ಕನ್ನಡ ಸುದ್ದಿ  /  Photo Gallery  /  Cricket News How Much Do Umpires Earn For Officiating Umpires Salary Bonus In Ipl Odi T20 Test Matchs Prs

Cricket Umpires Salaries: ನಿಂತಲ್ಲೇ ದುಡ್ಡಿನ ಸುರಿಮಳೆ; ಕ್ರಿಕೆಟ್​​​ ಅಂಪೈರ್​​ಗಳ ಸಂಬಳ ಎಷ್ಟು, ಆಯ್ಕೆ ಹೇಗೆ?

  • Cricket Umpires Salary: ಕ್ರೀಡೆ ಎಂದ ಮೇಲೆ ತೀರ್ಪುಗಾರರು/ಅಂಪೈರ್​ಗಳ ಅಗತ್ಯ. ಅದರಂತೆ ಕ್ರಿಕೆಟ್​​​​ನಲ್ಲೂ ಅಂಪೈರ್​​ಗಳ ಪಾತ್ರ ದೊಡ್ಡದಿದೆ. ಎಷ್ಟೇ ಬಿಸಿಲು ಇದ್ದರೂ ಮೈದಾನದಲ್ಲಿ ನಿಂತಲ್ಲೇ ನಿಂತು, ಕಾರ್ಯ ನಿರ್ವಹಿಸುತ್ತಾರೆ. ಹಾಗಾದರೆ, ಕ್ರಿಕೆಟ್ ಅಂಪೈರ್​​ಗಳ ವೇತನ ಎಷ್ಟು? ಅಂಪೈರ್ ಆಗುವುದು ಹೇಗೆ? ಏನೆಲ್ಲಾ ಅರ್ಹತೆಗಳಿರಬೇಕು ನೋಡೋಣ ಬನ್ನಿ.

ಕ್ರಿಕೆಟ್​ ಅಂಪೈರ್​ ಆಗೋದು ಹೇಗೆ? ಕೌಶಲ್ಯ ಏನೆಲ್ಲಾ ಇರಬೇಕು? ಅಂಪೈರ್ ಆಗಲು ಅರ್ಹತೆ ಏನು? ಬಿಸಿಸಿಐ ಅಂಪೈರ್​, ಐಸಿಸಿ ಅಂಪೈರ್ ಸ್ಯಾಲರಿ, ಐಪಿಎಲ್​ ಅಂಪೈರ್​ಗಳ ಸಂಬಳ ಎಷ್ಟು? ಅಂಪೈರ್​​ಗೆ ಏಜ್​ ಲಿಮಿಟ್​ ಇದಿಯಾ? ಈ ಕುರಿತ ಸಂಪೂರ್ಣ ವರದಿ ಮುಂದಿನಂತೆ ಇದೆ.
icon

(1 / 11)

ಏನೆಲ್ಲಾ ಕೌಶಲ್ಯತೆ ಇರಬೇಕು?ಅಂಪೈರ್​​ ಆಗಲು ವಿದ್ಯಾರ್ಹತೆ ಕಡ್ಡಾಯವಲ್ಲ. ಆದರೆ ಓದಲು, ಬರೆಯಲು ಉತ್ತಮವಾಗಿ ಬರಬೇಕು. ಅಂತಾರಾಷ್ಟ್ರೀಯ ಕ್ರಿಕೆಟ್​ನ ಅಂಪೈರ್ ಆಗಬೇಕು ಅಂದರೆ ಇಂಗ್ಲೀಷ್ ಭಾಷೆ ಕಡ್ಡಾಯ. ಫಿಟ್​ನೆಸ್​, ಕಣ್ಣಿನ ದೃಷ್ಟಿ, ಕಿವಿಯ ಗ್ರಹಣ ಶಕ್ತಿ ತುಂಬಾ ಸೂಕ್ಷ್ಮವಾಗಿ ಇರಬೇಕು.
icon

(2 / 11)

ಅಂಪೈರ್​ ಆಗೋದೇಗೆ?ಅಂಪೈರ್​ ಆಗಬೇಕೆಂದರೆ, ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಇರುತ್ತದೆ. ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​​ಗಳು ಈ ಪರೀಕ್ಷೆ ಆಯೋಜಿಸುತ್ತವೆ. ಪರೀಕ್ಷೆಗೂ ಮುನ್ನ 4 ದಿನಗಳ ತರಬೇತಿ ಇರುತ್ತದೆ. 3 ದಿನಗಳಲ್ಲಿ 42 ನಿಯಮಗಳ ಕುರಿತು ತರಗತಿ, ಕೊನೆಯ ದಿನ ಪರೀಕ್ಷೆ ಇರುತ್ತದೆ.
icon

(3 / 11)

ಇಲ್ಲಿ 3 ಸುತ್ತಿನ ಪರೀಕ್ಷೆಗಳು ಇರುತ್ತವೆ. ಮೊದಲ ಸುತ್ತಿನಲ್ಲಿ ಬರವಣಿಗೆ. ಇಲ್ಲಿ ಉತ್ತೀರ್ಣರಾದರೆ ಮಾತ್ರ ಪ್ರಾಕ್ಟಿಕಲ್​ ಪರೀಕ್ಷೆ, ವೈವಾಗೆ ಅರ್ಹರು. ಇಲ್ಲಿ ಪಾಸ್​ ಆದರೆ, ರಾಜ್ಯ ಮಟ್ಟದ ಅಂಪೈರ್ ಆಗುತ್ತಾರೆ. ಹಾಗಾದರೆ ಬಿಸಿಸಿಐ ಅಂಪೈರ್​​ ಆಗೋದು ಹೇಗೆ?
icon

(4 / 11)

ಬಿಸಿಸಿಐ ಹಂತದಲ್ಲಿ ಲೆವೆಲ್​-1 ಪ್ರೋಗ್ರಾಮ್,​ ರಿಫ್ರೆಶರ್​ ಕೋರ್ಸ್​ ಇರುತ್ತದೆ. ಆದರೆ ಲೆವೆಲ್​-1 ಮುಗಿದ ವರ್ಷದೊಳಗೆ ರಿಫ್ರೆಶರ್​ ಕೋರ್ಸ್​ ಮುಗಿಸಬೇಕು. ಕೊನೆದಾಗಿ ಲೆವೆಲ್​-2 ಪ್ರೋಗ್ರಾಮ್​ ಮುಗಿಸಬೇಕು. ನಂತರ ದೇಶೀಯ ಕ್ರಿಕೆಟ್​ನಲ್ಲಿ ಅಂಪೈರ್​ ಆಗಿ ಸೇವೆ ಸಲ್ಲಿಸಬಹುದು.
icon

(5 / 11)

ಬಿಸಿಸಿಐ ಅಂಪೈರ್​ ಸಂಬಳ ಎಷ್ಟುಅನುಭವ ಹೊಂದಿರುವ ಅಂಪೈರ್​ಗೆ (ಏಕದಿನ, ಟೆಸ್ಟ್ ಕ್ರಿಕೆಟ್​​​) ಮ್ಯಾಚ್​ವೊಂದಕ್ಕೆ 40 ಸಾವಿರ ಇರುತ್ತದೆ. ಅನುಭವಿ ಅಂಪೈರ್​ಗೆ (ಟಿ20ಗೆ ಮಾತ್ರ) ಪಂದ್ಯವೊಂದಕ್ಕೆ 20 ಸಾವಿರ ಮಾತ್ರ ಇರುತ್ತದೆ. ಹೊಸಬರು, ಅನಾನುಭವಿ ಅಂಪೈರ್ಸ್​​ಗೆ​ (ಏಕದಿನ, ಟೆಸ್ಟ್ ಕ್ರಿಕೆಟ್​​​) ಪಂದ್ಯವೊಂದಕ್ಕೆ 30 ಸಾವಿರ ಇರುತ್ತದೆ. ಹಾಗೆಯೇ ಹೊಸಬರು, ಅನಾನುಭವಿ ಅಂಪೈರ್​​ಗಳು (ಟಿ20ಗೆ) ಪಂದ್ಯವೊಂದಕ್ಕೆ 15 ಸಾವಿರ ವೇತನ ಪಡೆಯುತ್ತಾರೆ.
icon

(6 / 11)

