Hardik Pandya: ಮುಂಬೈ ಇಂಡಿಯನ್ಸ್ ಸೋಲಿಗೆ ರೋಹಿತ್ ಶರ್ಮಾ ದೂಷಿಸಿದ ಹಾರ್ದಿಕ್ ಪಾಂಡ್ಯ
- Hardik Pandya on Rohit Sharma : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣ ಯಾರು ಎಂಬುದನ್ನು ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
- Hardik Pandya on Rohit Sharma : ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣ ಯಾರು ಎಂಬುದನ್ನು ನಾಯಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
(1 / 6)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 4 ವಿಕೆಟ್ಗಳ ಸೋಲನುಭವಿಸಿತು. ಒಟ್ಟಾರೆ ಟೂರ್ನಿಯಲ್ಲಿ ಲಕ್ನೋ 6ನೇ ಗೆಲುವು ಸಾಧಿಸಿದರೆ, ಮುಂಬೈ 7ನೇ ಸೋಲಿಗೆ ಶರಣಾಯಿತು.
(2 / 6)
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತ್ತು. ಲಕ್ನೋ 19.2 ಓವರ್ಗಳಲ್ಲಿ ಗೆದ್ದಿತ್ತು.
(AP)(3 / 6)
ಆದರೆ, ಈ ಪಂದ್ಯದ ನಂತರ ಸೋಲಿಗೆ ಕಾರಣ ಏನೆಂಬುದನ್ನು ಎಂಐ ನಾಯಕ ಹಾರ್ದಿಕ್ ಪಾಂಡ್ಯ ವಿವರಿಸಿದ್ದಾರೆ. ಸೋಲಿಗೆ ಆರಂಭಿಕ ರೋಹಿತ್ ಶರ್ಮಾ ಅವರೇ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.
(AFP)(4 / 6)
ಆರಂಭಿಕರು ಬೇಗನೇ ವಿಕೆಟ್ ಒಪ್ಪಿಸುವ ಕಾರಣ ತಂಡ ಚೇತರಿಸಿಕೊಳ್ಳಲು ಕಠಿಣವಾಯಿತು ಎಂದು ನಾನು ಭಾವಿಸುತ್ತೇನೆ. ಅಗ್ರ ಕ್ರಮಾಂಕದಲ್ಲಿ ಎಲ್ಲಾ ಕೊಡುಗೆ ನೀಡಬೇಕಾಗಿದೆ. ಯಾವ ಎಸೆತಗಳಲ್ಲಿ ರನ್ ಗಳಿಸಬೇಕು, ದಂಡಿಸಬೇಕು ಎಂಬುದನ್ನು ಅರಿಯಬೇಕು. ನನಗೆ ನಿಮ್ಮ ಮೇಲೆ ವಿಶ್ವಾಸ ಇದೆ ಎಂದು ಹಾರ್ದಿಕ್ ಹೇಳಿದ್ದಾರೆ.
(AFP)(5 / 6)
ರೋಹಿತ್ ಅವರನ್ನೇ ಪರೋಕ್ಷವಾಗಿ ದೂಷಿಸಿರುವ ಹಾರ್ದಿಕ್, ಆರಂಭಿಕರು ಉತ್ತಮ ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಸ್ಥಿರ ಪ್ರದರ್ಸನ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
(PTI)ಇತರ ಗ್ಯಾಲರಿಗಳು