ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂಗ್ಲೆಂಡ್ ವಿರುದ್ಧ ಗೆದ್ದು ವಿಶೇಷ ದಾಖಲೆ ಬರೆದ ಭಾರತ; 2014ರ ಬಳಿಕ ಟಿ20 ವಿಶ್ವಕಪ್‌ನಲ್ಲಿ ಯಾರೂ ಮಾಡಿಲ್ಲ ಈ ಸಾಧನೆ

ಇಂಗ್ಲೆಂಡ್ ವಿರುದ್ಧ ಗೆದ್ದು ವಿಶೇಷ ದಾಖಲೆ ಬರೆದ ಭಾರತ; 2014ರ ಬಳಿಕ ಟಿ20 ವಿಶ್ವಕಪ್‌ನಲ್ಲಿ ಯಾರೂ ಮಾಡಿಲ್ಲ ಈ ಸಾಧನೆ

  • ಟೀಮ್‌ ಇಂಡಿಯಾ ಆಟಗಾರರ ಆಲ್‌ರೌಂಡ್‌ ಪ್ರದರ್ಶನದ ನೆರವಿಂದ ಭಾರತ ತಂಡವು ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್‌ ಪ್ರವೇಶಿಸಿದೆ. ಕಳೆದ ವರ್ಷದ ವಿಶ್ವಕಪ್‌ನಲ್ಲಿ ಸೆಮೀಸ್‌ನಲ್ಲಿ ಸೋತಿದ್ದ ಭಾರತ, ಇದೀಗ ಅದೇ ಇಂಗ್ಲೆಂಡ್ ವಿರುದ್ಧ ಗೆದ್ದಿದೆ. ಇದರೊಂದಿಗೆ ಭಾರತ ತಂಡ ವಿಶೇಷ ದಾಖಲೆಯೊಂದು ನಿರ್ಮಿಸಿದೆ.

ಗಯಾನಾದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ 10 ವರ್ಷಗಳ ಆಗದ ಸಾಧನೆಯೊಂದನ್ನು ಮಾಡಿದೆ. 2014ರಿಂದ ಟಿ20 ವಿಶ್ವಕಪ್‌ನ ನಾಕೌಟ್ ಹಂತಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯಾವುದೇ ತಂಡವು ಪಂದ್ಯವನ್ನು ಗೆದ್ದಿಲ್ಲ. ಅದು ಕೊನೆಗೂ 2024ರ ಎರಡನೇ ಸೆಮಿಫೈನಲ್‌ನಲ್ಲಿ ಸುಳ್ಳಾಗಿದೆ. ಭಾರತವು ಇಂಗ್ಲೆಂಡ್‌ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಗೆದ್ದು ಟಿ20 ವಿಶ್ವಕಪ್ ಫೈನಲ್ ತಲುಪಿದೆ. 2014ರ ಬಳಿಕ ಭಾರತ ಆಡುತ್ತಿರುವ ಮೊದಲ ಟಿ20 ವಿಶ್ವಕಪ್ ಫೈನಲ್ ಇದಾಗಿದೆ. (ಚಿತ್ರ ಕೃಪೆ ಪಿಟಿಐ)
icon

(1 / 5)

ಗಯಾನಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್‌ 16.4 ಓವರ್ ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ವಿರುದ್ಧ ಭಾರತ 68 ರನ್‌ಗಳ ಭರ್ಜರಿ ಜಯ ಸಿಕ್ಕಿತು. ಎರಡು ವರ್ಷಗಳ ಹಿಂದೆ ಅಡಿಲೇಡ್‌ನಲ್ಲಿ ನಡೆದ ಸೆಮಿಕದನದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದಕ್ಕೆ ಸೇಡು ತೀರಿಸಿಕೊಂಡ ಭಾರತ ಈ ಬಾರಿ ಭರ್ಜರಿ ಜಯ ಸಾಧಿಸಿದೆ.
icon

(2 / 5)

ಗಯಾನಾದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್‌ 16.4 ಓವರ್ ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ವಿರುದ್ಧ ಭಾರತ 68 ರನ್‌ಗಳ ಭರ್ಜರಿ ಜಯ ಸಿಕ್ಕಿತು. ಎರಡು ವರ್ಷಗಳ ಹಿಂದೆ ಅಡಿಲೇಡ್‌ನಲ್ಲಿ ನಡೆದ ಸೆಮಿಕದನದಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದಕ್ಕೆ ಸೇಡು ತೀರಿಸಿಕೊಂಡ ಭಾರತ ಈ ಬಾರಿ ಭರ್ಜರಿ ಜಯ ಸಾಧಿಸಿದೆ.(AP)

2014ರಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ತಂಡವನ್ನು 27 ರನ್‌ಗಳಿಂದ ಮಣಿಸಿತ್ತು. ಲಂಕಾ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಕೆರಿಬಿಯನ್ನರಿಂದ ಗುರಿ ತಲುಪಲು ಸಾಧ್ಯವಾಗಲಿಲ್ಲ. ಶ್ರೀಲಂಕಾ ಫೈನಲ್ ತಲುಪಿತು. ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಲಂಕಾ ವಿಶ್ವಕಪ್ ಗೆದ್ದಿತು. (ಫೈಲ್ ಫೋಟೋ, ಕೃಪೆ ಐಸಿಸಿ)
icon

(3 / 5)

2014ರ ವಿಶ್ವಕಪ್‌ ಸೆಮಿಫೈನಲ್ ಮತ್ತು ಫೈನಲ್ ನಡೆಯಿತು. ಇಲ್ಲೂ ಎರಡನೇ ಚೇಸಿಂಗ್ ಮಾಡಿದ ತಂಡ ಗೆದ್ದಿತು. ಅಂದಿನಿಂದ, 2016 ರ ವಿಶ್ವಕಪ್, 2021ರ ವಿಶ್ವಕಪ್ ಮತ್ತು 2022ರ ವಿಶ್ವಕಪ್‌ನಲ್ಲಿಯೂ ನಾಕೌಟ್‌ ಹಂತದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಗೆದ್ದಿಲ್ಲ. 2024ರ ಮೊದಲ ಸೆಮಿಫೈನಲ್‌ನಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯಿತು. ಆದರೆ ಎರಡನೇ ಸೆಮಿಯಲ್ಲಿ ಭಾರತ ಗೆದ್ದು ಹೊಸ ದಾಖಲೆ ನಿರ್ಮಿಸಿತು.
icon

(4 / 5)

2014ರ ವಿಶ್ವಕಪ್‌ ಸೆಮಿಫೈನಲ್ ಮತ್ತು ಫೈನಲ್ ನಡೆಯಿತು. ಇಲ್ಲೂ ಎರಡನೇ ಚೇಸಿಂಗ್ ಮಾಡಿದ ತಂಡ ಗೆದ್ದಿತು. ಅಂದಿನಿಂದ, 2016 ರ ವಿಶ್ವಕಪ್, 2021ರ ವಿಶ್ವಕಪ್ ಮತ್ತು 2022ರ ವಿಶ್ವಕಪ್‌ನಲ್ಲಿಯೂ ನಾಕೌಟ್‌ ಹಂತದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ತಂಡ ಗೆದ್ದಿಲ್ಲ. 2024ರ ಮೊದಲ ಸೆಮಿಫೈನಲ್‌ನಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯಿತು. ಆದರೆ ಎರಡನೇ ಸೆಮಿಯಲ್ಲಿ ಭಾರತ ಗೆದ್ದು ಹೊಸ ದಾಖಲೆ ನಿರ್ಮಿಸಿತು.(AP)

ಇದೀಗ ಈ ಬಾರಿಯ ಟೂರ್ನಿಯಲ್ಲಿ ಎರಡು ಅಜೇಯ ತಂಡಗಳು ಟಿ20 ವಿಶ್ವಕಪ್‌ ಫೈನಲ್ ಪಂದ್ಯವಾಡಲಿದೆ. ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯ ಸೋತಿಲ್ಲ. ಇತ್ತ ಭಾರತ ಕೂಡಾ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಫೈನಲ್ ತಲುಪಿದೆ. ಕೆನಡಾ ವಿರುದ್ಧದ ಪಂದ್ಯ ಮಾತ್ರ ಮಳೆಯಿಂದಾಗಿ ರದ್ದಾಗಿತ್ತು. ಇದುವರೆಗಗೂ ಯಾವುದೇ ತಂಡವು ಟಿ20 ವಿಶ್ವಕಪ್ ಅನ್ನು ಅಜೇಯವಾಗಿ ಗೆದ್ದಿಲ್ಲ. ಈ ಬಾರಿ ಯಾವುದೇ ತಂಡ ಗೆದ್ದರೂ ಅದು ದಾಖಲೆಯಾಗಲಿದೆ.
icon

(5 / 5)

ಇದೀಗ ಈ ಬಾರಿಯ ಟೂರ್ನಿಯಲ್ಲಿ ಎರಡು ಅಜೇಯ ತಂಡಗಳು ಟಿ20 ವಿಶ್ವಕಪ್‌ ಫೈನಲ್ ಪಂದ್ಯವಾಡಲಿದೆ. ದಕ್ಷಿಣ ಆಫ್ರಿಕಾ ಒಂದೇ ಒಂದು ಪಂದ್ಯ ಸೋತಿಲ್ಲ. ಇತ್ತ ಭಾರತ ಕೂಡಾ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆದ್ದು ಫೈನಲ್ ತಲುಪಿದೆ. ಕೆನಡಾ ವಿರುದ್ಧದ ಪಂದ್ಯ ಮಾತ್ರ ಮಳೆಯಿಂದಾಗಿ ರದ್ದಾಗಿತ್ತು. ಇದುವರೆಗಗೂ ಯಾವುದೇ ತಂಡವು ಟಿ20 ವಿಶ್ವಕಪ್ ಅನ್ನು ಅಜೇಯವಾಗಿ ಗೆದ್ದಿಲ್ಲ. ಈ ಬಾರಿ ಯಾವುದೇ ತಂಡ ಗೆದ್ದರೂ ಅದು ದಾಖಲೆಯಾಗಲಿದೆ.(AP)

ಇತರ ಗ್ಯಾಲರಿಗಳು