ನಿಂತಲ್ಲೇ ಕುಸಿದು ಬಿಕ್ಕಿ ಬಿಕ್ಕಿ ಅತ್ತ ಹಾರ್ದಿಕ್; ಭಾವುಕರಾದ ರೋಹಿತ್-ಕೊಹ್ಲಿ, ಗದ್ಗದಿತರಾದ ಸಿರಾಜ್ -ಕಪ್ ಗೆಲುವಿನ ಭಾವುಕ ಕ್ಷಣಗಳು
- ಕೊನೆಗೂ 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿದೆ. ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಒಂದು ಹಂತದಲ್ಲಿ ಸೋಲುವ ಹಂತದಲ್ಲಿದ್ದ ಭಾರತ ಅಮೋಘ ಕಂಬ್ಯಾಕ್ ಮಾಡಿ ಗೆದ್ದಿದೆ. ಇದು ಇಂಡಿಯಾ ಆಟಗಾರರಿಗೆ ಖುಷಿಯ ಕ್ಷಣ ಮಾತ್ರವಲ್ಲದೆ ಭಾವನಾತ್ಮಕವೂ ಆಗಿತ್ತು. ವಿರಾಟ್, ರೋಹಿತ್, ಹಾರ್ದಿಕ್, ಸಿರಾಜ್ ಸೇರಿದಂತೆ ಆಟಗಾರರ ಕಣ್ಣಂಚಲ್ಲಿ ನೀರು ಜಿನುಗಿದೆ.

(1 / 8)
ಹಾರ್ದಿಕ್ ಪಾಂಡ್ಯ ಎಸೆದ ಕೊನೆಯ ಎಸೆತದಲ್ಲಿ ಭಾರತದ ಗೆಲುವು ಖಚಿತವಾದಂತೆ, ಹಾರ್ದಿಕ್ ನಿಂತಲ್ಲೇ ಕುಸಿದು ಕಣ್ಣಿರು ಸುರಿಸಿದ್ದಾರೆ. ಐಪಿಎಲ್ ಸಮಯದಲ್ಲಿ ಭಾರತೀಯರಿಂದಲೇ ಸಾಕಷ್ಟು ಟೀಕೆ, ಆಕ್ರೋಶಕ್ಕೆ ಗುರಿಯಾಗಿ ವಿಲನ್ ಆಗಿದ್ದ ಹಾರ್ದಿಕ್ ಇಂದು ಭಾರತೀಯರಿಗೆ ಹೀರೋ ಆಗಿದ್ದಾರೆ.
(2 / 8)
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್‌ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಗಿಸೊ ರಬಾಡ ವಿಕೆಟ್ ಪಡೆದು ಭಾವುಕರಾದ ಹಾರ್ದಿಕ್ ಪಾಂಡ್ಯ.
(AP)(3 / 8)
ಭಾರತದ ಗೆಲುವು ಖಚಿತವಾದಾಗ ಕುಸಿದ ಹಾರ್ದಿಕ್ ಪಾಂಡ್ಯ, ದೂರದಿಂದಲೇ ಸಂಭ್ರಮಿಸುತ್ತಿರುವ ವಿರಾಟ್ ಕೊಹ್ಲಿ.
(REUTERS)(5 / 8)
ದಕ್ಷಿಣ ಆಫ್ರಿಕಾ ವಿರುದ್ಧ ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವನ್ನು ಗೆದ್ದ ನಂತರ ಭಾರತದ ನಾಯಕ ರೋಹಿತ್ ಶರ್ಮಾ ಸಂಭ್ರಮಿಸಿದರು. ನಿಂತಲ್ಲೇ ನೆಲಕ್ಕೆ ಕುಸಿದ ಹಿಟ್‌ಮ್ಯಾನ್, ಕೆಲಕಾಲ ಮೌನವಾಗಿದ್ದರು.
(BCCI-X)ಇತರ ಗ್ಯಾಲರಿಗಳು