WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಬಾಂಗ್ಲಾದೇಶ; ಟೆಸ್ಟ್‌ ಕ್ರಿಕೆಟ್‌ಗೆ ಭಾರತವೇ ರಾಜಾಹುಲಿ-cricket news icc world test championship point table after india vs bangladesh 1st test wtc 2024 standings jra ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಬಾಂಗ್ಲಾದೇಶ; ಟೆಸ್ಟ್‌ ಕ್ರಿಕೆಟ್‌ಗೆ ಭಾರತವೇ ರಾಜಾಹುಲಿ

WTC Points Table: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕುಸಿದ ಬಾಂಗ್ಲಾದೇಶ; ಟೆಸ್ಟ್‌ ಕ್ರಿಕೆಟ್‌ಗೆ ಭಾರತವೇ ರಾಜಾಹುಲಿ

  • ICC World Test Championship Standings: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅದರ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತವು ಈ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಅತ್ತ ಸೋತ ಬಾಂಗ್ಲಾದೇಶ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ.

ಚೆನ್ನೈ ಟೆಸ್ಟ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು ಸೋಲಿಸಿದೆ. ಆದರೆ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ ಈ ಮೊದಲು ಇದ್ದ ಸ್ಥಾನದಲ್ಲಿಯೇ ಇದೆ. ಟೀಮ್ ಇಂಡಿಯಾ ಈಗಾಗಲೇ ಡಬ್ಲ್ಯುಟಿಸಿ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿತ್ತು. ಇದೀಗ ಚೆಪಾಕ್‌ನ ಗೆಲುವಿನೊಂದಿಗೆ, ರೋಹಿತ್ ಶರ್ಮಾ ಪಡೆ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಮತ್ತೆ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಅಲ್ಲದೆ ಪಾಯಿಂಟ್‌ ಅಂತರವನ್ನು ಕೂಡಾ ಹೆಚ್ಚಿಸಿಕೊಂಡಿದೆ.
icon

(1 / 6)

ಚೆನ್ನೈ ಟೆಸ್ಟ್ ಗೆಲುವಿನೊಂದಿಗೆ ಭಾರತ ಅಮೂಲ್ಯ 12 ಅಂಕ ಕಲೆಹಾಕಿದೆ. ಹೀಗಾಗಿ ಒಟ್ಟು ಆಡಿದ 10 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಒಟ್ಟು ಅಂಕಗಳು 86ಕ್ಕೇರಿದೆ. ಭಾರತದ ಅಂಕಗಳ ಶೇಕಡಾವಾರು ಪ್ರಮಾಣ 71.67 ಆಗಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಗಳಿಸಿದ ಅಂಕಗಳ ಶೇಕಡಾವಾರು ಮೂಲಕ ನಿರ್ಧರಿಸಲಾಗುತ್ತದೆ.
icon

(2 / 6)

ಚೆನ್ನೈ ಟೆಸ್ಟ್ ಗೆಲುವಿನೊಂದಿಗೆ ಭಾರತ ಅಮೂಲ್ಯ 12 ಅಂಕ ಕಲೆಹಾಕಿದೆ. ಹೀಗಾಗಿ ಒಟ್ಟು ಆಡಿದ 10 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಒಟ್ಟು ಅಂಕಗಳು 86ಕ್ಕೇರಿದೆ. ಭಾರತದ ಅಂಕಗಳ ಶೇಕಡಾವಾರು ಪ್ರಮಾಣ 71.67 ಆಗಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳು ಗಳಿಸಿದ ಅಂಕಗಳ ಶೇಕಡಾವಾರು ಮೂಲಕ ನಿರ್ಧರಿಸಲಾಗುತ್ತದೆ.(PTI)

ಅತ್ತ ಪಾಕಿಸ್ತಾನವನ್ನು ವೈಟ್‌ವಾಶ್ ಮಾಡಿದ್ದ‌ ಬಾಂಗ್ಲಾದೇಶ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಭಾರಿ ಪ್ರಗತಿ ಸಾಧಿಸಿತ್ತು. ಆದರೆ, ನಜ್ಮುಲ್ ಹುಸೇನ್ ಶಾಂಟೋಸ್ ಬಳಗವು ಇದೀಗ ಭಾರತ ವಿರುದ್ಧ ಸೋತ ನಂತರ ಲೀಗ್ ಟೇಬಲ್‌ನಲ್ಲಿ ಮತ್ತೆ ಕುಸಿದಿದೆ. ನಾಲ್ಕನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಜಾರಿದ ತಂಡ 7 ಪಂದ್ಯಗಳಲ್ಲಿ 33 ಅಂಕ ಕಲೆಹಾಕಿದೆ. ಶೇ.39.29ರಷ್ಟು ಅಂಕ ಹೊಂದಿದೆ.
icon

