Fastest Century in ODI: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!-cricket news fastest century in odi cricket by indian batsmen kohli sehwag raina yuvraj cricket news in kannada prs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Fastest Century In Odi: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!

Fastest Century in ODI: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!

  • Fastest Century in ODI Cricket: ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಯಾರು? ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕದ ಸಿಡಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರು ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ. ಟಾಪ್-10ರಲ್ಲಿ ಭಾರತದ ಆಟಗಾರನೇ ಇಲ್ಲ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂದರೆ ಥಟ್ಟನೆ ನೆನಪಿಗೆ ಬರುವುದು ಸೌತ್ ಆಫ್ರಿಕಾ ಡೇಂಜರಸ್ ಬ್ಯಾಟರ್ ಎಬಿ ಡಿವಿಲಿಯರ್ಸ್. ಆದರೆ, ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ವೇಗದ ಶತಕ ಸಿಡಿಸಿದ್ದು ಯಾರು? ಸಾಕಷ್ಟು  ಮಂದಿಗೆ ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲ.
icon

(1 / 12)

ಎಬಿ ಡಿವಿಲಿಯರ್ಸ್ ಕೇವಲ 31 ಎಸೆತಗಳಲ್ಲೇ ನೂರು ಮುಟ್ಟಿದ್ದರು. ಈ ದಾಖಲೆಯನ್ನೂ ಯಾರೂ ಟಚ್ ಮಾಡಲು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಕೋರಿ ಆ್ಯಂಡರ್ಸನ್, 3ನೇ ಸ್ಥಾನದಲ್ಲಿ ಪಾಕಿಸ್ತಾನದ ಶಾಹೀದ್ ಅಫ್ರಿದಿ ಇದ್ದಾರೆ. ಆದರೆ ಭಾರತದ ಯಾವೊಬ್ಬ ಆಟಗಾರ ಅಗ್ರ-10ರಲ್ಲೂ ಸ್ಥಾನ ಪಡೆದಿಲ್ಲ‌ ಎಂಬುದು ಬೇಸರದ ಸಂಗತಿ.
icon

(2 / 12)

ಹಾಗಾದರೆ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಯಾರು? ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕದ ಸಿಡಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರು ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ. ಟಾಪ್-10ರಲ್ಲಿ ಭಾರತದ ಆಟಗಾರನೇ ಇಲ್ಲ. 
icon

(3 / 12)

ಟೀಮ್ ಇಂಡಿಯಾದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ. 2016ರ ಅಕ್ಟೋಬರ್ 10 ಆಸ್ಟ್ರೇಲಿಯಾ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ 52 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಶತಕಕ್ಕೆ ಇರುವುದು 15ನೇ ಸ್ಥಾನ.
icon

(4 / 12)

ವಿಶ್ಬಕಪ್ ಇತಿಹಾಸದಲ್ಲಿ ಮೋಸ್ಟ್ ಡೇಂಜರಸ್ ಓಪನರ್ ಆಗಿ ಗುರುತಿಕೊಂಡ ವೀರೇಂದ್ರ ಸೆಹ್ವಾಗ್, ಭಾರತದ‌ ಪರ ವೇಗದ ಶತಕ ಸಿಡಿಸಿದ ಎರಡನೇ ಆಟಗಾರ. ಸೆಹ್ವಾಗ್ ಅವರು 2009ರ ಮಾರ್ಚ್ 11ರಂದು ನ್ಯೂಜಿಲೆಂಡ್‌ ಎದುರು ಹ್ಯಾಮಿಲ್ಟನ್ ನಲ್ಲಿ 60 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ವೇಗದ ಶತಕವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 32ನೇ ವೇಗದ ಶತಕ ಎನಿಸಿಕೊಂಡಿದೆ.
icon

(5 / 12)

ಭಾರತದ ಪರ ಮತ್ತೊಂದು ವೇಗದ ಶತಕ ಸಿಡಿಸಿದ್ದಾರೆ. 61 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು, ಟೀಮ್ ಇಂಡಿಯಾ ಪರ ಮೂರನೇ ಫಾಸ್ಟೆಸ್ಟ್ ಶತಕವಾಗಿದೆ. ನಾಗ್ಪುರದಲ್ಲಿ 2013ರ ಜನವರಿ 30ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದರು. ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವೇಗದ ಶತಕವು 37ನೇ ಸ್ಥಾನ ಪಡೆದಿದೆ.
icon

(6 / 12)

