ಇಂಡೋ-ಪಾಕ್​ ಹೈವೋಲ್ಟೇಜ್ ಕದನ; ಕೊಹ್ಲಿ-ಬಾಬರ್ ಸೇರಿ ಈ ಆರು ಆಟಗಾರರ ಮೇಲೆಯೇ ಕಣ್ಣು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಡೋ-ಪಾಕ್​ ಹೈವೋಲ್ಟೇಜ್ ಕದನ; ಕೊಹ್ಲಿ-ಬಾಬರ್ ಸೇರಿ ಈ ಆರು ಆಟಗಾರರ ಮೇಲೆಯೇ ಕಣ್ಣು

ಇಂಡೋ-ಪಾಕ್​ ಹೈವೋಲ್ಟೇಜ್ ಕದನ; ಕೊಹ್ಲಿ-ಬಾಬರ್ ಸೇರಿ ಈ ಆರು ಆಟಗಾರರ ಮೇಲೆಯೇ ಕಣ್ಣು

  • India vs Pakistan : ಟಿ20 ವಿಶ್ವಕಪ್ ಟೂರ್ನಿ ಭರ್ಜರಿ ಆರಂಭ ಪಡೆದಿದ್ದು, ಜೂನ್ 9ರಂದು ನಡೆಯುವ ಇಂಡೋ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಇಡೀ ವಿಶ್ವವೇ ಕಾಯುತ್ತಿದೆ. ಆದರೆ, ಈ ಕದನದಲ್ಲಿ ಎಲ್ಲ ಕಣ್ಣು ಈ ಆಟಗಾರರ ಮೇಲೆ ನೆಟ್ಟಿದೆ.

ಟಿ20 ವಿಶ್ವಕಪ್ 2024ರ ಅತಿದೊಡ್ಡ ಪಂದ್ಯ ಜೂನ್ 9 ರಂದು ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಂದು ಮುಖಾಮುಖಿಯಾಗಲಿವೆ. ಉಭಯ ತಂಡಗಳ ನಡುವಿನ ಹೈವೊಲ್ಟೇಜ್ ಕದನಕ್ಕೆ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಸಜ್ಜಾಗಿ ನಿಂತಿದೆ. ಆದರೆ ಈ ಮೆಗಾ ಫೈಟ್​​ಗೂ ಮುನ್ನ ಎರಡೂ ತಂಡಗಳಲ್ಲಿ ಪ್ರಮುಖ 6 ಆಟಗಾರರ ಮೇಲೆ ಎಲ್ಲರ ಕಟ್ಟು ನೆಟ್ಟಿದೆ. ಅವರು ಯಾರು? ಇಲ್ಲಿದೆ ವಿವರ.
icon

(1 / 7)

ಐಪಿಎಲ್ 2024ರಲ್ಲಿ ರೋಹಿತ್​​ ಶರ್ಮಾ ನಿರೀಕ್ಷೆಯಂತೆ ಪ್ರದರ್ಶನ ನೀಡದಿರಬಹುದು, ಆದರೆ, ಹಿಟ್​ಮ್ಯಾನ್​ ಏಕಾಂಗಿಯಾಗಿ ಪಂದ್ಯದ ಚಿತ್ರಣವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಟಿ20 ಕ್ರಿಕೆಟ್​​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಲಿದ್ದಾರೆ. 151 ಟಿ20ಐ ಪಂದ್ಯಗಳಲ್ಲಿ 3974 ರನ್ ಗಳಿಸಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರನೂ ಹೌದು. ಇದೀಗ ಸಾಂಪ್ರದಾಯಿಕ ಎದುರಾಳಿಯನ್ನು ಧೂಳೀಪಟಗೊಳಿಸಲು ಮುಂದಾಗಿದ್ದಾರೆ.
icon

(2 / 7)

ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರೆಂಜ್ ಕ್ಯಾಪ್ ಗೆದ್ದುಕೊಂಡ ವಿರಾಟ್ ಕೊಹ್ಲಿ, ಈ ಟಿ20 ವಿಶ್ವಕಪ್​ನಲ್ಲೂ ರನ್ ಮಳೆಯನ್ನು ಹರಿಸುವ ನಿರೀಕ್ಷೆಯಲ್ಲಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ವಿರುದ್ಧ ಘರ್ಜಿಸಲು ಸಿದ್ಧರಾಗಿದ್ದಾರೆ. ಟಿ20 ವಿಶ್ವಕಪ್​ ಇತಿಹಾಸದಲ್ಲಿ ಪಾಕ್ ವಿರುದ್ಧ ಆಡಿದ 5 ಇನ್ನಿಂಗ್ಸ್​​ಗಳಲ್ಲಿ 4 ಅರ್ಧಶತಕ ಸಿಡಿಸಿದ್ದಾರೆ. ಕಳೆದ ವರ್ಷವೂ ಬಾಬರ್ ಪಡೆಯ ಎದುರು ಸೋಲುವ ಭೀತಿಗೆ ಸಿಲುಕಿದ್ದ ಪಂದ್ಯದಲ್ಲಿ ಅಜೇಯ 82 ರನ್ ಬಾರಿಸಿ ಗೆದ್ದುಕೊಟ್ಟರು. ಈ ಪಂದ್ಯದಲ್ಲೇ ಅವರ ಮೇಲೆಯೇ ಹೆಚ್ಚು ನಿರೀಕ್ಷೆ ಇಡಲಾಗಿದೆ.
icon

