ಆರ್ಸಿಬಿ ಪರ ಫ್ಲಾಪ್ ಶೋ, ಬೇರೆ ತಂಡಗಳ ಪರ ಪವರ್ಫುಲ್ ಶೋ; ಐಪಿಎಲ್ನಲ್ಲಿ ಮಿಂಚ್ತಿರುವ ಬೆಂಗಳೂರು ಮಾಜಿ ಆಟಗಾರರು ಇವರೇ
- RCB EX Players: ಆರ್ಸಿಬಿ ತಂಡದಲ್ಲಿದ್ದಾಗ ಕಳಪೆ ಪ್ರದರ್ಶನ ನೀಡಿ, ಬೇರೆ ಫ್ರಾಂಚೈಸಿಗಳ ಪರ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
- RCB EX Players: ಆರ್ಸಿಬಿ ತಂಡದಲ್ಲಿದ್ದಾಗ ಕಳಪೆ ಪ್ರದರ್ಶನ ನೀಡಿ, ಬೇರೆ ಫ್ರಾಂಚೈಸಿಗಳ ಪರ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
(1 / 10)
ಆರ್ಸಿಬಿ ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ. ಉಳಿದ ಆರು ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸುತ್ತದೆ ಎನ್ನುವ ಖಚಿತತೆ ಇಲ್ಲ.ಕಳೆದ ಮೂರು ಪಂದ್ಯಗಳಲ್ಲಿ ಬ್ಯಾಟರ್ಗಳು ಸ್ವಲ್ಪ ಮಟ್ಟಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬೌಲರ್ಗಳು ಕಳಪೆ ಪ್ರದರ್ಶನ ನೀಡುತ್ತಿರುವುದನ್ನು ಮುಂದುವರೆಸಿದೆ.
(ANI)(2 / 10)
ಸಾಮಾಜಿಕ ಜಾಲತಾಣಗಳಲ್ಲಿ ಆರ್ಸಿಬಿ ಕುರಿತ ವಿಚಾರವೊಂದು ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಹಿಂದೆ ಆರ್ಸಿಬಿ ತಂಡವನ್ನು ತೊರೆದು ಬೇರೆ ತಂಡಗಳ ಪರ ಅಬ್ಬರಿಸುತ್ತಿರುವ ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಆರ್ಸಿಬಿ ತೊರೆದ ಬೇರೆ ಫ್ರಾಂಚೈಸಿಗಳ ಪರ ಅಬ್ಬರಿಸುತ್ತಿರುವ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
(3 / 10)
ಹೆನ್ರಿಚ್ ಕ್ಲಾಸೆನ್: ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿರುವ ಮತ್ತೊಬ್ಬ ಹೊಡಿಬಡಿ ಆಟಗಾರ ಹೆನ್ರಿಚ್ ಕ್ಲಾಸೆನ್ ಸಹ ಆರ್ಸಿಬಿ ತಂಡದಲ್ಲಿದ್ದವರೇ. 5.25 ಕೋಟಿಗೆ ಎಸ್ಆರ್ಹೆಚ್ ಸೇರಿರುವ ಕ್ಲಾಸೆನ್, ಬೆಂಕಿಬಿರುಗಾಳಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಆಡಿರುವ 7 ಪಂದ್ಯಗಳಲ್ಲಿ 198.52ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 268 ರನ್ ಚಚ್ಚಿದ್ದಾರೆ.
(ANI )(4 / 10)
ಟ್ರಾವಿಸ್ ಹೆಡ್: ಸನ್ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಟ್ರಾವಿಸ್ ಹೆಡ್, ಈ ಹಿಂದೆ ಇದ್ದದ್ದು ಆರ್ಸಿಬಿ ತಂಡದಲ್ಲಿ. 2016ರ ಆಕ್ಷನ್ನಲ್ಲಿ 50 ಲಕ್ಷಕ್ಕೆ ಆರ್ಸಿಬಿ ಸೇರಿದ್ದರು. 2024ರಲ್ಲಿ 6.5 ಕೋಟಿಗೆ ಎಸ್ಆರ್ಹೆಚ್ ಹೆಡ್ ಅವರನ್ನು ಖರೀದಿಸಿತು. ಈ ಐಪಿಎಲ್ನಲ್ಲಿ 6 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 324 ರನ್ ಬಾರಿಸಿದ್ದಾರೆ. 1 ಶತಕ, 2 ಅರ್ಧಶತಕ ಕೂಡ ಸೇರಿವೆ.
(AFP)(5 / 10)
ಶಿವಂ ದುಬೆ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫಿನಿಷರ್ ಶಿವಂ ದುಬೆ ಈ ಹಿಂದೆ ಆರ್ಸಿಬಿ ತಂಡದಲ್ಲಿದ್ದರು. ಆದರೆ ಕಳಪೆ ಪ್ರದರ್ಶನ ನೀಡಿದ್ದರು. ಆದರೀಗ ಸಿಎಸ್ಕೆ ಪರ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾರೆ. 2019 ಮತ್ತು 2020ರಲ್ಲಿ ಆರ್ಸಿಬಿ ಪರ ಆಡಿದ್ದರು. 2022ರಿಂದ ಈವರೆಗೂ ಸಿಎಸ್ಕೆ ಪರ ಆಡುತ್ತಿರುವ ದುಬೆ, 8 ಪಂದ್ಯಗಳಲ್ಲಿ 51.83ರ ಬ್ಯಾಟಿಂಗ್ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. 3 ಅರ್ಧಶತಕ ಶತಕ ಸೇರಿವೆ.
(PTI)(6 / 10)
ಕೆಎಲ್ ರಾಹುಲ್: ಎಲ್ಎಸ್ಜಿ ನಾಯಕ ಕೆಎಲ್ ರಾಹುಲ್ ತನ್ನ ಐಪಿಎಲ್ ವೃತ್ತಿಜೀವನ ಆರಂಭವಾಗಿದ್ದೇ ಆರ್ಸಿಬಿಯಿಂದ. ಆದರೆ 2013ರಲ್ಲಿ ಆರ್ಸಿಬಿ ಸೇರಿದರೂ ಅವರನ್ನು ಮತ್ತೆ ಕೈಬಿಡಲಾಯಿತು. 2016ರಲ್ಲಿ ಮತ್ತೆ ಆರ್ಸಿಬಿ ತಂಡಕ್ಕೆ ಮರು ಸೇರ್ಪಡೆಯಾದರೂ ಮತ್ತೆ ಕೈಬಿಡಲಾಯಿತು. ಬಳಿಕ ಪಂಜಾಬ್ ಕಿಂಗ್ಸ್ ತಂಡವನ್ನು ಕೂಡಿಕೊಂಡಿದ್ದರು. ಇದೀಗ ಎಲ್ಎಸ್ಜಿ ನಾಯಕನಾಗಿದ್ದಾರೆ. 8 ಪಂದ್ಯಗಳಲ್ಲಿ 302 ರನ್ ಗಳಿಸಿದ್ದಾರೆ.
(AFP)(7 / 10)
ಯುಜ್ವೇಂದ್ರ ಚಹಲ್: ಇತ್ತೀಚೆಗಷ್ಟೆ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡ ರಾಜಸ್ಥಾನ್ ರಾಯಲ್ಸ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್, ಪ್ರಸಕ್ತ ಐಪಿಎಲ್ನಲ್ಲಿ 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. ಈ ಹಿಂದೆ 2014-21ರವರೆಗೂ ಆರ್ಸಿಬಿ ಪರ ಆಡಿದ್ದರು. ಆದರೆ ಅವರನ್ನು ಉಳಿಸಿಕೊಳ್ಳಲು ವಿಫಲವಾಗಿತ್ತು.
(AP)(8 / 10)
ಮಾರ್ಕಸ್ ಸ್ಟೋಯ್ನಿಸ್: 2019ರಲ್ಲಿ ಆರ್ಸಿಬಿ ತಂಡದಲ್ಲಿದ್ದ ಮಾರ್ಕಸ್ ಸ್ಟೋಯ್ನಿಸ್, ಕಳೆದ ಮೂರು ಆವೃತ್ತಿಗಳಿಂದಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಆಡುತ್ತಿದ್ದಾರೆ. ತನ್ನ ಕಳೆದ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಶತಕ (124) ಸಿಡಿಸಿ ಮಿಂಚಿದರು. 2024ರ ಐಪಿಎಲ್ನಲ್ಲಿ ಆಡಿದ 8 ಪಂದ್ಯಗಳಲ್ಲಿ 254 ರನ್ ಬಾರಿಸಿದ್ದಾರೆ.
(AFP)(9 / 10)
ಹರ್ಷಲ್ ಪಟೇಲ್: 2023ರ ಐಪಿಎಲ್ನ ಮಿನಿ ಹರಾಜಿನಲ್ಲಿ ಹರ್ಷಲ್ ಪಟೇಲ್ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ಖರೀದಿಯಾದರು. ಈ ತಂಡದ ಪರ 13 ವಿಕೆಟ್ ಕಿತ್ತಿದ್ದು, ಪರ್ಪಲ್ ಕ್ಯಾಪ್ ರೇಸ್ನಲ್ಲಿದ್ದಾರೆ. 2021 ರಿಂದ 2023ರ ತನಕ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ್ದರು.
(AFP)ಇತರ ಗ್ಯಾಲರಿಗಳು