(3 / 6)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಆಸೀಸ್‌ ಖಾತೆಯಲ್ಲಿ 90 ಅಂಕಗಳಿದ್ದರೂ, ತಂಡದ ಶೇಕಡಾವಾರು ಅಂಕ 62.50 ಮಾತ್ರ. ಹೀಗಾಗಿ ತಂಡ ಭಾರತಕ್ಕಿಂತ ಕೆಳಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಶೇ.50ರ ಪ್ರಮಾಣದಲ್ಲಿ 36 ಅಂಕ ಕಲೆಹಾಕಿದೆ. ಬಾಂಗ್ಲಾದೇಶ ಹಿಂದೆ ಬಿದ್ದ ಕಾರಣದಿಂದ ಶ್ರೀಲಂಕಾ ಲೀಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ತಂಡವು 42.86ರ ಸರಾಸರಿ ಅಂಕ ಹೊಂದಿದೆ.
icon

(4 / 6)

ಬಾಂಗ್ಲಾದೇಶದ ಸೋಲಿನಿಂದ ಇಂಗ್ಲೆಂಡ್‌ಗೂ ಲಾಭವಾಗಿದೆ. ಬ್ರಿಟೀಷರು ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಇಂಗ್ಲೆಂಡ್ 16 ಪಂದ್ಯಗಳಲ್ಲಿ 81 ಅಂಕಗಳ ಸರಾಸರಿಯಲ್ಲಿ 42.19 ಅಂಕ ಕಲೆಹಾಕಿದೆ. ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ 38.89 ಶೇಕಡಾ ದರದಲ್ಲಿ 28 ಅಂಕಗಳನ್ನು ಸಂಗ್ರಹಿಸಿ ಲೀಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. 
icon

(5 / 6)

ಬಾಂಗ್ಲಾದೇಶದ ಸೋಲಿನಿಂದ ಇಂಗ್ಲೆಂಡ್‌ಗೂ ಲಾಭವಾಗಿದೆ. ಬ್ರಿಟೀಷರು ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ. ಇಂಗ್ಲೆಂಡ್ 16 ಪಂದ್ಯಗಳಲ್ಲಿ 81 ಅಂಕಗಳ ಸರಾಸರಿಯಲ್ಲಿ 42.19 ಅಂಕ ಕಲೆಹಾಕಿದೆ. ದಕ್ಷಿಣ ಆಫ್ರಿಕಾ 6 ಪಂದ್ಯಗಳಲ್ಲಿ 38.89 ಶೇಕಡಾ ದರದಲ್ಲಿ 28 ಅಂಕಗಳನ್ನು ಸಂಗ್ರಹಿಸಿ ಲೀಗ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. (AFP)

ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ತಂಡವು 7 ಪಂದ್ಯಗಳಲ್ಲಿ 19.05ರ ದರದಲ್ಲಿ 16 ಅಂಕಗಳನ್ನು ಸಂಗ್ರಹಿಸಿದೆ. ವೆಸ್ಟ್ ಇಂಡೀಸ್ ಲೀಗ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಕೊನೆಯ ಸ್ಥಾನದಲ್ಲಿದೆ. ವಿಂಡೀಸ್‌ 9 ಪಂದ್ಯಗಳಲ್ಲಿ 18.52ರ ಶೇಕಡಾ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದೆ.
icon

(6 / 6)

ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಪಾಕಿಸ್ತಾನ ಎಂಟನೇ ಸ್ಥಾನದಲ್ಲಿದೆ. ತಂಡವು 7 ಪಂದ್ಯಗಳಲ್ಲಿ 19.05ರ ದರದಲ್ಲಿ 16 ಅಂಕಗಳನ್ನು ಸಂಗ್ರಹಿಸಿದೆ. ವೆಸ್ಟ್ ಇಂಡೀಸ್ ಲೀಗ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಕೊನೆಯ ಸ್ಥಾನದಲ್ಲಿದೆ. ವಿಂಡೀಸ್‌ 9 ಪಂದ್ಯಗಳಲ್ಲಿ 18.52ರ ಶೇಕಡಾ ದರದಲ್ಲಿ 20 ಅಂಕಗಳನ್ನು ಸಂಗ್ರಹಿಸಿದೆ.(REUTERS)

ಇತರ ಗ್ಯಾಲರಿಗಳು