ಭಾರತದ ನಾಲ್ಕನೇ ಶರ ವೇಗದ ಶತಕ ದಾಖಲಿಸಿರುವುದು ಮಾಜಿ ನಾಯಕ‌ ಮೊಹಮ್ಮದ್ ಅಜರುದ್ದೀನ್. ಅವರು 1988ರ ಡಿಸೆಂಬರ್ 17 ರಂದು ಬರೋಡಾದಲ್ಲಿ ನ್ಯೂಜಿಲೆಂಡ್ ವಿರುದ್ಧ 62 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದರು. 
icon

(7 / 12)

ಟೀಮ್‌ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ ಈ ಸಾಧನೆಯ ಪಟ್ಟಿಗೆ‌ ಸೇರಿದ್ದಾರೆ. ಭಾರತದ ಪರ ಐದನೇ ವೇಗದ ಶತಕ ಸಿಡಿಸಿದ ಆಟಗಾರ ಎನಿಸಿರುವ ಯುವಿ, 2008ರ ನವೆಂಬರ್ 14ರಂದು ರಾಜ್‌ಕೋಟ್ ನಲ್ಲಿ ಇಂಗ್ಲೆಂಡ್ ಎದುರು 64 ಎಸೆತಗಳಲ್ಲಿ ನೂರು‌ ದಾಟಿದ್ದರು. ಈ ಪಂದ್ಯದಲ್ಲಿ ಅವರು 78 ಎಸೆತಗಳಲ್ಲಿ ಅಜೇಯ 138 ರನ್‌‌ ಚಚ್ಚಿದ್ದರು.
icon

(8 / 12)

ಹಿರಿಯ ಆಟಗಾರ ಕೇದಾರ್ ಜಾಧವ್ ಭಾರತದ‌ ಪರ ವೇಗದ ಏಕದಿನ ಶತಕ ಸಿಡಿಸಿದ ಮತ್ತೊಬ್ಬ ಆಟಗಾರ. ಅವರು ಕೂಡ‌ ಇಂಗ್ಲೆಂಡ್ ‌ತಂಡದೆದುರೇ ಈ ಫಾಸ್ಟೆಸ್ಟ್ ಸೆಂಚುರಿ ದಾಖಲಿಸಿದ್ದಾರೆ. 2017ರ ಜನವರಿ 15ರಂದು ಪುಣೆಯಲ್ಲಿ ನಡೆದ ಪಂದ್ಯದಲ್ಲಿ 65 ಎಸೆತಗಳಲ್ಲಿ ಸೆಂಚುರಿ‌ ಬಾರಿಸಿದ್ದರು.
icon

(9 / 12)

ಅತ್ಯಂತ ವೇಗವಾಗಿ ಬ್ಯಾಟ್ ಬೀಸುತ್ತಿದ್ದ ಸೆಹ್ವಾಗ್​, ಮತ್ತೊಂದು ವೇಗದ ಶತಕ ಸಿಡಿಸಿದ್ದಾರೆ. ಈ ಬಾರಿ 66 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದಾರೆ. 2009ರ ಡಿಸೆಂಬರ್​ 15ರಂದು ರಾಜ್​ಕೋಟ್​​ನಲ್ಲಿ ಶ್ರೀಲಂಕಾ ವಿರುದ್ಧ ಈ ದಾಖಲೆ ಬರೆದಿದ್ದಾರೆ.
icon

(10 / 12)

ಅತ್ಯಂತ ಭಯಾನಕ ಆಟಗಾರ ಯೂಸಫ್ ಪಠಾಣ್​, ಭಾರತದ ಪರ ವೇಗದ ಶತಕ ಸಿಡಿಸಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು 2011ರ ಜನವರಿ 1ರಂದು ಸೌತ್​ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದಾರೆ. 68 ಎಸೆತಗಳಲ್ಲಿ ಶತಕ ಸಾಧನೆ ಮಾಡಿದ್ದಾರೆ.
icon

(11 / 12)

ಭಾರತದ ಪರ ಹೆಚ್ಚು ಬಾರಿ ಫಾಸ್ಟೆಸ್ಟ್ ಸೆಂಚುರಿ ಸಿಡಿಸಿದ ಆಟಗಾರ ಎನಿಸಿದ್ದಾರೆ. ನ್ಯೂಜಿಲೆಂಡ್​ ವಿರುದ್ಧ 2001ರಲ್ಲಿ 69 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
icon

(12 / 12)

ಇತರ ಗ್ಯಾಲರಿಗಳು