ವಿರಾಟ್ ಕೊಹ್ಲಿಯಂಥಾ ಫಿಟ್‌ನೆಸ್‌ ನಿಮ್ಮದಾಗಬೇಕಾ; ಸ್ಟಾರ್ ಬ್ಯಾಟರ್‌ ಅನುಸರಿಸುವ ಆಹಾರಕ್ರಮ ಹಾಗೂ ಶಿಸ್ತು ನೀವೂ ಪಾಲಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿರಾಟ್ ಕೊಹ್ಲಿಯಂಥಾ ಫಿಟ್‌ನೆಸ್‌ ನಿಮ್ಮದಾಗಬೇಕಾ; ಸ್ಟಾರ್ ಬ್ಯಾಟರ್‌ ಅನುಸರಿಸುವ ಆಹಾರಕ್ರಮ ಹಾಗೂ ಶಿಸ್ತು ನೀವೂ ಪಾಲಿಸಿ

ವಿರಾಟ್ ಕೊಹ್ಲಿಯಂಥಾ ಫಿಟ್‌ನೆಸ್‌ ನಿಮ್ಮದಾಗಬೇಕಾ; ಸ್ಟಾರ್ ಬ್ಯಾಟರ್‌ ಅನುಸರಿಸುವ ಆಹಾರಕ್ರಮ ಹಾಗೂ ಶಿಸ್ತು ನೀವೂ ಪಾಲಿಸಿ

  • ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಶ್ವದ ಟಾಪ್‌ಕ್ಲಾಸ್‌ ಬ್ಯಾಟರ್‌ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮೈದಾನದಲ್ಲಿ ಕೊಹ್ಲಿ ಎಷ್ಟು ದಾಖಲೆಗಳನ್ನು ನಿರ್ಮಿಸಿ ಜಾಗತಿಕ ಮಟ್ಟದಲ್ಲಿ ಖ್ಯಾತರಾಗಿದ್ದಾರೋ, ವೈಯಕ್ತಿಕ ಬದುಕಿನಲ್ಲೂ ಫಿಟ್‌ನೆಸ್ ಸಂಬಂಧಿಸಿದಂತೆ ಅಷ್ಟೇ ಕಾಳಜಿ ವಹಿಸುತ್ತಾರೆ.

ತಮ್ಮ 15ಕ್ಕೂ ಹೆಚ್ಚು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನಲ್ಲಿ ಕೊಹ್ಲಿ ನಿರ್ಮಿಸಿರುವ ದಾಖಲೆಗಳು ಒಂದೆರಡಲ್ಲ.
icon

(1 / 8)

(instagram)

ನಿತ್ಯ ದಿನಚರಿಯಲ್ಲಿ ಆಹಾರ ಹಾಗೂ ಫಿಟ್‌ನೆಸ್ ವಿಚಾರವಾಗಿ ತಮ್ಮದೇ ನಿಯಮಗಳನ್ನು ಪಾಲಿಸುತ್ತಾರೆ. ತಮ್ಮ ಆಹಾರಕ್ರಮದ ಬಗ್ಗೆ ಅವರು ಟಿವಿ ಶೋ ಸೇರಿದಂತೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಬಹಿರಂಗಪಡಿಸಿದ್ದಾರೆ.
icon

(2 / 8)

ಪೌಷ್ಟಿಕಾಂಶಯುತ ಆಹಾರಕ್ಕೆ ಹೆಚ್ಚು ಒತ್ತು ನೀಡುವ ಕೊಹ್ಲಿ, ಕಟ್ಟುನಿಟ್ಟಿನ ಆಹಾರಕ್ರಮ ಅನುಸರಿಸುತ್ತಾರೆ. ಆ ಮೂಲಕ ಫಿಟ್‌ ಆಗಿದ್ದು, ಮೈದಾನದಲ್ಲಿ ಪಾದರಸದಂತೆ ಓಡಾಡುತ್ತಾರೆ. ಹಾಗಿದ್ದರೆ ವಿರಾಟ್‌ ಡಯಟ್‌ ಹಾಗೂ ಫಿಟ್‌ನೆಸ್‌ ಸೀಕ್ರೆಟ್‌ ಏನೇನು ಎಂಬುದನ್ನು ನೀವು ಕೂಡಾ ತಿಳಿದುಕೊಳ್ಳಿ.
icon

(3 / 8)

ವಿರಾಟ್‌ ಕೊಹ್ಲಿ ತಮ್ಮ ನಿತ್ಯ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುತ್ತಾರೆ. ವಿಮಾನದಲ್ಲಿ ಪ್ರಯಾಣಿಸುವ ವೇಳೆಯೂ ಕೊಹ್ಲಿ ಕೆಲವೊಂದು ಆಹಾರವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಕಾಫಿ ಸೆಟ್, ನಟ್ ಸೆಟ್ ಮತ್ತು ಪ್ರೋಟೀನ್ ಬಾರ್‌ನಂತಹ ಅಗತ್ಯ ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಪ್ರತಿ ಅರ್ಧಗಂಟೆಗೆ ಒಮ್ಮೆ ಅದನ್ನು ಸೇವಿಸುತ್ತಾರೆ.
icon

(4 / 8)

ಉತ್ತಮ ಆರೋಗ್ಯಕ್ಕಾಗಿ ಹೈಡ್ರೇಶನ್ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ನೀರು ಕುಡಿಯುತ್ತಾ ದೇಹವನ್ನು ಹಡ್ರೇಟೆಡ್‌ ಆಗಿರಿಸಿಕೊಳ್ಳಬೇಕು. ಇದು ಕೊಹ್ಲಿ ಪ್ರಮುಖ ಆದ್ಯತೆಯಾಗಿದೆ. 
icon

(5 / 8)

ತಮ್ಮ ಕೆಲಸಕ್ಕೆ ತಕ್ಕಂತೆ ಆಹಾರಕ್ರಮ ಪಾಲಿಸಬೇಕು. ಕೊಹ್ಲಿ ಆಟಗಾರನಾಗಿರುವುದರಿಂದ ತರಬೇತಿ ಮತ್ತು ಕ್ರಿಕೆಟ್‌ಗೆ ಹೊಂದಾಣಿಕೆಯಾಗುವ ಆಹಾರ ಯೋಜನೆ ಮಾಡಿಕೊಂಡಿದ್ದಾರೆ.
icon

(6 / 8)

ಕೊಹ್ಲಿ ತಮ್ಮ ಆಹಾರಕ್ಕೆ ಅನುಗುಣವಾಗಿ ತರಬೇತಿ ಪಡೆಯುತ್ತಾರೆ. ಜಿಮ್‌ ವರ್ಕೌಟ್‌ ಮಾಡುತ್ತಾರೆ. ಇದು ಅವರ ಫಿಟ್‌ನೆಟ್‌ಗೆ ನೆರವಾಗುತ್ತದೆ. ತರಬೇತಿ ಮತ್ತು ಆಹಾರಕ್ಕಾಗಿ ಅವರು ವೇಳಾಪಟ್ಟಿಯನ್ನು ನಿರ್ವಹಿಸುತ್ತಾರೆ.
icon

(7 / 8)

ಕೊಹ್ಲಿ ಪ್ರಮಾಣಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ಕೊಡುತ್ತಾರೆ. ಸಮತೋಲಿತ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ನೇರ ಪ್ರೋಟೀನ್‌ಗಳು ಒಳಗೊಂಡಿವೆ.
icon

(8 / 8)

ಇತರ ಗ್ಯಾಲರಿಗಳು