ಟಿ20 ವಿಶ್ವಕಪ್​ನಲ್ಲಿ ಮುರಿಯಬಹುದಾದ ಐದು ಶ್ರೇಷ್ಠ ದಾಖಲೆಗಳು; ರೇಸ್​​ನಲ್ಲಿ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್​ನಲ್ಲಿ ಮುರಿಯಬಹುದಾದ ಐದು ಶ್ರೇಷ್ಠ ದಾಖಲೆಗಳು; ರೇಸ್​​ನಲ್ಲಿ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್

ಟಿ20 ವಿಶ್ವಕಪ್​ನಲ್ಲಿ ಮುರಿಯಬಹುದಾದ ಐದು ಶ್ರೇಷ್ಠ ದಾಖಲೆಗಳು; ರೇಸ್​​ನಲ್ಲಿ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್

T20 World Cup 2024 Records: ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಡೇವಿಡ್ ವಾರ್ನರ್ ಸೇರಿದಂತೆ ಹಲವರು ನೂತನ ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಲು ಸಜ್ಜಾಗಿದ್ದಾರೆ. ಶ್ರೀಲಂಕಾದ ಮಹೇಲಾ ಜಯವರ್ಧನೆ ಟೂರ್ನಿಯಲ್ಲಿ ಈವರೆಗೆ 111 ಬೌಂಡರಿ ಬಾರಿಸಿದ್ದಾರೆ. ವಿರಾಟ್ ಟಿ20 ವಿಶ್ವಕಪ್​ನಲ್ಲಿ 103 ಬೌಂಡರಿ ಬಾರಿಸಿದ್ದಾರೆ. ಆದ್ದರಿಂದ ಕೊಹ್ಲಿ ಇನ್ನೂ 9 ಬೌಂಡರಿ ಹೊಡೆದರೆ ಜಯವರ್ಧನೆ ದಾಖಲೆ ಉಡೀಸ್ ಆಗಲಿದೆ. ರೋಹಿತ್ ಶರ್ಮಾ (91 ಬೌಂಡರಿ) ಮತ್ತು ಡೇವಿಡ್ ವಾರ್ನರ್ (86 ಬೌಂಡರಿ) ಕೂಡ ಜಯವರ್ಧನೆ ಅವರ ದಾಖಲೆಯನ್ನು ಮುರಿಯಬಹುದು. ಆದರೆ ಇಬ್ಬರೂ ಕ್ರಮವಾಗಿ 21, 26 ಬೌಂಡರಿಗಳ ಅಗತ್ಯ ಇದೆ.
icon

(1 / 5)

Most Catches: ಟಿ20 ವಿಶ್ವಕಪ್ ಇತಿಹಾಸದಲ್ಲಿ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪರ್ ಅಲ್ಲದೆ ಫೀಲ್ಡರ್ ಆಗಿ 23 ಕ್ಯಾಚ್​​​ಗಳನ್ನು ಪಡೆದಿದ್ದಾರೆ. ಡೇವಿಡ್ ವಾರ್ನರ್ ಈ ದಾಖಲೆ ಮುರಿಯವ ಸಾಧ್ಯತೆ ಇದೆ. ಆಸೀಸ್ ಸ್ಟಾರ್ ಟಿ20 ವಿಶ್ವಕಪ್​​ನಲ್ಲಿ 21 ಕ್ಯಾಚ್ ಪಡೆದಿದ್ದಾರೆ. ವಾರ್ನರ್ ಇನ್ನೂ 3 ಕ್ಯಾಚ್ಗಳನ್ನು ಹಿಡಿದರೆ ಎಬಿಡಿ ದಾಖಲೆ ಬ್ರೇಕ್ ಮಾಡಲಿದ್ದಾರೆ. ರೋಹಿತ್ (16), ಗ್ಲೆನ್ ಮ್ಯಾಕ್ಸ್​ವೆಲ್ (16) ಮತ್ತು ಕೇನ್ ವಿಲಿಯಮ್ಸನ್ (15) ಈ ದಾಖಲೆಯನ್ನು ಮುರಿಯುವ ರೇಸ್​ನಲ್ಲಿದ್ದಾರೆ.
icon

(2 / 5)

ಟಿ20 ವಿಶ್ವಕಪ್​​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2014 ರಲ್ಲಿ ಕೊಹ್ಲಿ 319 ರನ್ ಗಳಿಸಿದ್ದರು. ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿ ಹಾಗೆಯೇ ಉಳಿದುಕೊಂಡಿದೆ. ಹಾಗಾಗಿ ಕೊಹ್ಲಿ ಅವರ 319 ರನ್ ದಾಖಲೆ ಈ ಬಾರಿ ಉಡೀಸ್ ಆಗುತ್ತದೆ ಎಂದು ಹೇಳಲಾಗುತ್ತಿದೆ.
icon

(3 / 5)

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪ್ರಸ್ತುತ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ವಿಶ್ವ ಚಾಂಪಿಯನ್ ಆಗಿದೆ. 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​ ಮತ್ತು ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ, ಟಿ20 ಚಾಂಪಿಯನ್ ಆದರೆ ಒಂದೇ ಸಮಯದಲ್ಲಿ ಎಲ್ಲಾ 3 ಸ್ವರೂಪಗಳಲ್ಲಿ ವಿಶ್ವ ಚಾಂಪಿಯನ್ ಆದ ಮೊದಲ ತಂಡವಾಗಲಿದೆ.
icon

(4 / 5)

ಟಿ20 ವಿಶ್ವಕಪ್​ನಲ್ಲಿ ಕ್ರಿಸ್​ಗೇಲ್ ವೇಗದ ಶತಕ ದಾಖಲಿಸಿದ್ದಾರೆ. ಅವರು 47 ಎಸೆತಗಳಲ್ಲಿ ನೂರರ ಗಡಿ ದಾಟಿದ್ದರು. ಆದರೀಗ ವೆಸ್ಟ್​ ಇಂಡೀಸ್​ನ ಸಣ್ಣ ಮೈದಾನಗಳಲ್ಲಿ ಸಾಕಷ್ಟು ರನ್ ಗಳಿಸುವ ಅವಕಾಶ ಇದೆ. ಹಾಗಾಗಿ ಈ ಸಲ ಗೇಲ್ ದಾಖಲೆ ಮುರಿಯುವ ಸಾಧ್ಯತೆ ಇದೆ.
icon

(5 / 5)

ಇತರ ಗ್ಯಾಲರಿಗಳು