ಭಾರತ vs ಪಾಕಿಸ್ತಾನ ಏಷ್ಯಾಕಪ್ ತಂಡದ ವೇಗದ ಅಸ್ತ್ರಗಳಿವರು; ಪಾಕಿಸ್ತಾನವೇ ಬಲಿಷ್ಠ!
Asia Cup 2023: ಇಂಡೋ-ಪಾಕ್ ಏಷ್ಯಾಕಪ್ ಕದನಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳ ಡೇಂಜರಸ್ ಬೌಲರ್‌ಗಳು ಯಾರು ಎಂಬುದನ್ನು ನೋಡೋಣ.
(1 / 7)
ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಏಷ್ಯಾಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲ್ಲಿನಡೆಯುವ ಪಂದ್ಯದ ಮೇಲೆ ಅಭಿಮಾನಿಗಳ ಚಿತ್ತ ಹರಿದಿದೆ. ಉಭಯ ತಂಡಗಳು ಅತ್ಯುತ್ತಮ ವೇಗದ ಬೌಲರ್‌ಗಳಿದ್ದು, ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಟಗಾರರ ರೆಕಾರ್ಡ್ಸ್ ಹೀಗಿವೆ.
(2 / 7)
ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಹ್ಯಾರಿಸ್ ರೌಫ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಆಡಿದ 10 ಏಕದಿನ ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದಾರೆ. ಅವರ ಫಾರ್ಮ್ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸಮಸ್ಯೆ ತಂದೊಡ್ಡಬಹುದು. ರೌಫ್ ಇದುವರೆಗೂ ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿಲ್ಲ. ಆದರೆ, ಅವರು 2021 ಮತ್ತು 2022ರ ಅವಧಿಯಲ್ಲಿ ಉಭಯ ತಂಡಗಳ ನಡುವೆ ನಡೆದ ಎಲ್ಲಾ ನಾಲ್ಕು ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
(3 / 7)
ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡಾ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ ಅವರು ಆಡಿದ 8 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಶಾಹೀನ್ ಅಫ್ರಿದಿ 6 ವಿಕೆಟ್ ಪಡೆದರು. ಭಾರತದ ವಿರುದ್ಧ ಅಫ್ರಿದಿ ಕೇವಲ ಒಂದು ಏಕದಿನ ಪಂದ್ಯದಲ್ಲಿ ಮಾತ್ರ ಆಡಿದ್ದಾರೆ. ಅದು 2018ರ ಏಷ್ಯಾಕಪ್‌ನಲ್ಲಿ. 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಕಂಟಕರಾಗಿದ್ದ ಶಾಹೀನ್, ಈ ಬಾರಿಯೂ ಟೀಮ್ ಇಂಡಿಯಾಗೆ ಮುಳುವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
(4 / 7)
ಪಾಕಿಸ್ತಾನದ ವೇಗದ ಬೌಲರ್ ನಸೀಮ್ ಶಾ ತಂಡದ ಪ್ರಮುಖ ಬೌಲಿಂಗ್ ಅಸ್ತ್ರ. 20 ವರ್ಷ ವಯಸ್ಸಿನ ವೇಗಿ ಈ ವರ್ಷ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 16 ವಿಕೆಟ್ ಪಡೆದಿದ್ದಾರೆ. ಅವರ ಫಾರ್ಮ್ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಮಾರಕವಾಗಿದೆ. ಈವರೆಗೆ ಒಟ್ಟು 10 ಏಕದಿನ ಪಂದ್ಯಗಳಲ್ಲಿ ಆಡಿರುವ ಅವರು ಎರಡು ಬಾರು ತಲಾ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ವರ್ಷ ನಡೆದ ಏಷ್ಯಾಕಪ್‌ನಲ್ಲಿ ಭಾರತ ವಿರುದ್ಧದ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಪ್ರಮುಖ ವಿಕೆಟ್ ಕಬಳಿಸಿ ತಮ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
(5 / 7)
ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಇದುವರೆಗೆ ಒಟ್ಟು 90 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಅವರು 162 ವಿಕೆಟ್ ಕಬಳಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇದೆ.
(6 / 7)
ಗಾಯದಿಂದಾಗಿ ತಿಂಗಳುಗಳಿಂದ ಮೈದಾನದಿಂದ ದೂರ ಉಳಿದಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಇತ್ತೀಚೆಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂಲಕ ಅಂತಾರಾಷ್ಟ್ರೀಯ ತಂಡಕ್ಕೆ ಹಿಂದಿರುಗಿದ್ದಾರೆ. 2 ಪಂದ್ಯಗಳಲ್ಲಿ ಅವರು 4 ವಿಕೆಟ್ ಪಡೆದರು. ಸುದೀರ್ಘ ಅವಧಿಯ ಬಳಿಕ ಬುಮ್ರಾ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾರೆ.
(7 / 7)
ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಪ್ರದರ್ಶನ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದೆ. ಅದರಲ್ಲೂ ಪವರ್‌ಪ್ಲೇ ಅವಧಿಯಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕಿಂಗ್ ಬೌಲರ್ ಆಗಿ ಮಿಂಚುತ್ತಿದ್ದಾರೆ. 2023ರ ಮಾರ್ಚ್ ತಿಂಗಳಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವರು 5 ವಿಕೆಟ್ ಪಡೆದು ಮಿಂಚಿದ್ದನ್ನು ನೋಡಬಹುದು. ಐಪಿಎಲ್‌ನಲ್ಲಿಯೂ ಆರ್‌ಸಿಬಿ ತಂಡದ ಪರ ಕೊಹ್ಲಿ ಮಾರ್ಗದರ್ಶನದಲ್ಲಿ ಹೊಸ ಚೆಂಡಿನೊಂದಿಗೆ ವಿಕೆಟ್ ಟೇಕಿಂಗ್ ಬೌಲರ್ ಎನಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು