ಕನ್ನಡ ಸುದ್ದಿ  /  Photo Gallery  /  Cricket News Ipl 2023 Lsg Vs Gt Kl Rahul Breaks Virat Kohli S Record Of Fastest Indian To Score 7000 T20 Runs Prs

KL Rahul Record: ಟಿ20 ಕ್ರಿಕೆಟ್​​​ನಲ್ಲಿ ಕೆಎಲ್​​ ರಾಹುಲ್​ ಹೊಸ ಮೈಲಿಗಲ್ಲು; ವೇಗದ ರನ್​ ಗಳಿಕೆಯಲ್ಲಿ​ ಕೊಹ್ಲಿ ದಾಖಲೆ ಮುರಿದ ಕನ್ನಡಿಗ

  • 16ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​​​ನ 30ನೇ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​​ ಗೆದ್ದು ಬೀಗಿತು. ಆದರೆ ಸುಲಭವಾಗಿ ಗೆಲುವು ಸಾಧಿಸುವ ಅವಕಾಶವಿದ್ದ ಲಕ್ನೋ ಸೂಪರ್​ ಜೈಂಟ್ಸ್​​​ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಲಕ್ನೋ ತಂಡದ ನಾಯಕ ಭರ್ಜರಿ ಅರ್ಧಶತಕ ಸಿಡಿಸಿದ ವಿರಾಟ್​ ಕೊಹ್ಲಿ ದಾಖಲೆಯನ್ನು ಉಡೀಸ್​ ಮಾಡಿದ್ದಾರೆ.
  •  

ಏಕನಾ ಕ್ರಿಕೆಟ್​ ಮೈದಾನದಲ್ಲಿ ನಡೆದ ಐಪಿಎಲ್​ನ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​​ವಿರುದ್ಧ ಗುಜರಾತ್​ ಟೈಟಾನ್ಸ್​ ಅಂತಿಮ ಓವರ್​​ನಲ್ಲಿ ಗೆಲುವು ದಾಖಲಿಸಿತು. ಲಕ್ನೋ ಗೆಲುವಿಗೆ ಕೊನೆಯ ಓವರ್​​​ನಲ್ಲಿ 12 ರನ್​ ಬೇಕಿದ್ದಾಗ ಬೌಲಿಂಗ್​ ಮಾಡಿದ ಮೋಹಿತ್​ ಶರ್ಮಾ ಕೇವಲ 4 ರನ್​ ನೀಡಿ, 4 ವಿಕೆಟ್​ ಉರುಳಿಸಿದರು. ಎರಡು ಕ್ಯಾಚ್​, ಎರಡು ರನೌಟ್​ ಕೂಡ ಸೇರಿವೆ.
icon

(1 / 6)

ಏಕನಾ ಕ್ರಿಕೆಟ್​ ಮೈದಾನದಲ್ಲಿ ನಡೆದ ಐಪಿಎಲ್​ನ 30ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​​ವಿರುದ್ಧ ಗುಜರಾತ್​ ಟೈಟಾನ್ಸ್​ ಅಂತಿಮ ಓವರ್​​ನಲ್ಲಿ ಗೆಲುವು ದಾಖಲಿಸಿತು. ಲಕ್ನೋ ಗೆಲುವಿಗೆ ಕೊನೆಯ ಓವರ್​​​ನಲ್ಲಿ 12 ರನ್​ ಬೇಕಿದ್ದಾಗ ಬೌಲಿಂಗ್​ ಮಾಡಿದ ಮೋಹಿತ್​ ಶರ್ಮಾ ಕೇವಲ 4 ರನ್​ ನೀಡಿ, 4 ವಿಕೆಟ್​ ಉರುಳಿಸಿದರು. ಎರಡು ಕ್ಯಾಚ್​, ಎರಡು ರನೌಟ್​ ಕೂಡ ಸೇರಿವೆ.(AFP)

ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್ ಟೈಟಾನ್ಸ್​ ತಂಡವನ್ನು ಲಕ್ನೋ ಬೌಲರ್​ಗಳು ಕಟ್ಟಿ ಹಾಕಿದರು. ಕೃನಾಲ್​ ಪಾಂಡ್ಯ ಮತ್ತು ಮಾರ್ಕಸ್​ ಸ್ಟೋಯ್ನಿಸ್​ ತಲಾ 2 ವಿಕೆಟ್​ ಪಡೆದು ಮಿಂಚಿದರು. ಪರಿಣಾಮ ಗುಜರಾತ್​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 135 ರನ್​ ಗಳಿಸಿತು.
icon

(2 / 6)

ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್ ಟೈಟಾನ್ಸ್​ ತಂಡವನ್ನು ಲಕ್ನೋ ಬೌಲರ್​ಗಳು ಕಟ್ಟಿ ಹಾಕಿದರು. ಕೃನಾಲ್​ ಪಾಂಡ್ಯ ಮತ್ತು ಮಾರ್ಕಸ್​ ಸ್ಟೋಯ್ನಿಸ್​ ತಲಾ 2 ವಿಕೆಟ್​ ಪಡೆದು ಮಿಂಚಿದರು. ಪರಿಣಾಮ ಗುಜರಾತ್​ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 135 ರನ್​ ಗಳಿಸಿತು.(IPL Twitter)

ಗುಜರಾತ್​ ತಂಡದ ನಾಯಕ ಹಾರ್ದಿಕ್​ ಅಮೋಘ ಅರ್ಧಶತಕ ಸಿಡಿಸಿದರು. 50 ಎಸೆತಗಳಲ್ಲಿ ಭರ್ಜರಿ 4 ಸಿಕ್ಸರ್​​, 2 ಬೌಂಡರಿಗಳ ನೆರವಿನಿಂದ 66 ರನ್​ ಚಚ್ಚಿದರು.
icon

(3 / 6)

ಗುಜರಾತ್​ ತಂಡದ ನಾಯಕ ಹಾರ್ದಿಕ್​ ಅಮೋಘ ಅರ್ಧಶತಕ ಸಿಡಿಸಿದರು. 50 ಎಸೆತಗಳಲ್ಲಿ ಭರ್ಜರಿ 4 ಸಿಕ್ಸರ್​​, 2 ಬೌಂಡರಿಗಳ ನೆರವಿನಿಂದ 66 ರನ್​ ಚಚ್ಚಿದರು.(IPL Twitter)

ಲಕ್ನೋ ತಂಡದ ಪರ ಆಕರ್ಷಕ ಅರ್ಧಶತಕ ಸಿಡಿಸಿದ್ದ ನಾಯಕ ಕೆಎಲ್​ ರಾಹುಲ್​ ಕೊನೆಯವರೆಗೂ ಕ್ರೀಸ್​ನಲ್ಲಿ ಇದ್ದರೂ ಗೆಲುವು ತಂದುಕೊಡಲು ವಿಫಲರಾದರು. ಅಂತಿಮವಾಗಿ ಲಕ್ನೋ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 128 ರನ್​ ಗಳಿಸಿ 7 ರನ್​ಗಳಿಂದ ಶರಣಾಯಿತು.
icon

(4 / 6)

ಲಕ್ನೋ ತಂಡದ ಪರ ಆಕರ್ಷಕ ಅರ್ಧಶತಕ ಸಿಡಿಸಿದ್ದ ನಾಯಕ ಕೆಎಲ್​ ರಾಹುಲ್​ ಕೊನೆಯವರೆಗೂ ಕ್ರೀಸ್​ನಲ್ಲಿ ಇದ್ದರೂ ಗೆಲುವು ತಂದುಕೊಡಲು ವಿಫಲರಾದರು. ಅಂತಿಮವಾಗಿ ಲಕ್ನೋ 20 ಓವರ್​​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 128 ರನ್​ ಗಳಿಸಿ 7 ರನ್​ಗಳಿಂದ ಶರಣಾಯಿತು.(PTI)

ಗುಜರಾತ್​ ಎದುರು ಅರ್ಧಶತಕ ಸಿಡಿಸುವ ಮೂಲಕ ಕೆಎಲ್​ ರಾಹುಲ್​ ಟಿ20 ಕ್ರಿಕೆಟ್​​​ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಚುಟುಕು ಫಾರ್ಮೆಟ್​ನಲ್ಲಿ ಭಾರತದ ಪರ ವೇಗದ 7000 ರನ್​​ ಗಳಿಸಿದ್ದಾರೆ.
icon

(5 / 6)

ಗುಜರಾತ್​ ಎದುರು ಅರ್ಧಶತಕ ಸಿಡಿಸುವ ಮೂಲಕ ಕೆಎಲ್​ ರಾಹುಲ್​ ಟಿ20 ಕ್ರಿಕೆಟ್​​​ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಟೀಮ್​ ಇಂಡಿಯಾ ಮಾಜಿ ನಾಯಕ ಹಾಗೂ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ. ಚುಟುಕು ಫಾರ್ಮೆಟ್​ನಲ್ಲಿ ಭಾರತದ ಪರ ವೇಗದ 7000 ರನ್​​ ಗಳಿಸಿದ್ದಾರೆ.

ಇದಕ್ಕೂ ಮೊದಲು ಟಿ20 ಕ್ರಿಕೆಟ್​ನಲ್ಲಿ ವಿರಾಟ್​​ ಕೊಹ್ಲಿ ವೇಗದ 7000 ರನ್​ ಸಿಡಿಸಿದ ಭಾರತದ ಮೊದಲ ಆಟಗಾರ ಎನಿಸಿದ್ದರು. ವಿರಾಟ್​ ಕೊಹ್ಲಿ 212 ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೀಗ ಕೆಎಲ್​ ರಾಹುಲ್​​ ಕೇವಲ 197 ಇನ್ನಿಂಗ್ಸ್​ಗಳಲ್ಲಿ 7 ಸಾವಿರ ರನ್​ ಸಿಡಿಸಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.
icon

(6 / 6)

ಇದಕ್ಕೂ ಮೊದಲು ಟಿ20 ಕ್ರಿಕೆಟ್​ನಲ್ಲಿ ವಿರಾಟ್​​ ಕೊಹ್ಲಿ ವೇಗದ 7000 ರನ್​ ಸಿಡಿಸಿದ ಭಾರತದ ಮೊದಲ ಆಟಗಾರ ಎನಿಸಿದ್ದರು. ವಿರಾಟ್​ ಕೊಹ್ಲಿ 212 ಇನ್ನಿಂಗ್ಸ್​​ಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೀಗ ಕೆಎಲ್​ ರಾಹುಲ್​​ ಕೇವಲ 197 ಇನ್ನಿಂಗ್ಸ್​ಗಳಲ್ಲಿ 7 ಸಾವಿರ ರನ್​ ಸಿಡಿಸಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ.


IPL_Entry_Point

ಇತರ ಗ್ಯಾಲರಿಗಳು