ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್-2024 ಮಿಡ್ ಸೀಸನ್ ರಿವ್ಯೂ; ಶಶಾಂಕ್​ನಿಂದ ಮಯಾಂಕ್​ವರೆಗೆ ಅಬ್ಬರಿಸಿ ಬೊಬ್ಬಿರಿದ ಅನ್​ಕ್ಯಾಪ್ಡ್ ಪ್ಲೇಯರ್ಸ್

ಐಪಿಎಲ್-2024 ಮಿಡ್ ಸೀಸನ್ ರಿವ್ಯೂ; ಶಶಾಂಕ್​ನಿಂದ ಮಯಾಂಕ್​ವರೆಗೆ ಅಬ್ಬರಿಸಿ ಬೊಬ್ಬಿರಿದ ಅನ್​ಕ್ಯಾಪ್ಡ್ ಪ್ಲೇಯರ್ಸ್

  • IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಲೀಗ್ ಹಂತದ ಮೊದಲಾರ್ಧ ಮುಕ್ತಾಯಗೊಂಡಿದೆ. ಈ ನಡುವೆ ಅಬ್ಬರಿಸಿ ಬೊಬ್ಬರಿದ ಭಾರತದ ಅನ್​ಕ್ಯಾಪ್ಡ್​ ಪ್ಲೇಯರ್ಸ್ ಯಾರು ಎಂಬುದನ್ನು ಈ ಮುಂದೆ ನೋಡೋಣ.

ಲಕ್ನೋ ಸೂಪರ್ ಜೈಂಟ್ಸ್ ಪರ ಕಳೆದ 2 ಋತುಗಳಿಂದಲೂ ಆಡುತ್ತಿರುವ ಮಯಾಂಕ್ ಯಾದವ್, 2024ರ ಐಪಿಎಲ್​ನಲ್ಲಿ ಅವಕಾಶ ಪಡೆದು ಮಿಂಚಿದ್ದಾರೆ. ಈ ವರ್ಷ ಪದಾರ್ಪಣೆ ಮಾಡಿದ ಮಯಾಂಕ್, ಗಂಟೆಗೆ 156.7 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಗಂಟೆಗೆ 150 ಕಿ.ಮೀ ವೇಗದಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಲಕ್ನೋದ ವೇಗಿ ವೇಗಕ್ಕಾಗಿ ಮಾತ್ರವಲ್ಲ, ವಿಕೆಟ್ ಪಡೆಯುವ ಸಾಮರ್ಥ್ಯಕ್ಕಾಗಿಯೂ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ 6 ವಿಕೆಟ್ ಕಬಳಿಸಿದ್ದ ಮಯಾಂಕ್, ಸದ್ಯ ಗಾಯಗೊಂಡಿದ್ದಾರೆ.
icon

(1 / 6)

ಪ್ರತಿ ಸೀಸನ್​​ನಲ್ಲೂ ಟ್ರೋಲ್​ಗಳಿಂದಲೇ ಸುದ್ದಿಯಾಗುತ್ತಿದ್ದ ರಾಜಸ್ಥಾನ್ ರಾಯಲ್ಸ್​ ತಂಡದ ರಿಯಾನ್ ಪರಾಗ್, 2024ರ ಐಪಿಎಲ್​ನಲ್ಲಿ ತನ್ನ ಖದರ್​ ತೋರಿಸಿದ್ದಾರೆ. ಸಾಕಷ್ಟು ಪ್ರಬುದ್ಧತೆಯ ಆಟವಾಡುತ್ತಿರುವ ಪರಾಗ್, ಐಪಿಎಲ್ 2024ರ ಮೊದಲ 7 ಇನ್ನಿಂಗ್ಸ್​​ಗಳಲ್ಲಿ 63.60 ಬ್ಯಾಟಿಂಗ್ ಸರಾಸರಿಯಲ್ಲಿ 318 ರನ್ ಗಳಿಸಿದ್ದಾರೆ. ಅದರಲ್ಲಿ 3 ಅರ್ಧಶತಕ ಸೇರಿವೆ. 161.42 ಸ್ಟ್ರೈಕ್​ರೇಟ್​​ನಲ್ಲಿ ರನ್ ಗಳಿಸಿದ ರಿಯಾನ್ 22 ಬೌಂಡರಿ, 20 ಸಿಕ್ಸರ್ ಬಾರಿಸಿದ್ದಾರೆ.
icon

(2 / 6)

ರಿಯಾನ್ ಅವರಂತೆಯೇ ಸನ್​ರೈಸರ್ಸ್​ ಹೈದರಾಬಾದ್​​ನ ಅಭಿಷೇಕ್ ಶರ್ಮಾ ಈಗಾಗಲೇ ಐಪಿಎಲ್ ವೇದಿಕೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ. ಪ್ರಸಕ್ತ ಐಪಿಎಲ್​​ನ ಮೊದಲ 7 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ ಅಭಿಷೇಕ್ 37ರ ಸರಾಸರಿಯಲ್ಲಿ 257 ರನ್ ಗಳಿಸಿದ್ದಾರೆ. 216ರ ಸ್ಟ್ರೈಕ್​ರೇಟ್​​​ನಲ್ಲಿ ರನ್ ಗಳಿಸಿರುವ ಅಭಿಷೇಕ್, ಈವರೆಗೆ 18 ಬೌಂಡರಿ ಮತ್ತು 24 ಸಿಕ್ಸರ್​ ಬಾರಿಸಿದ್ದಾರೆ.
icon

(3 / 6)

32 ವರ್ಷದ ಶಶಾಂಕ್ ಸಿಂಗ್​ ಯುವ ಆಟಗಾರನಲ್ಲದಿದ್ದರೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಐಪಿಎಲ್ 2024ರ ಮೊದಲ 7 ಇನ್ನಿಂಗ್ಸ್​​ಗಳಲ್ಲಿ 187 ರನ್ ಗಳಿಸಿದ್ದರು. 62.33ರ ಸರಾಸರಿ ಹಾಗೂ 179.80ರ ಸ್ಟ್ರೈಕ್ ರೇಟ್ ಹೊಂದಿರುವ ಶಶಾಂಕ್ ಒಂದು ಅರ್ಧಶತಕ ಬಾರಿಸಿದ್ದಾರೆ. ಅವರು 17 ಬೌಂಡರಿ ಮತ್ತು 10 ಸಿಕ್ಸರ್ ಬಾರಿಸಿದ್ದಾರೆ.
icon

(4 / 6)

ಪಂಜಾಬ್ ಕಿಂಗ್ಸ್​​​ನ ಮತ್ತೊಬ್ಬ ದೇಶೀಯ ತಾರೆ ಅಶುತೋಷ್ ಶರ್ಮಾ ಪ್ರಸ್ತುತ ನಡೆಯುತ್ತಿರುವ ಐಪಿಎಲ್​​ನಲ್ಲಿ ಸಿಡಿಲಬ್ಬರದ ಬ್ಯಾಟ್​ನೊಂದಿಗೆ ಅಚ್ಚರಿ ಮೂಡಿಸುತ್ತಿದ್ದಾರೆ. ಫಿನಿಶರ್ ಆಗಿ ಅಶುತೋಷ್ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. 4 ಇನ್ನಿಂಗ್ಸ್​​​ನಲ್ಲಿ ಬ್ಯಾಟಿಂಗ್ ಮಾಡಿದ ಅಶುತೋಷ್ 52ರ ಸರಾಸರಿಯಲ್ಲಿ 156 ರನ್ ಗಳಿಸಿದ್ದಾರೆ. 205.26 ಸ್ಟ್ರೈಕ್ ರೇಟ್​​​​ನಲ್ಲಿ ರನ್ ಗಳಿಸಿದ್ದಾರೆ. ಅರ್ಧಶತಕ ಗಳಿಸಿರುವ ಅಶುತೋಷ್ ಈವರೆಗೆ 9 ಬೌಂಡರಿ ಮತ್ತು 13 ಸಿಕ್ಸರ್ ಬಾರಿಸಿದ್ದಾರೆ.
icon

(5 / 6)

ಭಾರತದ ಪರ ಅಂಡರ್​-19 ವಿಶ್ವಕಪ್ ಆಡಿದ ಆಂಗ್ಕ್ರಿಶ್ ರಘುವಂಶಿ ಐಪಿಎಲ್​​ನಲ್ಲಿ ಮೊದಲ ಅವಕಾಶದಲ್ಲೇ ಅದ್ಭುತ ಪ್ರದರ್ಶನ ನೀಡಿದರು. ಕೆಕೆಆರ್ ಪರ 4 ಇನ್ನಿಂಗ್ಸ್​​ಗಳಲ್ಲಿ ಬ್ಯಾಟಿಂಗ್ ಮಾಡಿದ ರಘುವಂಶಿ 28.75 ಸರಾಸರಿಯಲ್ಲಿ 115 ರನ್ ಗಳಿಸಿದ್ದಾರೆ. 166.66ರ ಸ್ಟ್ರೈಕ್ ರೇಟ್​​​ನಲ್ಲಿ ರನ್ ಗಳಿಸಿರುವ ಆಂಗ್ಕ್ರಿಶ್ 1 ಅರ್ಧಶತಕ ಬಾರಿಸಿದ್ದಾರೆ. 13 ಬೌಂಡರಿ, 5 ಸಿಕ್ಸರ್ ಬಾರಿಸಿದ್ದಾರೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು