ಕನ್ನಡ ಸುದ್ದಿ  /  Photo Gallery  /  Cricket News Indian Premier League Who Is Richest Captain In Ipl Ms Dhoni Rohit Sharma Hardik Pandya Shikhar Dhawan Jra

Richest Captain in IPL: ಶ್ರೀಮಂತ ಕ್ರಿಕೆಟ್ ಲೀಗ್‌ನ ಶ್ರೀಮಂತ ನಾಯಕರಿವರು; ಇವರ ಆದಾಯ ಕೋಟಿ ಕೋಟಿ

  • Richest Captain in Ipl : ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎಂಬ ಪಟ್ಟ ಐಪಿಎಲ್‌ಗಿದೆ. ಇದರಲ್ಲಿ ಭಾಗವಹಿಸುವ ಆಟಗಾರರು ಕೂಡಾ ಸಾಕಷ್ಟು ಹಣ ಗಳಿಸುತ್ತಾರೆ. ಭಾರತದಲ್ಲಿ ಕ್ರಿಕೆಟ್‌ ಎಂಬುದೇ ಅತ್ಯಂತ ಶ್ರೀಮಂತ. ಹೀಗಾಗಿ ಐಪಿಎಲ್‌ನಲ್ಲಿ ಆಡುತ್ತಿರುವವರಲ್ಲಿ ಅತ್ಯಂತ ಶ್ರೀಮಂತ ನಾಯಕ ಯಾರು ಎಂಬುದನ್ನು ಇಲ್ಲಿ ನೋಡಿ.

ಐಪಿಎಲ್​​​​​​​​ನಲ್ಲಿ ಅತ್ಯಂತ ಶ್ರೀಮಂತ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಎಂಎಸ್​ ಧೋನಿಗೆ ಅಗ್ರಸ್ಥಾನ. 
icon

(1 / 6)

ಐಪಿಎಲ್​​​​​​​​ನಲ್ಲಿ ಅತ್ಯಂತ ಶ್ರೀಮಂತ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಎಂಎಸ್​ ಧೋನಿಗೆ ಅಗ್ರಸ್ಥಾನ. (photos- iplt20.com)

MS Dhoni : ಇಂಡಿಯನ್ ಪ್ರೀಮಿಯರ್ ಲೀಗ್‌ನ ಶ್ರೀಮಂತ ನಾಯಕರ ಪಟ್ಟಿಯಲ್ಲಿ ಎಂಎಸ್ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 860 ಕೋಟಿ ರೂಪಾಯಿ. ಧೋನಿ 2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಐಪಿಎಲ್, ಜಾಹೀರಾತುಗಳು ಮತ್ತು ತಮ್ಮದೇ ವ್ಯವಹಾರಗಳು ಅವರ ಮುಖ್ಯ ಆದಾಯದ ಮೂಲವಾಗಿದೆ. ಇದಲ್ಲದೆ, ಅವರು ಸಾಮಾಜಿಕ ಮಾಧ್ಯಮ ಖಾತೆಗಳಿಂದಲೂ ಸಾಕಷ್ಟು ಸಂಪಾದಿಸುತ್ತಾರೆ.
icon

(2 / 6)

Rohit Sharma : ರೋಹಿತ್ ಶರ್ಮಾ ಐಪಿಎಲ್‌ನ ಎರಡನೇ ಶ್ರೀಮಂತ ನಾಯಕ. ಅವರು 147 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದರೊಂದಿಗೆ ರೋಹಿತ್ ಟೀಂ ಇಂಡಿಯಾದ ಎ+ ಕೆಟಗರಿ ಕ್ರಿಕೆಟಿಗರಾಗಿದ್ದಾರೆ. ಬಿಸಿಸಿಐ ಒಪ್ಪಂದ, ಐಪಿಎಲ್, ಜಾಹೀರಾತುಗಳು ಮತ್ತು ಇನ್‌ಸ್ಟಾಗ್ರಾಮ್ ಅವರ ಆದಾಯದ ಮೂಲಗಳಾಗಿವೆ.
icon

(3 / 6)

Shikhar Dhawan : ಈ ಪಟ್ಟಿಯಲ್ಲಿ ಶಿಖರ್ ಧವನ್ ಮೂರನೇ ಸ್ಥಾನದಲ್ಲಿದ್ದಾರೆ. ಶಿಖರ್ ಐಪಿಎಲ್ 2023ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಶಿಖರ್ ಧವನ್ 96 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ಐಪಿಎಲ್, ಬಿಸಿಸಿಐ ಒಪ್ಪಂದ ಮತ್ತು ಜಾಹೀರಾತುಗಳು ಅವರ ಮುಖ್ಯ ಆದಾಯದ ಮೂಲಗಳಾಗಿವೆ. ಧವನ್ ಅವರನ್ನು ಬಿಸಿಸಿಐನ ಸಿ ಗ್ರೇಡ್‌ ಪಟ್ಟಿಯಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ.
icon

(4 / 6)

hardik pandya : ಶ್ರೀಮಂತ ನಾಯಕರ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಸಂಪತ್ತು 77 ಕೋಟಿ ರೂಪಾಯಿ. ಹಲವು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಪರ ಆಡಿದ ಅವರು ಕಳೆದ ವರ್ಷ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದರು. ಬಿಸಿಸಿಐ ಒಪ್ಪಂದ, ಐಪಿಎಲ್ ಮತ್ತು ಜಾಹೀರಾತುಗಳು ಹಾರ್ದಿಕ್ ಅವರ ಆದಾಯದ ಮೂಲವಾಗಿದೆ.
icon

(5 / 6)

KL RAHUL : ಶ್ರೀಮಂತ ನಾಯಕರ ಪಟ್ಟಿಯಲ್ಲಿ ಕೆಎಲ್ ರಾಹುಲ್ ಐದನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಸಂಪತ್ತು ಮೌಲ್ಯ 75 ಕೋಟಿ ರೂಪಾಯಿ. ವರದಿಗಳ ಪ್ರಕಾರ, ಕೆಎಲ್ ರಾಹುಲ್ ಜಾಹೀರಾತಿಗೆ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಬಿಸಿಸಿಐ ಒಪ್ಪಂದ, ಐಪಿಎಲ್ ಮತ್ತು ಜಾಹೀರಾತುಗಳು ಅವರ ಮುಖ್ಯ ಆದಾಯದ ಮೂಲಗಳಾಗಿವೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು