ಕನ್ನಡ ಸುದ್ದಿ  /  Photo Gallery  /  Cricket News Ipl 2023 Final List Of Players Scored Most Runs In Ipl Season Virat Kohli Shubman Gill Jos Buttler Jra

IPL 2023: ಬಟ್ಲರ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ನೆಗೆದ ಶುಬ್ಮನ್ ಗಿಲ್; ಮುರಿಯಲಾಗಲಿಲ್ಲ ಕಿಂಗ್ ಕೊಹ್ಲಿ ದಾಖಲೆ

  • Most Runs in IPL Season: ಐಪಿಎಲ್‌ 16ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಶುಬ್ಮನ್‌ ಗಿಲ್‌ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ಪರ‌ 2018ರ ಐಪಿಎಲ್‌ ಆವೃತ್ತಿಯಲ್ಲಿ ಆಡುತ್ತಿದ್ದಾಗ ಕೇನ್ ವಿಲಿಯಮ್ಸನ್ 735 ರನ್ ಪೇರಿಸಿದ್ದರು. ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು ಐದನೇ ಸ್ಥಾನದಲ್ಲಿದ್ದಾರೆ.
icon

(1 / 6)

2016ರ ಐಪಿಎಲ್‌ ಆವೃತ್ತಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಿದ್ದ ಡೇವಿಡ್ ವಾರ್ನರ್ 848 ರನ್‌ ಗಳಿಸಿದ್ದರು. ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.
icon

(2 / 6)

ರಾಜಸ್ಥಾನ ರಾಯಲ್ಸ್‌ ತಂಡದ ಆರಂಭಿಕ ಆಟಗಾರ ಜೋಸ್ ಬಟ್ಲರ್ 2022ರ ಆವೃತ್ತಿಯಲ್ಲಿ 863 ರನ್‌ ಸಿಡಿಸಿದ್ದರು. ಇವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
icon

(3 / 6)

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ 39 ರನ್‌ ಗಳಿಸುವ ಮೂಲಕ, ಗುಜರಾತ್‌ ಟೈಟಾನ್ಸ್‌ ತಂಡದ ಆಟಗಾರ ಶುಬ್ಮನ್‌ ಗಿಲ್‌, ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ಒಟ್ಟು 890 ರನ್‌ ಕಲೆ ಹಾಕಿದ್ದಾರೆ. ಆ ಮೂಲಕ ಕಳೆದ ಆವೃತ್ತಿಯಲ್ಲಿ ಬಟ್ಲರ್‌ ಗಳಿಸಿದ್ದ 863 ರನ್‌ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಆ ಮೂಲಕ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
icon

(4 / 6)

ಆರ್‌ಸಿಬಿ ತಂಡದ ಪ್ರಮುಖ ಬ್ಯಾಟರ್‌ ವಿರಾಟ್‌ ಕೊಹ್ಲಿ, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಈ ದಾಖಲೆ ಇನ್ನೂ ಯಾರಿಂದಲೂ ಮುರಿಯಲಾಗಿಲ್ಲ. ಈ ಬಾರಿ ಗಿಲ್‌ ಮೇಲೆ ಈ ನಿರೀಕ್ಷೆ ಇತ್ತು. ಆದರೆ, ಫೈನಲ್‌ ಪಂದ್ಯದಲ್ಲಿ ಶತಕ ಸಿಡಿಸಲು ವಿಫಲರಾದ ಅವರು ಕೊಹ್ಲಿ ದಾಖಲೆಯನ್ನು ಬ್ರೇಕ್‌ ಮಾಡಲು ಸಾಧ್ಯವಾಗಿಲ್ಲ2016 ಐಪಿಎಲ್‌ ಆವೃತ್ತಿಯಲ್ಲಿ ಆರೇಂಜ್‌ ಕ್ಯಾಪ್‌ ಪಡೆದ ಕೊಹ್ಲಿ, ಬರೋಬ್ಬರಿ 973 ರನ್‌ ಸಿಡಿಸಿದ್ದರು. 
icon

(5 / 6)

ಐಪಿಎಲ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರರ ಪಟ್ಟಿ ಹೀಗಿದೆ.
icon

(6 / 6)

ಐಪಿಎಲ್‌ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಸಿಡಿಸಿದ ಆಟಗಾರರ ಪಟ್ಟಿ ಹೀಗಿದೆ.

IPL_Entry_Point

ಇತರ ಗ್ಯಾಲರಿಗಳು