Mitchell Marsh: ಸೂಪರ್-8 ಪ್ರವೇಶಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ; ನಿಷೇಧದ ಭೀತಿಯಲ್ಲಿ ಮಿಚೆಲ್ ಮಾರ್ಷ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mitchell Marsh: ಸೂಪರ್-8 ಪ್ರವೇಶಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ; ನಿಷೇಧದ ಭೀತಿಯಲ್ಲಿ ಮಿಚೆಲ್ ಮಾರ್ಷ್

Mitchell Marsh: ಸೂಪರ್-8 ಪ್ರವೇಶಿಸಿದ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ; ನಿಷೇಧದ ಭೀತಿಯಲ್ಲಿ ಮಿಚೆಲ್ ಮಾರ್ಷ್

  • Mitchell Marsh: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಸೂಪರ್​ 8 ಹಂತದ ಪಂದ್ಯಗಳಿಗೂ ಮುನ್ನ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿದೆ. ತಂಡದ ನಾಯಕ ನಿಷೇಧದ ಭೀತಿಗೆ ಸಿಲುಕಿದ್ದಾರೆ.

ಟಿ20 ವಿಶ್ವಕಪ್ 2024 ಲೀಗ್ ಹಂತದ ಮುಕ್ತಾಯದ ಹಂತ ತಲುಪಿದೆ. ಅಲ್ಲದೆ, ಸೂಪರ್​​-8 ಸುತ್ತಿನ ಪಂದ್ಯಗಳ ಬಗ್ಗೆಯೂ ಸ್ಪಷ್ಟವಾದ ಚಿತ್ರಣ ಸಿಗುತ್ತಿದೆ. ಯಾವೆಲ್ಲಾ ತಂಡಗಳು ಸೂಪರ್-8ಗೆ ಅರ್ಹತೆ ಪಡೆಯಲಿವೆ ಎಂಬುದರ ಕುರಿತು ಅಂದಾಜು ಸಿಕ್ಕಿದೆ.
icon

(1 / 8)

(AFP)

ಭಾರತ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ತಂಡಗಳು ಈಗಾಗಲೇ ಸೂಪರ್​​-8 ಪ್ರವೇಶಿಸಿವೆ. ಬಿ ಗುಂಪಿನಲ್ಲಿರುವ ಆಸೀಸ್​, ಆಡಿರುವ 3 ಪಂದ್ಯಗಳಲ್ಲಿ ಗೆದ್ದಿದ್ದು, ಅಗ್ರಸ್ಥಾನ ಪಡೆದಿವೆ. ಆದರೆ ಸೂಪರ್-8 ಪಂದ್ಯಕ್ಕೂ ಮುನ್ನ ಆಸೀಸ್​ ಚಿಂತೆಗೊಳಗಾಗಿದೆ.
icon

(2 / 8)

ತನ್ನ ನಾಲ್ಕನೇ ಲೀಗ್​ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ, ಅದಕ್ಕೂ ಮುನ್ನವೇ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್​​ಗೆ ಐಸಿಸಿ ಖಡಕ್ ಸೂಚನೆ ನೀಡಿದೆ. ಸ್ಕಾಟ್ಲೆಂಡ್ ವಿರುದ್ಧ ಐಸಿಸಿ ವಿರುದ್ಧ ಆಸೀಸ್,​ ಉದ್ದೇಶಪೂರ್ವಕವಾಗಿ ಸೋತರೆ 2 ಪಂದ್ಯಗಳಿಂದ ನಿಷೇಧವಾಗಲಿದ್ದಾರೆ.
icon

(3 / 8)

(PTI)

ಆಸ್ಟ್ರೇಲಿಯಾ ತಂಡದ ಕೈಯಲ್ಲಿ ಇಂಗ್ಲೆಂಡ್ ಭವಿಷ್ಯ ನಿಂತಿದೆ. ಆದರೆ, ಸ್ಕಾಟ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಸೋತರೆ, ಇಂಗ್ಲೆಂಡ್​ ಸೂಪರ್​-8 ಹಂತಕ್ಕೆ ಪ್ರವೇಶಿಸಲು ಅವಕಾಶ ನೀಡಿದಂತಾಗುತ್ತದೆ. ಸ್ಕಾಟ್ಲೆಂಡ್​ ಈ ಪಂದ್ಯ ಗೆದ್ದರೆ ಸೂಪರ್​-8 ಪ್ರವೇಶಿಸಲಿದೆ. ಇದರೊಂದಿಗೆ ಇಂಗ್ಲೆಂಡ್​ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
icon