ಅಂತಾರಾಷ್ಟ್ರೀಯ ಕ್ರಿಕೆಟ್​ ಅಂಪೈರ್​ ಸಂಬಳ ಎಷ್ಟು?ಐಸಿಸಿ ಅಂಪೈರ್​ಗಳಿಗೆ ದೇಶೀಯ ಕ್ರಿಕೆಟ್​ನ ಅಂಪೈರ್​ಗಿಂತ ಹೆಚ್ಚಿನ ವೇತನ ಇರಲಿದೆ. ಅನುಭವಿ ಹಾಗೂ ಟಾಪ್​ ಅಂಪೈರ್​​ಗಳಿಗೆ 45 ಸಾವಿರ ಡಾಲರ್ ವಾರ್ಷಿಕ ವೇತನ ಇರಲಿದೆ. ಅಂದರೆ, 35 ಲಕ್ಷ ರೂಪಾಯಿಗೂ ಹೆಚ್ಚಿರುತ್ತದೆ. ಆದರೆ ಹೊರಬರಿಗೆ 35 ಸಾವಿರ ಡಾಲರ್​ ವಾರ್ಷಿಕ ವೇತನ ಇರಲಿದೆ. ಅಂದರೆ 25 ಲಕ್ಷ ರೂಪಾಯಿಗೂ ಹೆಚ್ಚು.
icon

(7 / 11)

ಇಷ್ಟೇ ಅಲ್ಲದೆ ಪ್ರತಿ ಪಂದ್ಯಕ್ಕೂ ವೇತನ ಇರುತ್ತದೆ. ಅನುಭವಿ, ಹೊಸಬರಿಗೂ ಪ್ರತಿ ಟೆಸ್ಟ್ ಪಂದ್ಯಕ್ಕೆ 5000 ಡಾಲರ್ (4 ಲಕ್ಷಕ್ಕೂ ಹೆಚ್ಚು), ಏಕದಿನ 3000 (2.50 ಲಕ್ಷಕ್ಕೂ ಹೆಚ್ಚು) ಡಾಲರ್​, ಟಿ20 ಕ್ರಿಕೆಟ್​ 1500 ಡಾಲರ್ (1.25 ಲಕ್ಷಕ್ಕೂ ಹೆಚ್ಚು) ವೇತನ ಇರಲಿದೆ. 
icon

(8 / 11)

ಹಾಗೂ ಪ್ರತಿ ಐಸಿಸಿ ಟೂರ್ನಿಗಳಲ್ಲಿ ಪ್ರತಿ ಪಂದ್ಯಕ್ಕೆ 3000 ಸಾವಿರ ಡಾಲರ್​ ಇರಲಿದೆ. ಸಂಬಳ ಮಾತ್ರವಲ್ಲದೆ, ಪ್ರಯಾಣದ ಖರ್ಚನ್ನೂ ಐಸಿಸಿಯೇ ಪಾವತಿಯೇ ಪಾವತಿಸಲಿದೆ. ವರ್ಷಕ್ಕೊಮ್ಮೆ ಪ್ರವಾಸಕ್ಕೂ ವ್ಯವಸ್ಥೆ ಮಾಡಿಕೊಡುತ್ತದೆ. 
icon

(9 / 11)

ಐಪಿಎಲ್​ ಅಂಪೈರ್​ಗಳಿಗೂ ದುಡ್ಡಿ ಹೊಳೆಯನ್ನೇ ಹರಿಸಲಾಗುತ್ತದೆ. ಪ್ರತಿ ಪಂದ್ಯಕ್ಕೆ ಐಪಿಎಲ್​ ಅಂಪೈರ್​ಗಳಿಗೆ 2,800 ಡಾಲರ್​ ವೇತನ ಸಿಗಲಿದೆ. ಐಸಿಸಿ ಗುರುತಿಸಲ್ಪಟ್ಟ ಅಂಪೈರ್​ಗಳೇ IPL​ನಲ್ಲಿ ಕಾರ್ಯ ನಿರ್ವಹಿಸುತ್ತಾರೆ.
icon

(10 / 11)

ವಯೋಮಾನ: ಅಂಪೈರ್​ ಆಗಿ ನೇಮಕವಾಗಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಬಿಸಿಸಿಐ ನಡೆಸುವ ಲೆವೆಲ್​​-1ರಲ್ಲಿ ಪಾಲ್ಗೊಳ್ಳೋಕೆ 40 ವರ್ಷದ ಒಳಗಿನವರಾಗಿರಬೇಕು. ಹಾಗೆಯೇ ಬಿಸಿಸಿಐ ಲೆವೆಲ್​-2 ಪರೀಕ್ಷೆಯಲ್ಲಿ ಪಾಲ್ಗೊಳ್ಳಲು 45 ವರ್ಷದ ಒಳಗಿರಬೇಕು. ಅಂಪೈರ್​​ ನಿವೃತ್ತಿ ವಯಸ್ಸು 60 ವರ್ಷ.
icon

(11 / 11)

IPL_Entry_Point

ಇತರ ಗ್ಯಾಲರಿಗಳು