ಐಪಿಎಲ್ 2024 ಉದ್ಘಾಟನಾ ಸಮಾರಂಭ: ಪ್ರದರ್ಶಕರು ಯಾರು? ವಿವಿಧ ದೇಶಗಳಲ್ಲಿ ಪಂದ್ಯ ವೀಕ್ಷಿಸೋದು ಹೇಗೆ?
- IPL 2024 Live: ಐಪಿಎಲ್ 17ನೇ ಆವೃತ್ತಿಯ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಚೆಪಾಕ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮದ ಬಳಿಕ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ನಡುವೆ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭ, ಮೊದಲ ಪಂದ್ಯ ಎಲ್ಲಿ ನಡೆಯಲಿದೆ? ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡುವವರು ಯಾರು ಎಂಬ ವಿವರ ಇಲ್ಲಿದೆ.
- IPL 2024 Live: ಐಪಿಎಲ್ 17ನೇ ಆವೃತ್ತಿಯ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ಚೆಪಾಕ್ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮದ ಬಳಿಕ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳ ನಡುವೆ ಟೂರ್ನಿಯ ಆರಂಭಿಕ ಪಂದ್ಯ ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭ, ಮೊದಲ ಪಂದ್ಯ ಎಲ್ಲಿ ನಡೆಯಲಿದೆ? ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡುವವರು ಯಾರು ಎಂಬ ವಿವರ ಇಲ್ಲಿದೆ.
(1 / 7)
ನೂತನ ನಾಯಕ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ 2024ರ ಐಪಿಎಲ್ ಪಂದ್ಯಾವಳಿಯ ಆರಂಭಿಕ ಪಂದ್ಯ ನಡೆಯಲಿದೆ. ಐಪಿಎಲ್ 2024 ರ ಉದ್ಘಾಟನಾ ಪಂದ್ಯಕ್ಕೆ ಮುಂಚಿತವಾಗಿ ಬಿಸಿಸಿಐ ಭವ್ಯ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.
(2 / 7)
ಐಪಿಎಲ್ ಉದ್ಘಾಟನಾ ಸಮಾರಂಭ ಮತ್ತು ಉದ್ಘಾಟನಾ ಪಂದ್ಯ ಯಾವಾಗ, ಎಲ್ಲಿ ಮತ್ತು ಯಾವಾಗ ನಡೆಯಲಿದೆ ಎಂಬುದನ್ನು ನೋಡೋಣ. ಅಲ್ಲದೆ ಯಾವ ಚಾನೆಲ್ ಮತ್ತು ಆನ್‌ಲೈನ್‌ನಲ್ಲಿ ಪಂದ್ಯವನ್ನು ಎಲ್ಲಿ ವೀಕ್ಷಿಸಬೇಕು ಎಂಬುದನ್ನು ತಿಳಿಯೋಣ.
(Twitter)(3 / 7)
ಉದ್ಘಾಟನಾ ಸಮಾರಂಭದಲ್ಲಿ ಸೆಲೆಬ್ರಿಟಿಗಳ ದಂಡು ಇರಲಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಖ್ಯಾತ ಗಾಯಕರಾದ ಎಆರ್ ರೆಹಮಾನ್, ಸೋನು ನಿಗಮ್ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಐಪಿಎಲ್ 2024ರ ಉದ್ಘಾಟನಾ ಸಮಾರಂಭವು, ಮಾರ್ 22ರ ಶುಕ್ರವಾರ ಸಂಜೆ 6: 30ಕ್ಕೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
(IPL X)(4 / 7)
ಐಪಿಎಲ್ 2024ರ ಆವೃತ್ತಿಯ ಮೊದಲ ಪಂದ್ಯವು ಮಾರ್ಚ್ 22, 2024ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. ಟಾಸ್ ಪ್ರಕ್ರಿಯೆಯು 30 ನಿಮಿಷ ಮುಂಚಿತವಾಗಿ ಅಂದರೆ ಸಂಜೆ 7:30 ಕ್ಕೆ ನಡೆಯಲಿದೆ.
(5 / 7)
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪಂದ್ಯಗಳನ್ನು ಟಟಿವಿ ಮೂಲಕ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇಂಗ್ಲೆಂಡ್‌ನಲ್ಲಿ ಪಂದ್ಯಗಳು ಸ್ಕೈ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿವೆ. ಆಸ್ಟ್ರೇಲಿಯಾದಲ್ಲಿ ಫಾಕ್ಸ್ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿವೆ. ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳನ್ನು ಗಾಜಿ ಟಿವಿಯಲ್ಲಿ ನೋಡಬಹುದು.
(RCB X)(6 / 7)
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಲೈವ್ ಸ್ಟ್ರೀಮ್ ಹಕ್ಕನ್ನು ವಯಾಕಾಮ್ 18 ಪಡೆದಿದೆ. ಹೀಗಾಗಿ ಭಾರತದಲ್ಲಿ, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಪಂದ್ಯಗಳನ್ನು ಸಂಪೂರ್ಣವಾಗಿ ಉಚಿತವಾಗಿ ನೋಡಬಹುದು.
(CSK X)ಇತರ ಗ್ಯಾಲರಿಗಳು