(4 / 8)

ಬಿ ಗುಂಪಿನಲ್ಲಿ ಇಂಗ್ಲೆಂಡ್ 2 ಪಂದ್ಯಗಳನ್ನಾಡಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾದರೆ, ಇನ್ನೊಂದು ಪಂದ್ಯದಲ್ಲಿ ಸೋತಿದೆ. ಪ್ರಸ್ತುತ 1 ಅಂಕ ಸಂಪಾದಿಸಿರುವ ಇಂಗ್ಲೆಂಡ್, 1 ಅಂಕ ಮಾತ್ರ ಇದೆ. ಹೀಗಿದ್ದಾಗ ಆಸೀಸ್ ವಿರುದ್ಧ ಸ್ಕಾಟ್ಲೆಂಡ್ ಜಯಿಸಿದರೆ, ಇಂಗ್ಲೆಂಡ್ ಮುಂದಿನ ಹಂತಕ್ಕೆ ಹೋಗುವ ಕನಸು ಭಗ್ನವಾಗಲಿದೆ. 
icon

(5 / 8)

ಸ್ಕಾಟ್ಲೆಂಡ್ ತಂಡವನ್ನು ಆಸೀಸ್​ ಕಡಿಮೆ ಅಂತರದಿಂದ ಸೋಲಿಸಿದರೂ ಇಂಗ್ಲೆಂಡ್​ನ ಕನಸು ಭಗ್ನವಾಗಬಹುದು. ಏಕೆಂದರೆ ಸ್ಕಾಟ್ಲೆಂಡ್ 2 ಜಯದೊಂದಿಗೆ +2.164 ರನ್ ರೇಟ್ ಹೊಂದಿದೆ. ಆದರೆ ಇಂಗ್ಲೆಂಡ್ ರನ್ ರೇಟ್ -1.800 ಆಗಿದೆ. ಆದ್ದರಿಂದ ಮುಂದಿನ 2ರಲ್ಲಿ ಇಂಗ್ಲೆಂಡ್ ಬರಿ ಗೆಲುವಲ್ಲ, ದೊಡ್ಡ ಗೆಲುವು ಸಾಧಿಸಬೇಕು.
icon

(6 / 8)

(AP)

ಹೀಗಾಗಿ, ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತು ಮತ್ತೊಂದು ತಂಡದ ಮೇಲೆ ಪರಿಣಾಮ ಬೀರುವಂತೆ ಮಾಡಿದರೆ, ನಾಯಕನನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗುತ್ತದೆ. ಅವರನ್ನು 2 ಪಂದ್ಯಗಳಿಂದ ನಿಷೇಧ ಏರಬಹುದು. ಹೀಗಾಗಿ ಸೂಪರ್​-8 ಪಂದ್ಯಗಳಲ್ಲಿ ಎರಡು ಪಂದ್ಯಗಳಿಂದ ಬ್ಯಾನ್ ಆಗಬಹುದು.
icon

(7 / 8)

ಅಪರಾಧದ ಗಂಭೀರತೆ ಅವಲಂಬಿಸಿ, ಪಂದ್ಯದ ಶುಲ್ಕದ ಕನಿಷ್ಠ ಶೇ.50 ರಷ್ಟು ದಂಡವನ್ನು ಸಹ ವಿಧಿಸಬಹುದಾಗಿದೆ. ಇದರೊಂದಿಗೆ ಮಾರ್ಷ್, ಗರಿಷ್ಠ 4 ಡಿಮೆರಿಟ್ ಅಂಕ ಮತ್ತು 2 ಅಮಾನತು ಅಂಕಗಳೊಂದಿಗೆ ಮೊದಲ ಎರಡು ಸೂಪರ್ 8 ಪಂದ್ಯಗಳಿಂದ ಹೊರಬೀಳಬಹುದು.
icon

(8 / 8)

ಇತರ ಗ್ಯಾಲರಿಗಳು