ಭಾರತ vs ಐರ್ಲೆಂಡ್: ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾವನ್ನು ಕಾಡಬಲ್ಲ ಐವರು ಡೇಂಜರಸ್‌ ಆಟಗಾರರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ Vs ಐರ್ಲೆಂಡ್: ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾವನ್ನು ಕಾಡಬಲ್ಲ ಐವರು ಡೇಂಜರಸ್‌ ಆಟಗಾರರು

ಭಾರತ vs ಐರ್ಲೆಂಡ್: ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾವನ್ನು ಕಾಡಬಲ್ಲ ಐವರು ಡೇಂಜರಸ್‌ ಆಟಗಾರರು

  • ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್‌ ತಂಡವು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಮೇಲ್ನೋಟಕ್ಕೆ ಐರ್ಲೆಂಡ್ ತಂಡ ಬಲಿಷ್ಠವಾಗಿಲ್ಲ. ಆದರೆ ತಂಡದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಿಸಬಲ್ಲ ಹಲವಾರು ಆಟಗಾರರಿದ್ದಾರೆ. ಆ ಐವರು ಆಟಗಾರರು ಯಾರು ಎಂಬುದನ್ನು ನೋಡೋಣ.

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಈ ತಂಡದಲ್ಲೂ ಬಲಿಷ್ಠ ಆಟಗಾರರಿದ್ದಾರೆ.. ಕರ್ಟಿಸ್ ಕ್ಯಾಂಫರ್ ಐರ್ಲೆಂಡ್‌ ತಂಡದ ಪ್ರಬಲ ಬ್ಯಾಟರ್‌ಗಳಲ್ಲಿ ಒಬ್ಬರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ, ಅವರು ಮಧ್ಯಮ ವೇಗದಲ್ಲಿ ಬೌಲಿಂಗ್ ಕೂಡಾ ಮಾಡುತ್ತಾರೆ. ಈ ಆಲ್‌ರೌಂಡರ್ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳಿಗೂ ಕಾಡಲಿದ್ದಾರೆ.
icon

(1 / 5)

ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಈ ತಂಡದಲ್ಲೂ ಬಲಿಷ್ಠ ಆಟಗಾರರಿದ್ದಾರೆ.. ಕರ್ಟಿಸ್ ಕ್ಯಾಂಫರ್ ಐರ್ಲೆಂಡ್‌ ತಂಡದ ಪ್ರಬಲ ಬ್ಯಾಟರ್‌ಗಳಲ್ಲಿ ಒಬ್ಬರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ, ಅವರು ಮಧ್ಯಮ ವೇಗದಲ್ಲಿ ಬೌಲಿಂಗ್ ಕೂಡಾ ಮಾಡುತ್ತಾರೆ. ಈ ಆಲ್‌ರೌಂಡರ್ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ತಂಡಗಳಿಗೂ ಕಾಡಲಿದ್ದಾರೆ.(AP)

ಮಾರ್ಕ್ ಅಡೈರ್: ಪಾಕಿಸ್ತಾನ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಭಾರತದ ವಿರುದ್ಧ ಆಡುವ ಮೊದಲೇ ಈ ಬೌಲರ್ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಮಾರ್ಕ್ ಟಿ20 ಸ್ವರೂಪದಲ್ಲಿ ತಮ್ಮ ತಂಡದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಹೊಸ ಚೆಂಡಿನೊಂದಿಗೆ ಸ್ವಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇದು ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಅಡ್ಡಿಯಾಗಬಹುದು.
icon

(2 / 5)

ಪಾಲ್ ಸ್ಟಿರ್ಲಿಂಗ್: ಐರ್ಲೆಂಡ್ ತಂಡದ ನಾಯಕ ತಂಡದ ಬ್ಯಾಟಿಂಗ್‌ನ ದೊಡ್ಡ ಭರವಸೆಯಾಗಿದ್ದಾರೆ. ಅವರು 2011ರ ಏಕದಿನ ವಿಶ್ವಕಪ್‌ನಲ್ಲಿಯೂ ಆಡಿದರು. ಚುಟುಕು ಸ್ವರೂಪದಲ್ಲಿ ಅವರು 3589 ರನ್ ಗಳಿಸಿದ್ದಾರೆ.
icon

(3 / 5)

ಜಾರ್ಜ್ ಡಾಕ್ರೆಲ್ ಭಾರತೀಯ ತಂಡದ ವಿರುದ್ಧ ಐರಿಷ್ ತಂಡಕ್ಕೆ ಮತ್ತೊಂದು ಅತ್ಯುತ್ತಮ ಅಸ್ತ್ರ. ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರೂ, ಡೆತ್ ಓವರ್‌ಗಳಲ್ಲಿ ಪ್ರಬಲ ಹೊಡೆತಗಳನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ಕೂಡ ಮಾಡಬಲ್ಲರು. ತಂಡದ ಪರ 130 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
icon

(4 / 5)

ಗರೆಥ್ ಡೆಲಾನಿ ಐರ್ಲೆಂಡ್ ತಂಡದ ಮತ್ತೊಬ್ಬ ಆಲ್‌ರೌಂಡರ್. ಮಧ್ಯಮ ಓವರ್‌ಗಳಲ್ಲಿ ಅವರು ಬೌಲಿಂಗ್ ಮತ್ತು ತಂಡಕ್ಕೆ ಅಗತ್ಯವಿದ್ದಾಗ ಬ್ಯಾಟಿಂಗ್‌ ಕೂಡಾ ಮಾಡಬಲ್ಲರು.
icon

(5 / 5)

ಇತರ ಗ್ಯಾಲರಿಗಳು