ಕನ್ನಡ ಸುದ್ದಿ  /  Photo Gallery  /  Cricket News Icc Proposed Revenue Distribution Model India Gets Largest Share As Pcb Ecb Australia Gets Least Jra

ICC: ಐಸಿಸಿಯಿಂದ ಭಾರತಕ್ಕೆ ಸಿಂಹಪಾಲು; ಪ್ರಸ್ತಾವಿತ ಆದಾಯ ಹಂಚಿಕೆಯಲ್ಲಿ ಪಿಸಿಬಿಗೆ ಇಷ್ಟೇ ಇಷ್ಟು, ಬಿಸಿಸಿಐಗೆ ಬೆಟ್ಟದಷ್ಟು

  • ICC Revenue Distribution Model: ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐ ಇನ್ನಷ್ಟು ಶ್ರೀಮಂತವಾಗಲಿದೆ. ಮುಂದಿನ 4 ವರ್ಷಗಳವರೆಗೆ ಐಸಿಸಿ ಅಂದಾಜಿಸಿರುವ ಹೊಸ ಆದಾಯ ವಿತರಣಾ ಮಾದರಿಯಡಿ, ಬಿಸಿಸಿಐಗೆ ಭರ್ಜರಿ ಪಾಲು ಸಿಗುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಐಸಿಸಿಯ ನಿವ್ವಳ ಆದಾಯದ ಶೇ.40ರಷ್ಟು ಬಿಸಿಸಿಐಗೆ ಸೇರುವ ಸಾಧ್ಯತೆ ಇದೆ.

ಐಸಿಸಿಯ ಹೊಸ ಆದಾಯ ಹಂಚಿಕೆ ಮಾದರಿ ಹೀಗಿದೆ
icon

(1 / 8)

ಐಸಿಸಿಯ ಹೊಸ ಆದಾಯ ಹಂಚಿಕೆ ಮಾದರಿ ಹೀಗಿದೆ

ಮುಂದಿನ 4 ವರ್ಷಗಳವರೆಗೆ ICC ಹೊಸ ಆದಾಯ ವಿತರಣಾ ಮಾದರಿಯನ್ನು ರಚಿಸಿದೆ. ಈ ಆದಾಯ ವಿತರಣಾ ಮಾದರಿಯ ಅಡಿಯಲ್ಲಿ ಎಲ್ಲಾ ದೇಶಗಳ ಪಾಲನ್ನು ಸಹ ನಿರ್ಧರಿಸಲಾಗಿದೆ. ಇದರ ಪ್ರಕಾರ ಬಿಸಿಸಿಐಗೆ ಸಿಂಹಪಾಲು ಸಿಗಲಿದೆ.  2024ರಿಂದ 2027ರವರೆಗೆ 4 ವರ್ಷಗಳಲ್ಲಿ 600 ಮಿಲಿಯನ್ ಡಾಲರ್ (ಅಂದಾಜು 4932 ಕೋಟಿ ಕೋಟಿ) ಆದಾಯವನ್ನು ಐಸಿಸಿ ಗಳಿಸುವ ನಿರೀಕ್ಷೆ ಇದೆ.
icon

(2 / 8)

ಮುಂದಿನ 4 ವರ್ಷಗಳವರೆಗೆ ICC ಹೊಸ ಆದಾಯ ವಿತರಣಾ ಮಾದರಿಯನ್ನು ರಚಿಸಿದೆ. ಈ ಆದಾಯ ವಿತರಣಾ ಮಾದರಿಯ ಅಡಿಯಲ್ಲಿ ಎಲ್ಲಾ ದೇಶಗಳ ಪಾಲನ್ನು ಸಹ ನಿರ್ಧರಿಸಲಾಗಿದೆ. ಇದರ ಪ್ರಕಾರ ಬಿಸಿಸಿಐಗೆ ಸಿಂಹಪಾಲು ಸಿಗಲಿದೆ.  2024ರಿಂದ 2027ರವರೆಗೆ 4 ವರ್ಷಗಳಲ್ಲಿ 600 ಮಿಲಿಯನ್ ಡಾಲರ್ (ಅಂದಾಜು 4932 ಕೋಟಿ ಕೋಟಿ) ಆದಾಯವನ್ನು ಐಸಿಸಿ ಗಳಿಸುವ ನಿರೀಕ್ಷೆ ಇದೆ.(CA IG)

ಈ ಮಾದರಿಯ ಪ್ರಕಾರ, 2024ರಿಂದ 2027ರವರೆಗೆ ಬಿಸಿಸಿಐ ವಾರ್ಷಿಕವಾಗಿ 230 ಮಿಲಿಯನ್ ಡಾಲರ್‌ (ಸುಮಾರು 1,900 ಕೋಟಿ ರೂ.) ಗಳಿಸಬಹುದು. ಅಂದರೆ ಐಸಿಸಿಯ ವಾರ್ಷಿಕ ಆದಾಯ ಅಂದಾಜು 5000 ಕೋಟಿ ರೂಪಾಯಿಗಳಲ್ಲಿ ಬಿಸಿಸಿಐ ಶೇ.38.5ರಷ್ಟು ಪಾಲು ಪಡೆಯಲಿದೆ. 
icon

(3 / 8)

ಈ ಮಾದರಿಯ ಪ್ರಕಾರ, 2024ರಿಂದ 2027ರವರೆಗೆ ಬಿಸಿಸಿಐ ವಾರ್ಷಿಕವಾಗಿ 230 ಮಿಲಿಯನ್ ಡಾಲರ್‌ (ಸುಮಾರು 1,900 ಕೋಟಿ ರೂ.) ಗಳಿಸಬಹುದು. ಅಂದರೆ ಐಸಿಸಿಯ ವಾರ್ಷಿಕ ಆದಾಯ ಅಂದಾಜು 5000 ಕೋಟಿ ರೂಪಾಯಿಗಳಲ್ಲಿ ಬಿಸಿಸಿಐ ಶೇ.38.5ರಷ್ಟು ಪಾಲು ಪಡೆಯಲಿದೆ. 

ಈ ಮಾದರಿಯ ಪ್ರಕಾರ, ಇಸಿಬಿಯು ಭಾರತದ ನಂತರ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟ್ ಮಂಡಳಿಯಾಗಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ICCಯ ಒಟ್ಟು ಆದಾಯದ 6.89 ಶೇಕಡದಷ್ಟು ಪಾಲು ಪಡೆಯುವ ಸಾಧ್ಯತೆ ಇದೆ.
icon

(4 / 8)

ಈ ಮಾದರಿಯ ಪ್ರಕಾರ, ಇಸಿಬಿಯು ಭಾರತದ ನಂತರ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟ್ ಮಂಡಳಿಯಾಗಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ICCಯ ಒಟ್ಟು ಆದಾಯದ 6.89 ಶೇಕಡದಷ್ಟು ಪಾಲು ಪಡೆಯುವ ಸಾಧ್ಯತೆ ಇದೆ.(ECB IG)

ಇದಾದ ನಂತರ ಕ್ರಿಕೆಟ್ ಆಸ್ಟ್ರೇಲಿಯಾದ ಬರಲಿದೆ. ಐಸಿಸಿಯ ವಾರ್ಷಿಕ ಆದಾಯದ ಶೇ.6.25ರಷ್ಟನ್ನು ಕ್ರಿಕೆಟ್ ಆಸ್ಟ್ರೇಲಿಯಾ (CA) ಪಡೆಯಲಿದೆ.
icon

(5 / 8)

ಇದಾದ ನಂತರ ಕ್ರಿಕೆಟ್ ಆಸ್ಟ್ರೇಲಿಯಾದ ಬರಲಿದೆ. ಐಸಿಸಿಯ ವಾರ್ಷಿಕ ಆದಾಯದ ಶೇ.6.25ರಷ್ಟನ್ನು ಕ್ರಿಕೆಟ್ ಆಸ್ಟ್ರೇಲಿಯಾ (CA) ಪಡೆಯಲಿದೆ.(CA IG)

ಇದರ ನಂತರ ಪಾಕಿಸ್ತಾನವು ಐಸಿಸಿಯ ಒಟ್ಟು ಆದಾಯದ ಶೇ.5.75ರಷ್ಟು ಪಾಲನ್ನು ಮಾತ್ರ ಪಡೆಯಲಿದೆ.
icon

(6 / 8)

ಇದರ ನಂತರ ಪಾಕಿಸ್ತಾನವು ಐಸಿಸಿಯ ಒಟ್ಟು ಆದಾಯದ ಶೇ.5.75ರಷ್ಟು ಪಾಲನ್ನು ಮಾತ್ರ ಪಡೆಯಲಿದೆ.(PCB IG)

ಐಸಿಸಿಯ ವಾರ್ಷಿಕ ಆದಾಯ ಅಂದಾಜು 5000 ಕೋಟಿ ರೂಪಾಯಿಗಳಲ್ಲಿ ಬಿಸಿಸಿಐ ಶೇ.38.5ರಷ್ಟು ಪಾಲು ಪಡೆಯಲಿದೆ. ಇದೇ ವೇಳೆ, ಪಿಸಿಬಿಯ ಆದಾಯವು ಸುಮಾರು 284 ಕೋಟಿಗಳಷ್ಟು ಮಾತ್ರ ಪಡೆಯುತ್ತದೆ. ಅಂದರೆ ಐಸಿಸಿ ಆದಾಯದಿಂದ ಬಿಸಿಸಿಐಯು ಪಿಸಿಬಿಗಿಂತ 7 ಪಟ್ಟು ಹೆಚ್ಚು ಮೊತ್ತವನ್ನು ಪಡೆಯಲಿದೆ.
icon

(7 / 8)

ಐಸಿಸಿಯ ವಾರ್ಷಿಕ ಆದಾಯ ಅಂದಾಜು 5000 ಕೋಟಿ ರೂಪಾಯಿಗಳಲ್ಲಿ ಬಿಸಿಸಿಐ ಶೇ.38.5ರಷ್ಟು ಪಾಲು ಪಡೆಯಲಿದೆ. ಇದೇ ವೇಳೆ, ಪಿಸಿಬಿಯ ಆದಾಯವು ಸುಮಾರು 284 ಕೋಟಿಗಳಷ್ಟು ಮಾತ್ರ ಪಡೆಯುತ್ತದೆ. ಅಂದರೆ ಐಸಿಸಿ ಆದಾಯದಿಂದ ಬಿಸಿಸಿಐಯು ಪಿಸಿಬಿಗಿಂತ 7 ಪಟ್ಟು ಹೆಚ್ಚು ಮೊತ್ತವನ್ನು ಪಡೆಯಲಿದೆ.

ಈ ವಾರ್ಷಿಕ ಆದಾಯದ ಅಂಕಿ-ಅಂಶವು ಐಸಿಸಿಯ ಅಂದಾಜು ಗಳಿಕೆಗಳನ್ನು ಆಧರಿಸಿದೆ. ಈ ಆದಾಯದ ಹೆಚ್ಚಿನ ಭಾಗವು ಭಾರತದಲ್ಲಿ ಮಾಧ್ಯಮ ಹಕ್ಕುಗಳ ಮಾರಾಟದಿಂದ ಬರುತ್ತದೆ. ಡಿಸ್ನಿ ಸ್ಟಾರ್ ಇತ್ತೀಚೆಗೆ 4 ವರ್ಷಗಳ ಕಾಲ ಮಾಧ್ಯಮ ಹಕ್ಕುಗಳನ್ನು ಖರೀದಿಸಿತ್ತು.
icon

(8 / 8)

ಈ ವಾರ್ಷಿಕ ಆದಾಯದ ಅಂಕಿ-ಅಂಶವು ಐಸಿಸಿಯ ಅಂದಾಜು ಗಳಿಕೆಗಳನ್ನು ಆಧರಿಸಿದೆ. ಈ ಆದಾಯದ ಹೆಚ್ಚಿನ ಭಾಗವು ಭಾರತದಲ್ಲಿ ಮಾಧ್ಯಮ ಹಕ್ಕುಗಳ ಮಾರಾಟದಿಂದ ಬರುತ್ತದೆ. ಡಿಸ್ನಿ ಸ್ಟಾರ್ ಇತ್ತೀಚೆಗೆ 4 ವರ್ಷಗಳ ಕಾಲ ಮಾಧ್ಯಮ ಹಕ್ಕುಗಳನ್ನು ಖರೀದಿಸಿತ್ತು.(ECB IG)


IPL_Entry_Point

ಇತರ ಗ್ಯಾಲರಿಗಳು