ಮಗನನ್ನು ಇಂಜಿನಿಯರ್ ಮಾಡಿಸುವ ಕನಸೊತ್ತಿದ್ದ ತಂದೆ; ಆದರೆ ಆತ ಆಗಿದ್ದು ಕ್ರಿಕೆಟರ್, ಈಗ ಭಾರತದ ಸ್ಟಾರ್ ಆಟಗಾರ!
- KL Rahul : ಏಪ್ರಿಲ್ 18ರಂದು 32ನೇ ವರ್ಷಕ್ಕೆ ಕಾಲಿಟ್ಟ ಕೆಎಲ್ ರಾಹುಲ್ ಅವರನ್ನು ಇಂಜಿನಿಯರ್ ಮಾಡಬೇಕೆಂದು ಅವರ ತಂದೆ ಲೋಕೇಶ್ ಅವರು ಕನಸು ಕಂಡಿದ್ದರು. ಆದರೆ, ಕೆಎಲ್ ರಾಹುಲ್ ಆಗಿದ್ದು ಕ್ರಿಕೆಟರ್!
- KL Rahul : ಏಪ್ರಿಲ್ 18ರಂದು 32ನೇ ವರ್ಷಕ್ಕೆ ಕಾಲಿಟ್ಟ ಕೆಎಲ್ ರಾಹುಲ್ ಅವರನ್ನು ಇಂಜಿನಿಯರ್ ಮಾಡಬೇಕೆಂದು ಅವರ ತಂದೆ ಲೋಕೇಶ್ ಅವರು ಕನಸು ಕಂಡಿದ್ದರು. ಆದರೆ, ಕೆಎಲ್ ರಾಹುಲ್ ಆಗಿದ್ದು ಕ್ರಿಕೆಟರ್!
(1 / 9)
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ, ಎಲ್ಲದಕ್ಕಿಂತ ಹೆಚ್ಚಾಗಿ ಕನ್ನಡಿಗ ಕೆಎಲ್ ರಾಹುಲ್ ಅವರು ಏಪ್ರಿಲ್ 18ರಂದು ತಮ್ಮ 32ನೇ ವಯಸ್ಸಿಗೆ ಕಾಲಿಟ್ಟರು. ಐಪಿಎಲ್‌ನಲ್ಲಿ ಬ್ಯುಸಿಯಾಗಿರುವ ರಾಹುಲ್, ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
(2 / 9)
ಕಣ್ಣೂರು ಲೋಕೇಶ್ ರಾಹುಲ್, 1992ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಆದರೆ ತಂದೆ-ತಾಯಿ ಮಂಗಳೂರು ಮೂಲದವರು. ಆದರೆ ರಾಹುಲ್ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ತಂದೆ ಲೋಕೇಶ್ ಮತ್ತು ತಾಯಿ ರಾಜೇಶ್ವರಿ. ಅಪ್ಪ ಇಂಜಿನಿಯರ್ ಆದರೆ, ಅಮ್ಮ ಪ್ರೊಫೆಸರ್.
(3 / 9)
ಭಾರತೀಯ ಕ್ರಿಕೆಟ್ನಲ್ಲಿ ಉತ್ತಮ ಹೆಸರು ಸಂಪಾದಿಸಿರುವ ಕೆಎಲ್ ರಾಹುಲ್ ಅವರನ್ನು ಇಂಜಿನಿಯರ್ ಮಾಡಬೇಕೆಂದು ಕನಸು ಕಂಡಿದ್ದರು. ಆದರೆ 32 ವರ್ಷದ ರಾಹುಲ್ಗೆ ಕ್ರಿಕೆಟ್ನಲ್ಲಿ ಅಪಾರ ಆಸಕ್ತಿ ಇದ್ದ ಕಾರಣ ಕ್ರೀಡಾ ಕ್ಷೇತ್ರದತ್ತ ವಾಲಿದರು.
(4 / 9)
ಮತ್ತೊಂದು ವಿಷಯ ಏನೆಂದರೆ ರಾಹುಲ್ ಅವರ ತಂದೆಗೂ ಕ್ರಿಕೆಟ್ ಅಂದರೆ ತುಂಬಾ ಇಷ್ಟವಂತೆ. ಸ್ವತಃ ಕೆಎಲ್, ರವಿಚಂದ್ರನ್ ಅಶ್ವಿನ್ ಶೋನಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾಗಿ ಕ್ರಿಕೆಟ್ ಆಯ್ಕೆ ಮಾಡಿದ ಕಾರಣ ಅಪ್ಪನೂ ಖುಷಿಯಿಂದ ಸಮ್ಮತಿ ಸೂಚಿಸಿದ್ದರು ಎಂದು ಹೇಳಿದ್ದಾರೆ.
(5 / 9)
ಸತತ ಕಠಿಣ ಪರಿಶ್ರಮ ಪಟ್ಟಿರುವ ರಾಹುಲ್, ಕರ್ನಾಟಕ ತಂಡದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದರು. ಐಪಿಎಲ್‌ನಲ್ಲಿ ಆರ್ಸಿಬಿ ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದರು. ಇದೇ ಪ್ರದರ್ಶನಗಳಿಂದ ಭಾರತ ತಂಡಕ್ಕೂ ಲಗ್ಗೆ ಇಟ್ಟರು ರಾಹುಲ್. ಇದರ ಹಿಂದೆ ಸಾಕಷ್ಟು ಪರಿಶ್ರಮ ಅಡಗಿತ್ತು ಎಂಬುದು ವಿಶೇಷ.
(6 / 9)
ಓದಿನಲ್ಲೂ ಮುಂದಿದ್ದ ಕೆಎಲ್ ರಾಹುಲ್, 11ನೇ ವಯಸ್ಸಿನಿಂದಲೇ ಕ್ರಿಕೆಟ್ ಆಡುವುದನ್ನು ಗಂಭೀರವಾಗಿ ಪರಿಗಣಿಸಿದರು. ಅಂಡರ್-13 ಕ್ರಿಕೆಟ್ನಿಂದಲೇ ಪ್ರಮುಖ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದರು. ಸ್ನೇಹಿತ ಮಯಾಂಕ್ ಅಗರ್ವಾಲ್ ಕೂಡ ಅಂದಿನಿಂದಲೇ ಜೊತೆಗಿದ್ದರು.
(7 / 9)
2010ರಲ್ಲಿ ಕರ್ನಾಟಕದ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಕೆಎಲ್ ರಾಹುಲ್, 2014ರಲ್ಲಿ ಭಾರತ ತಂಡಕ್ಕೆ ಪ್ರವೇಶಿಸಿದರು. ಅಂದು ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 2016ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ, ಟಿ20 ಕ್ರಿಕೆಟ್‌ಗೆ ಡೆಬ್ಯು ಮಾಡಿದ್ದರು.
(8 / 9)
ಮೂರು ಫಾರ್ಮೆಟ್ನಲ್ಲೂ 50+ ಪಂದ್ಯಗಳಲ್ಲಿ ಕಣಕ್ಕಿಳಿದ ಆಟಗಾರರ ಪೈಕಿ ರಾಹುಲ್ ಕೂಡ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 50 ಪಂದ್ಯ ಆಡಿರುವ 2,863 ರನ್ ಗಳಿಸಿದ್ದಾರೆ. 75 ಏಕದಿನಗಳಲ್ಲಿ 2,820 ರನ್ ಮತ್ತು 72 ಟಿ20ಐ ಪಂದ್ಯಗಳಲ್ಲಿ 2,265 ರನ್ ಗಳಿಸಿದ್ದಾರೆ. ಒಟ್ಟು 17 ಶತಕ ಬಾರಿಸಿದ್ದಾರೆ.
ಇತರ ಗ್ಯಾಲರಿಗಳು