ಈ ಕಾರಣಕ್ಕಾ ಹಾರ್ದಿಕ್-ನತಾಶಾ ಡಿವೋರ್ಸ್ ಪಡೆದಿದ್ದು; ಸ್ಟಾರ್ ದಂಪತಿ ವಿಚ್ಛೇದನಕ್ಕೆ ಕೊನೆಗೂ ಕಾರಣ ಬಹಿರಂಗ
- Hardik Pandya - Natasa Stankovic: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ವಿಚ್ಛೇದನ ಪಡೆಯಲು ಕಾರಣ ಏನೆಂಬುದನ್ನು ಆಪ್ತ ಮೂಲಗಳು ಬಹಿರಂಗಪಡಿಸಿವೆ.
- Hardik Pandya - Natasa Stankovic: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರು ವಿಚ್ಛೇದನ ಪಡೆಯಲು ಕಾರಣ ಏನೆಂಬುದನ್ನು ಆಪ್ತ ಮೂಲಗಳು ಬಹಿರಂಗಪಡಿಸಿವೆ.
(1 / 10)
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟಾಂಕೋವಿಕ್ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆ. ಆ ಮೂಲಕ ಹರಡಿದ್ದ ವದಂತಿಗಳು ಈಗ ನಿಜವಾಗಿವೆ.
(2 / 10)
ಜುಲೈ 18ರಂದು ಇನ್ಸ್ಟಾಗ್ರಾಂನಲ್ಲಿ ಇಬ್ಬರು ಸಹ ತಮ್ಮ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಮಾಡುವ ಮೂಲಕ ವಿಚ್ಛೇದನ ಪ್ರಕಟಿಸಿದ್ದಾರೆ. ಒಮ್ಮತದ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದಿದ್ದಾರೆ.
(3 / 10)
ಪುತ್ರ ಅಗಸ್ತ್ಯನನ್ನು ಜಂಟಿ ಪಾಲನೆ ಮಾಡುವುದಾಗಿ ಘೋಷಿಸಿರುವ ಈ ದಂಪತಿ, 4 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಒಟ್ಟು ಮೂರು ಬಾರಿ ಅವರು ಮದುವೆಯಾಗಿದ್ದರು.
(4 / 10)
ಇಷ್ಟಿದ್ದರೂ ಈ ಸ್ಟಾರ್ ಕಪಲ್ಸ್ ಬೇರ್ಪಡಲು ಕಾರಣ ಏನೆಂಬುದು ಯಾರಿಗೂ ಗೊತ್ತಿರಲಿಲ್ಲ. ಇದೀಗ ಆಪ್ತ ಮೂಲಗಳು ಡಿವೋರ್ಸ್ಗೆ ಕಾರಣ ಏನೆಂದು ಬಹಿರಂಗಪಡಿಸಿವೆ.
(5 / 10)
ದಾಂಪತ್ಯ ಜೀವನ ಮುರಿದುಬೀಳಲು ಚಿಕ್ಕ ಪುಟ್ಟ ಜಗಳಗಳು ಹಾಗೂ ಕಮ್ಯುನಿಕೇಷನ್ ಗ್ಯಾಪ್ನಿಂದಲೂ ಹಾರ್ದಿಕ್-ನತಾಶಾ ಡಿವೋರ್ಸ್ಗೆ ಕಾರಣ ಎಂದು ಮೂಲಗಳು ತಿಳಿಸಿವೆ.
(6 / 10)
ಚಿಕ್ಕ ಪುಟ್ಟ ವಿಷಯಗಳಿಗೂ ಜಗಳ ಆಗುತ್ತಿತ್ತು. ಅದು ದೊಡ್ಡದಾಗಿ ಡಿವೋರ್ಸ್ ತನಕ ಬಂದಿದೆ. ಆದರೆ ಗಲಾಟೆಗಳಿಗೆ ಪರಿಹಾರ ಪಡೆಯಲು ಇಬ್ಬರಿಗೂ ತಾಳ್ಮೆಯೇ ಇರಲಿಲ್ಲ ಎಂದು ಆಪ್ತರು ತಿಳಿಸಿದ್ದಾರೆ.
(7 / 10)
'4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ ಹಾರ್ದಿಕ್ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ಒಟ್ಟಿಗೆ ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ ಎಂದು ನತಾಶಾ ಹೇಳಿದ್ದರು.
(8 / 10)
ನಮ್ಮಿಬ್ಬರ ಹಿತದೃಷ್ಟಿಯಿಂದ ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲು ನಮಗೆ ಕಠಿಣ ನಿರ್ಧಾರವಾಗಿತ್ತು ಎಂದಿದ್ದಾರೆ.
(9 / 10)
ಅಗಸ್ತ್ಯ ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯಲಿದ್ದಾನೆ. ಅವನ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ ಎಂದು ಹೇಳಿದ್ದಾರೆ.
ಇತರ ಗ್ಯಾಲರಿಗಳು