ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Photos: ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ವಿವಿಧ ತಂಡಗಳ ಜೆರ್ಸಿ ಹೇಗಿದೆ; ನಿಮಗೆ ಯಾವ ವಿನ್ಯಾಸ ಇಷ್ಟ?

Photos: ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ವಿವಿಧ ತಂಡಗಳ ಜೆರ್ಸಿ ಹೇಗಿದೆ; ನಿಮಗೆ ಯಾವ ವಿನ್ಯಾಸ ಇಷ್ಟ?

  • ICC T20 World Cup 2024: ಜೂನ್‌ ತಿಂಗಳಲ್ಲಿ ಆರಂಭವಾಗುತ್ತಿರುವ ಐಸಿಸಿ ಟಿ20 ವಿಶ್ವಕಪ್ 2024 ಪಂದ್ಯಾವಳಿಗೆ ಭಾಗವಹಿಸುವ ತಂಡಗಳು, ಒಂದೊಂದಾಗಿ ತಮ್ಮ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡುತ್ತಿವೆ. ಭಾರತ ಸೇರಿದಂತೆ ಹಲವು ದೇಶಗಳ ಜೆರ್ಸಿ ಆಕರ್ಷಕವಾಗಿದೆ.

ಪ್ರತಿ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಹೊಸ ಕಿಟ್‌ ಬಿಡುಗಡೆ ಮಾಡುತ್ತವೆ. ಈ ಬಾರಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ಗೂ ಮುನ್ನ ತಂಡಗಳು ತಮ್ಮ ಹೊಸ ಜೆರ್ಸಿಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿವೆ. ವಿವಿಧ ತಂಡಗಳ ವಿಶ್ವಕಪ್ ಜೆರ್ಸಿ ಹೇಗಿದೆ ಎಂದು ನೋಡೋಣ.
icon

(1 / 14)

ಪ್ರತಿ ವಿಶ್ವಕಪ್‌ ಪಂದ್ಯಾವಳಿಗೂ ಮುನ್ನ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ತಮ್ಮ ಹೊಸ ಕಿಟ್‌ ಬಿಡುಗಡೆ ಮಾಡುತ್ತವೆ. ಈ ಬಾರಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ಗೂ ಮುನ್ನ ತಂಡಗಳು ತಮ್ಮ ಹೊಸ ಜೆರ್ಸಿಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿವೆ. ವಿವಿಧ ತಂಡಗಳ ವಿಶ್ವಕಪ್ ಜೆರ್ಸಿ ಹೇಗಿದೆ ಎಂದು ನೋಡೋಣ.(BCCI)

ಭಾರತದ ವಿಶ್ವಕಪ್ ಜೆರ್ಸಿಯು ಎಂದಿನಂತೆ ನೀಲಿ ಬಣ್ಣದಲ್ಲಿದೆ. ಆದರೆ ಈ ಬಾರಿ ಭುಜ ಮತ್ತು ತೋಳಿನ ಭಾಗವು ಕೇಸರಿಮಯವಾಗಿವೆ. ತೋಳಿನ ಕೊನೆಯಲ್ಲಿ ನೀಲಿ ಪಟ್ಟೆಗಳಿವೆ. ಕಾಲರ್‌ಗೆ ತ್ರಿವರ್ಣ ಧ್ವಜದ ಮೂರು ಬಣ್ಣಗಳ ಸ್ಪರ್ಶ ದೊರಕಿದೆ. ದೇಶದ ಹೆಸರನ್ನು ಎದೆಯ ಮೇಲೆ ಕೇಸರಿ ಬಣ್ಣದಲ್ಲಿ ಮತ್ತು ಪ್ರಾಯೋಜಕರ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಎದೆಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇದೆ.
icon

(2 / 14)

ಭಾರತದ ವಿಶ್ವಕಪ್ ಜೆರ್ಸಿಯು ಎಂದಿನಂತೆ ನೀಲಿ ಬಣ್ಣದಲ್ಲಿದೆ. ಆದರೆ ಈ ಬಾರಿ ಭುಜ ಮತ್ತು ತೋಳಿನ ಭಾಗವು ಕೇಸರಿಮಯವಾಗಿವೆ. ತೋಳಿನ ಕೊನೆಯಲ್ಲಿ ನೀಲಿ ಪಟ್ಟೆಗಳಿವೆ. ಕಾಲರ್‌ಗೆ ತ್ರಿವರ್ಣ ಧ್ವಜದ ಮೂರು ಬಣ್ಣಗಳ ಸ್ಪರ್ಶ ದೊರಕಿದೆ. ದೇಶದ ಹೆಸರನ್ನು ಎದೆಯ ಮೇಲೆ ಕೇಸರಿ ಬಣ್ಣದಲ್ಲಿ ಮತ್ತು ಪ್ರಾಯೋಜಕರ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಎದೆಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇದೆ.(BCCI)

ನ್ಯೂಜಿಲ್ಯಾಂಡ್‌ ತಂಡವು ಪರಿಚಿತ ಕಪ್ಪು ಜೆರ್ಸಿಯನ್ನು ಬದಿಗಿಟ್ಟು ನೂತನ ಜೆರ್ಸಿಯೊಂದಿಗೆ ಟಿ20 ವಿಶ್ವಕಪ್ ಆಡಲಿದೆ. ಮುಂಬರುವ ವಿಶ್ವಕಪ್‌ಗಾಗಿ ಕಿವೀಸ್ ಕ್ರಿಕೆಟ್ ಮಂಡಳಿ ತಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಎದುರು ಭಾಗದಲ್ಲಿ ಮೇಲೆ ಅಗಲವಾದ ಬಿಳಿ ಪಟ್ಟಿಯ ಮೇಲೆ ದೇಶದ ಹೆಸರನ್ನು ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ. ಕ್ರಿಕೆಟ್‌ ಮಂಡಳಿ ಲೋಗೋವನ್ನು ಎದೆಯ ಎಡಭಾಗದಲ್ಲಿ ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಫೋಟೋ: ನ್ಯೂಜಿಲೆಂಡ್ ಕ್ರಿಕೆಟ್.
icon

(3 / 14)

ಟಿ20 ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಹಳದಿ ಜೆರ್ಸಿಯಲ್ಲಿ ತೋಳುಗಳನ್ನು ಹಸಿರು ಬಣ್ಣದಲ್ಲಿ ರಚಿಸಲಾಗಿದೆ. ಭುಜಗಳ ಮೇಲೆ ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳ ಮೂಲಕ ಧ್ವಜದ ಬಣ್ಣವಿದೆ. ದೇಶದ ಹೆಸರನ್ನು ಮುಂಭಾಗದಲ್ಲಿ ಹಸಿರು ಅಕ್ಷರಗಳಲ್ಲಿ ಬರೆಯಲಾಗಿದೆ. ಫೋಟೋ: ದಕ್ಷಿಣ ಆಫ್ರಿಕಾ ಕ್ರಿಕೆಟ್.
icon

(4 / 14)

ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ತನ್ನ ಮ್ಯಾಟ್ರಿಕ್ಸ್ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಸಹಜವಾಗಿಯೇ ಪಾಕಿಸ್ತಾನದ ಸಾಂಪ್ರದಾಯಿಕ ಜೆರ್ಸಿ ಬಣ್ಣ ಹಸಿರು. ಈ ಬಾರಿಯೂ ಗಾಢ ಹಸಿರು ಬಣ್ಣ ಥೀಮ್‌ನಲ್ಲಿ ಜೆರ್ಸಿ ಬಿಡುಗಡೆ ಮಾಡಲಾಗಿದೆ. ದೇಶದ ಹೆಸರನ್ನು ಮುಂಭಾಗದಲ್ಲಿ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಫೋಟೋ: ಪಿಸಿಬಿ.
icon

(5 / 14)

ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ಜೆರ್ಸಿ ಕೂಡಾ ಕಡು ಹಸಿರು ಬಣ್ಣದ್ದಾಗಿದೆ. ತೋಳಿನ ಕೆಳಭಾಗದಲ್ಲಿ ಹಳದಿ ಪಟ್ಟೆಗಳಿವೆ. ಕಾಲರ್ ಮೇಲೆ ಹಳದಿ ಬಣ್ಣದ ಪಟ್ಟಿಗಳಿವೆ. ದೇಶದ ಹೆಸರನ್ನು ಮುಂಭಾಗದಲ್ಲಿ ಹಳದಿ ಬಣ್ಣದಲ್ಲಿ ಬರೆಯಲಾಗಿದೆ. ಚಿತ್ರ ಕೃಪೆ: ಕ್ರಿಕೆಟ್ ಆಸ್ಟ್ರೇಲಿಯಾ.
icon

(6 / 14)

ಶ್ರೀಲಂಕಾದ ಟಿ20 ವಿಶ್ವಕಪ್ ಜೆರ್ಸಿ ಕಡುನೀಲಿ ಬಣ್ಣದಲ್ಲಿದೆ. ಕಾಲರ್ ಮತ್ತು ತೋಳಿನ ತುದಿಯಲ್ಲಿ ಹಳದಿ ಪಟ್ಟಿಗಳಿವೆ. ದೇಶದ ಹೆಸರನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿದೆ. ವಿಶ್ವಕಪ್ ಲಾಂಛನವನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಫೋಟೋ: ಶ್ರೀಲಂಕಾ ಕ್ರಿಕೆಟ್.
icon

(7 / 14)

ನಮೀಬಿಯಾದ ಟಿ20 ವಿಶ್ವಕಪ್ ಜೆರ್ಸಿ ನೀಲಿ ಮತ್ತು ಗಾಢ ನೀಲಿ ಮಿಶ್ರಣವಾಗಿದೆ. ಬಲಭಾಗದಲ್ಲಿ ಕೆಂಪು ಸ್ಪರ್ಶವಿದೆ. ತೋಳಿನ ಕಾಲರ್ ಮತ್ತು ಅಂಚಿನಲ್ಲಿ ಕೆಂಪು ಪಟ್ಟಿಗಳಿವೆ. ದೇಶದ ಹೆಸರನ್ನು ಮುಂಭಾಗದಲ್ಲಿ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಚಿತ್ರ- ಇನ್‌ಸ್ಟಾಗ್ರಾಮ್.
icon

(8 / 14)

ಕೆನಡಾದ ಟಿ20 ವಿಶ್ವಕಪ್ ಜೆರ್ಸಿ ಬಣ್ಣ ಕೆಂಪು. ಮುಂಭಾಗದಲ್ಲಿ ತಿಳಿ ಹಳದಿ ಬಣ್ಣವಿದೆ. ದೇಶದ ಹೆಸರು, ಬೋರ್ಡ್ ಲೋಗೋ ಮತ್ತು ವಿಶ್ವಕಪ್ ಲೋಗೋ ಎಲ್ಲವನ್ನೂ ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಫೋಟೋ: ಕೆನಡಾ ಕ್ರಿಕೆಟ್.
icon

(9 / 14)

ಸ್ಕಾಟ್ಲೆಂಡ್‌ ಟಿ20 ವಿಶ್ವಕಪ್ ಜೆರ್ಸಿ ಗಮನ ಸೆಳೆಯುತ್ತದೆ. ಈ ಜೆರ್ಸಿಯನ್ನು ಗಾಢ ನೀಲಿ ಮತ್ತು ಗುಲಾಬಿ ಬಣ್ಣದ ಛಾಯೆಗಳಲ್ಲಿ ರಚಿಸಲಾಗಿದೆ. ದೇಶದ ಹೆಸರನ್ನು ಮುಂಭಾಗದಲ್ಲಿ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಬೋರ್ಡ್ ಲೋಗೋ ಮತ್ತು ವಿಶ್ವಕಪ್ ಲೋಗೋವನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಗಿದೆ. ಚಿತ್ರ: ಕ್ರಿಕೆಟ್ ಸ್ಕಾಟ್ಲೆಂಡ್.
icon

(10 / 14)

ಅಫ್ಘಾನಿಸ್ತಾನದ ಟಿ20 ವಿಶ್ವಕಪ್ ಜೆರ್ಸಿ ಕೂಡ ನೀಲಿ ಬಣ್ಣದ್ದಾಗಿದೆ. ಸಂಪೂರ್ಣ ಜೆರ್ಸಿಯಲ್ಲಿ ಒಂದೇ ಹಾಗೂ ಸರಳ ವಿನ್ಯಾಸವಿದೆ. ತೋಳಿನ ಕೊನೆಯಲ್ಲಿ ನೀಲಿ ಬಣ್ಣದ ಪಟ್ಟಿ ಇದೆ. ದೇಶದ ಹೆಸರನ್ನು ಮುಂಭಾಗದಲ್ಲಿ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಫೋಟೋ: ಅಫ್ಘಾನಿಸ್ತಾನ ಕ್ರಿಕೆಟ್.
icon

(11 / 14)

ಉಗಾಂಡಾದ ಟಿ20 ವಿಶ್ವಕಪ್ ಜೆರ್ಸಿ ಹಳದಿ ಬಣ್ಣದ್ದಾಗಿದೆ. ಎರಡೂ ತೋಳುಗಳ ಭಾಗದಲ್ಲಿ ಕೆಂಪು ಮತ್ತು ಕಪ್ಪು ಪಟ್ಟೆಗಳಿವೆ. ಕಪ್ಪು ತೋಳುಗಳ ಮೇಲೆ ಕೆಂಪು ಮತ್ತು ಹಳದಿ ಗರಿಯ ವಿನ್ಯಾಸವಿದೆ. ದೇಶದ ಹೆಸರನ್ನು ಮುಂಭಾಗದಲ್ಲಿ ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ. ಫೋಟೋ: ಉಗಾಂಡಾ ಕ್ರಿಕೆಟ್.
icon

(12 / 14)

ನೇಪಾಳದ ಟಿ20 ವಿಶ್ವಕಪ್ ಜೆರ್ಸಿ ನೀಲಿ ಮತ್ತು ಕೆಂಪು ಬಣ್ಣಗಳ ಮಿಶ್ರಣವಾಗಿದೆ. ಕಾಲರ್ ಮತ್ತು ತೋಳುಗಳ ಮೇಲೆ ಕೆಂಪು ಪಟ್ಟಿಗಳಿವೆ. ದೇಶದ ಹೆಸರನ್ನು ಮುಂಭಾಗದಲ್ಲಿ ಹಳದಿ ಬಣ್ಣದಲ್ಲಿ ಬರೆಯಲಾಗಿದೆ. ಕ್ರಿಕೆಟಿಗರ ಹೆಸರು ಮತ್ತು ಜೆರ್ಸಿ ಸಂಖ್ಯೆಗಳು ಹಿಂಭಾಗದಲ್ಲಿ ಹಳದಿ ಬಣ್ಣದ್ದಾಗಿವೆ. ಫೋಟೋ: ನೇಪಾಳ ಕ್ರಿಕೆಟ್.
icon

(13 / 14)

ನೆದರ್ಲ್ಯಾಂಡ್‌ ಟಿ 20 ವಿಶ್ವಕಪ್ ಜೆರ್ಸಿ ಎಂದಿನಂತೆ ಕಿತ್ತಳೆ ಬಣ್ಣದ್ದಾಗಿದೆ. ಈ ಜೆರ್ಸಿಯ ಮಧ್ಯದಲ್ಲಿ ನೀಲಿ ಪಟ್ಟಿ ಇದೆ. ದೇಶದ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಕಾಲರ್ ನೀಲಿ ಬಣ್ಣದ್ದಾಗಿದೆ. ತೋಳಿನ ತುದಿಯಲ್ಲಿ ಧ್ವಜದ ಬಣ್ಣವಿದೆ. ಫೋಟೋ: ನೆದರ್ಲ್ಯಾಂಡ್ಸ್ ಕ್ರಿಕೆಟ್.
icon

(14 / 14)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು