ಮಹಿಳೆಯರ ಏಷ್ಯಾಕಪ್ 2024: ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾದ್ದೇ ಮೇಲುಗೈ
- Women's Asia Cup 2024: ಇಂದಿನಿಂದ ಮಹಿಳೆಯರ ಏಷ್ಯಾಕಪ್ 2024 ಟೂರ್ನಿ ಪ್ರಾರಂಭವಾಗಲಿದ್ದು, ಮೊದಲ ದಿನವೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹೇಗಿದೆ?
- Women's Asia Cup 2024: ಇಂದಿನಿಂದ ಮಹಿಳೆಯರ ಏಷ್ಯಾಕಪ್ 2024 ಟೂರ್ನಿ ಪ್ರಾರಂಭವಾಗಲಿದ್ದು, ಮೊದಲ ದಿನವೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹೇಗಿದೆ?
(1 / 5)
ಮಹಿಳಾ ಏಷ್ಯಾ ಕಪ್ 2024 ಇಂದಿನಿಂದ (ಜುಲೈ 19) ಪ್ರಾರಂಭವಾಗಲಿದ್ದು, ಮೊದಲ ದಿನವೇ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪುರುಷರ ಟಿ20 ವಿಶ್ವಕಪ್ನಿಂದ ಹಿಡಿದು ವಿಶ್ವ ಲೆಜೆಂಡ್ಸ್ ಚಾಂಪಿಯನ್ ಶಿಪ್ವರೆಗೆ ಇಂಡೋ-ಪಾಕ್ ಒಂದು ತಿಂಗಳಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಟಿ20 ವಿಶ್ವಕಪ್ ಲೀಗ್ ಮತ್ತು ಲೆಜೆಂಡ್ಸ್ ಲೀಗ್ ಫೈನಲ್ನಲ್ಲಿ ಭಾರತವು ಪಾಕ್ ತಂಡವನ್ನು ಮಣಿಸಿದೆ.
(2 / 5)
ಭಾರತ-ಪಾಕಿಸ್ತಾನ ತಂಡಗಳು ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 11 ಬಾರಿ ಮುಖಾಮುಖಿಯಾಗಿದ್ದು, ಮೆನ್ ಇನ್ ಬ್ಲ್ಯೂ ತಂಡವೇ ಎಲ್ಲಾ ಪಂದ್ಯಗಳನ್ನೂ ಗೆದ್ದು ಏಕಪಕ್ಷೀಯವಾಗಿ ಪ್ರಾಬಲ್ಯ ಸಾಧಿಸಿದೆ. ಉಭಯ ತಂಡಗಳು ಟೆಸ್ಟ್ನಲ್ಲಿ ಇದುವರೆಗೂ ಮುಖಾಮುಖಿ ಆಗಿಯೇ ಇಲ್ಲ. ಹಾಗಾದರೆ ಟಿ20ಐ ದಾಖಲೆ ಹೇಗಿದೆ? ಇಲ್ಲಿದೆ ವಿವರ.
(3 / 5)
ಮಹಿಳಾ ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ 14 ಬಾರಿ ಮುಖಾಮುಖಿಯಾಗಿವೆ. ಇಲ್ಲೂ ಭಾರತವೇ ಮೇಲುಗೈ ಸಾಧಿಸಿದೆ. 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಟೀಮ್ ಇಂಡಿಯಾ ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ.
(4 / 5)
2012ರಲ್ಲಿ ಶ್ರೀಲಂಕಾದ ಗಾಲೆಯಲ್ಲಿ ನಡೆದ ಟಿ 20 ವಿಶ್ವಕಪ್ನಲ್ಲಿ ಭಾರತ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ ಸೋತಿತು, ನಂತರ 2016ರಲ್ಲಿ ದೆಹಲಿಯಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಮಹಿಳಾ ತಂಡವು ಭಾರತವನ್ನು ಸೋಲಿಸಿತ್ತು. 2022ರಲ್ಲಿ ಬಾಂಗ್ಲಾದೇಶದ ಸಿಲ್ಹೆಟ್ನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನವು ಭಾರತ ತಂಡವನ್ನು ಸೋಲಿಸಿತು.
ಇತರ ಗ್ಯಾಲರಿಗಳು