ಟೀಮ್ ಇಂಡಿಯಾ ಹೆಡ್ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ಸ್ವೀಕರಿಸಲು ದಿನಾಂಕ ಫಿಕ್ಸ್
- Gautam Gambhir - head coach: ಟೀಮ್ ಇಂಡಿಯಾ ಹೆಡ್ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರ ಸ್ಥಾನ ತುಂಬಲು ಗೌತಮ್ ಗಂಭೀರ್ ಈ ದಿನಾಂಕದಂದು ಅಧಿಕಾರಕ್ಕೇರಲಿದ್ದಾರೆ.
- Gautam Gambhir - head coach: ಟೀಮ್ ಇಂಡಿಯಾ ಹೆಡ್ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರ ಸ್ಥಾನ ತುಂಬಲು ಗೌತಮ್ ಗಂಭೀರ್ ಈ ದಿನಾಂಕದಂದು ಅಧಿಕಾರಕ್ಕೇರಲಿದ್ದಾರೆ.
(1 / 7)
ಭಾರತೀಯ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಸ್ಥಾನ ಅಧಿಕಾರಕ್ಕೆ ಖಚಿತ ಎಂದು ಹಲವು ವರದಿಗಳು ಸೂಚಿಸಿವೆ. ಆದರೆ ಹೆಸರು ಅಧಿಕೃತವಾಗಿ ಘೋಷಿಸುವುದು ಮಾತ್ರ ಬಾಕಿ ಇದೆ ಎಂದು ಹೇಳಲಾಗಿದೆ.
(2 / 7)
ಈ ತಿಂಗಳ ಕೊನೆಯಲ್ಲಿ ಗಂಭೀರ್ ಹೆಸರನ್ನು ಅಧಿಕೃತವಾಗಿ ಬಿಸಿಸಿಐ ಘೋಷಿಸಲಿದೆ ಎಂದು ವರದಿಯಾಗಿದೆ. ಆದರೆ, ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರಯಾಣ ಮುಕ್ತಾಯದ ನಂತರ ಗಂಭೀರ್ ಅಧಿಕೃತ ಪ್ರಕಟಣೆಯಾಗಲಿದೆ.
(AFP)(3 / 7)
ಜೂನ್ 29ರವರೆಗೆ ಜರುಗುವ ಮಿನಿ ಸಮರದಲ್ಲಿ ಭಾರತ ತಂಡದ ಪ್ರಯಾಣ ಅಂತ್ಯಗೊಂಡ ತಕ್ಷಣವೇ ಹೊಸ ಮುಖ್ಯಕೋಚ್ ಹೆಸರು ಪ್ರಕಟಿಸುವ ನಿರೀಕ್ಷೆ ಇದೆ.
(KKR-X)(4 / 7)
2024ರ ಟಿ20 ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ಅಧಿಕಾರದ ಅವಧಿ ಕೊನೆಗೊಳ್ಳಲಿದ್ದು, ಗಂಭೀರ್, ದ್ರಾವಿಡ್ ಸ್ಥಾನ ತುಂಬಲಿದ್ದಾರೆ. ಗೌತಿ 2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
(KKR-X)(5 / 7)
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅವರನ್ನು ಗೌತಮ್ ಗಂಭೀರ್ ಬಯಸಿದರೆ ತಮ್ಮ ಕೋಚಿಂಗ್‌ನಲ್ಲಿ ತಮ್ಮ ಸಹಾಯಕ ಸಿಬ್ಬಂದಿಯಲ್ಲಿ ಉಳಿಸಿಕೊಳ್ಳಬಹುದು ಅಥವಾ ತೆಗೆದುಹಾಕಬಹುದು.
(AFP)(6 / 7)
ಗಂಭೀರ್ ಕಳೆದ 3 ವರ್ಷಗಳಿಂದ ಐಪಿಎಲ್‌ನಲ್ಲಿ ಮೆಂಟರ್ ಆಗಿ ಸೇವೆ ಸಲ್ಲಿಸಿದ್ದಾರೆ. 2022 ರಿಂದ 2023 ರವರೆಗೆ ಲಕ್ನೋ ಸೂಪರ್ ಜೈಂಟ್ಸ್ ಕೆಲಸ ಮಾಡಿದ್ದ ಗಂಭೀರ್, ತಂಡವನ್ನು ಸತತ ಪ್ಲೇಆಫ್ ಪ್ರವೇಶಿಸಲು ನೆರವಾಗಿದ್ದರು
(AFP)ಇತರ ಗ್ಯಾಲರಿಗಳು