(3 / 7)

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವಿಶೇಷ ಬ್ಯಾಟಿಂಗ್ ಸ್ಟೈಲ್ ಹೊಂದಿದ್ದಾರೆ. ಕೊಹ್ಲಿ ನಂತರ ಟಿ20 ಕ್ರಿಕೆಟ್​​ನಲ್ಲಿ 4000+ ರನ್ ಸಿಡಿಸಿದ ವಿಶ್ವದ ಎರಡನೇ ಆಟಗಾರ ಎನಿಸಿದ್ದಾರೆ. 2021ರ ಟಿ20 ವಿಶ್ವಕಪ್​ನಲ್ಲಿ ಬಾಬರ್ ಭಾರತದ ವಿರುದ್ಧ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದರು. ನಾಯಕನಾಗಿ ಮರು ನೇಮಕಗೊಂಡಿರುವ ಬಾಬರ್ ಈ ಟಿ20 ಕ್ರಿಕೆಟ್​ನಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ,
icon

(4 / 7)

ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರು ಹೊಸ ಚೆಂಡಿನೊಂದಿಗೆ ಭಾರತದ ವಿರುದ್ಧ ಅನೇಕ ಬಾರಿ ವಿನಾಶವನ್ನುಂಟು ಮಾಡಿದ್ದಾರೆ. ಪವರ್​ಪ್ಲೇನಲ್ಲೇ ಟೀಮ್ ಇಂಡಿಯಾ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ್ದಾರೆ. ಅದರಲ್ಲೂ ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಮೊದಲ ಆರು ಓವರ್​ಗಳ ಒಳಗೆಯೇ ಔಟ್ ಮಾಡಿದ್ದಾರೆ. ಕಳೆದ ಎರಡು ವಿಶ್ವಕಪ್​​ಗಳಲ್ಲೂ ರೋಹಿತ್​ ಹೀಗೆಯೇ ಔಟಾಗಿದ್ದಾರೆ.
icon

(5 / 7)

ಪಾಕ್​ ವೇಗದ ಬೌಲರ್ ಮೊಹಮ್ಮದ್ ಅಮೀರ್ ಹಲವು ವರ್ಷಗಳ ಭಾರತ ತಂಡಕ್ಕೆ ಮರಳಿದ್ದಾರೆ. ಅಮೀರ್ ತಮ್ಮ ಸ್ವಿಂಗ್ ಬೌಲಿಂಗ್​​ ಬೌಲಿಂಗ್ ಮೂಲಕ ಭಾರತೀಯ ಬ್ಯಾಟರ್​​ಗಳನ್ನು ಸಂಕಷ್ಟಕ್ಕೆ ಸಿಲುಕಿಸಲಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲೂ ಪಾಕಿಸ್ತಾನದ ಗೆಲುವಿನಲ್ಲಿ ಅಮೀರ್ ಪ್ರಮುಖ ಪಾತ್ರ ವಹಿಸಿದ್ದರು.  ಹೀಗಾಗಿ ಎಲ್ಲರ ಕಣ್ಣುಗಳು ಮತ್ತೊಮ್ಮೆ ಅಮೀರ್ ಅವರ ಪ್ರದರ್ಶನದ ಮೇಲೆ ನೆಟ್ಟಿವೆ.
icon

(6 / 7)

ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಸಹ ಪಾಕ್ ತಂಡಕ್ಕೆ ಕಂಟಕವಾಗಲಿದ್ದಾರೆ. ತನ್ನ ಯಾರ್ಕರ್ ಮತ್ತು ಸ್ವಿಂಗ್ ಬೌಲಿಂಗ್ ಮೂಲಕ ಬಾಬರ್ ಪಡೆ ಕಾಡಲು ಸಜ್ಜಾಗಿದ್ದಾರೆ. ಪವರ್​​​ಪ್ಲೇನಲ್ಲೇ ವಿಕೆಟ್​ ಬೇಟೆಯಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಮೆಗಾ ಫೈಟ್​ನಲ್ಲಿ ಪಾಕ್ ಸೆದೆಬಡಿಯಲು ವಿಶೇಷ ಯೋಜನೆ ರೂಪಿಸುತ್ತಿದ್ದಾರೆ.
icon

(7 / 7)

ಇತರ ಗ್ಯಾಲರಿಗಳು