ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl 2023 Finals: ಈ ಆಟಗಾರರ ಮೇಲೆ ಎಲ್ಲರ ಕಣ್ಣು; ಐಪಿಎಲ್ ಫೈನಲ್ ಪಂದ್ಯದಲ್ಲಿ ಗೇಮ್ ಚೇಂಜರ್‌ಗಳು ಇವರೇ

IPL 2023 Finals: ಈ ಆಟಗಾರರ ಮೇಲೆ ಎಲ್ಲರ ಕಣ್ಣು; ಐಪಿಎಲ್ ಫೈನಲ್ ಪಂದ್ಯದಲ್ಲಿ ಗೇಮ್ ಚೇಂಜರ್‌ಗಳು ಇವರೇ

  • IPL 2023 Final: ಐಪಿಎಲ್ 2023ರ ಆವೃತ್ತಿಯ ಫೈನಲ್ ಪಂದ್ಯವು ಭಾನುವಾರ (ಮೇ 28)‌ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ (‌CSK) ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (GT) ತಂಡಗಳ ನಡುವೆ ಮಹತ್ವದ ಕಾದಾಟ ನಡೆಯಲಿದೆ. ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಹಲವು ಆಟಗಾರರು ಇಂದಿನ ಪಂದ್ಯದ ಕೇಂದ್ರಬಿಂದುವಾಗಿದ್ದಾರೆ.

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ತಲುಪಿದೆ. ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವನ್ನು ಸೋಲಿಸಿ ಚೆನ್ನೈ ಐಪಿಎಲ್ ಫೈನಲ್‌ಗೆ ಲಗ್ಗೆ ಹಾಕಿತ್ತು.
icon

(1 / 8)

ಫೈನಲ್‌ ಪಂದ್ಯದಲ್ಲಿ ಚೆನ್ನೈ ಮತ್ತು ಗುಜರಾತ್‌ ತಂಡದ ಕೆಲವು ಆಟಗಾರರು ಗೇಮ್ ಚೇಂಜರ್‌ಗಳಾಗಬಹುದು. ಪ್ರಸಕ್ತ ಆವೃತ್ತಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರು ಫೈನಲ್‌ನಲ್ಲಿ ಮಿಂಚುವ ಸಾಧ್ಯತೆ ಇದೆ.
icon

(2 / 8)

ಗುಜರಾತ್ ಟೈಟಾನ್ಸ್‌ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್‌, ಈ ಆವೃತ್ತಿಯಯಲ್ಲಿ ಸ್ಫೋಟಕ ಫಾರ್ಮ್‌ನಲ್ಲಿದ್ದಾರೆ. ಈಗಾಗಲೇ 3 ಶತಕಗಳನ್ನು ಸಿಡಿಸಿರುವ ಅವರು, 851 ರನ್‌ಗಳೊಂದಿಗೆ 2023ರ ಐಪಿಎಲ್‌ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ್ದಾರೆ. ಆ ಮೂಲಕ ಆರೇಂಜ್‌ ಕ್ಯಾಪ್‌ ಅನ್ನು ಬಹುತೇಕ ವಶಪಡಿಸಿಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿಯೂ ಇವರು ಅಬ್ಬರಿಸಿದರೆ ಅಚ್ಚರಿಯೇನಿಲ್ಲ.
icon

(3 / 8)

ಗುಜರಾತ್ ಟೈಟಾನ್ಸ್ ತಂಡದ ಸ್ಪಿನ್ನರ್ ರಶೀದ್ ಖಾನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲೂ ಶಕ್ತಿ ಪ್ರದರ್ಶಿಸಿದ್ದಾರೆ. ರಶೀದ್ 16 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಅವರು ಮೊಹಮ್ಮದ್ ಶಮಿ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಬ್ಯಾಟಿಂಗ್‌ನಲ್ಲೂ ಅಗತ್ಯ ಸಮಯದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ.
icon

(4 / 8)

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಡಿವೋನ್ ಕಾನ್ವೇ‌, ಐಪಿಎಲ್ 2023ರ ಆವೃತ್ತಿಯಲ್ಲಿ ಮಿಂಚುತ್ತಿದ್ದಾರೆ. ಈ ಋತುವಿನಲ್ಲಿ ಅವರು ಇದುವರೆಗೆ 15 ಪಂದ್ಯಗಳಲ್ಲಿ 625 ರನ್ ಗಳಿಸಿದ್ದಾರೆ. 
icon

(5 / 8)

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ ಮತೀಶ ಪತಿರಾನ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಡೆತ್ ಓವರ್‌ಗಳಲ್ಲಿ ಅವರು ಅಪಾಯಕಾರಿ ಎನಿಸಿದ್ದಾರೆ. ಪತಿರಾನ 11 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ.
icon

(6 / 8)

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ರುತುರಾಜ್ ಗಾಯಕ್ವಾಡ್ ಕೂಡ ಐಪಿಎಲ್ 2023ರಲ್ಲಿ ಅತ್ಯುತ್ತಮ ಋತುವನ್ನು ಕಂಡಿದ್ದಾರೆ. ಆಡಿದ 15 ಪಂದ್ಯಗಳಲ್ಲಿ 564 ರನ್ ಸಿಡಿಸಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅವರು ಏಳನೇ ಸ್ಥಾನದಲ್ಲಿದ್ದಾರೆ.
icon

(7 / 8)

ಫೈನಲ್‌ ಪಂದ್ಯದಲ್ಲಿ ಗೇಮ್‌ ಚೇಂಜರ್‌ಗಳಾಗಬಹುದಾದ ಆಟಗಾರರಿವರು
icon

(8 / 8)

ಫೈನಲ್‌ ಪಂದ್ಯದಲ್ಲಿ ಗೇಮ್‌ ಚೇಂಜರ್‌ಗಳಾಗಬಹುದಾದ ಆಟಗಾರರಿವರು(photos- iplt20.com)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು