ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತವರಿನಲ್ಲಿ ಚೆನ್ನೈ ಭದ್ರಕೋಟೆ ಭೇದಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ-4ರೊಳಗೆ ಪ್ರವೇಶಿಸಿದ ಲಕ್ನೋ; ಕುಸಿದ ಸಿಎಸ್​ಕೆ

ತವರಿನಲ್ಲಿ ಚೆನ್ನೈ ಭದ್ರಕೋಟೆ ಭೇದಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ-4ರೊಳಗೆ ಪ್ರವೇಶಿಸಿದ ಲಕ್ನೋ; ಕುಸಿದ ಸಿಎಸ್​ಕೆ

IPL 2024 Points Table: ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ-4ರೊಳಗೆ ಪ್ರವೇಶಿಸಿದೆ. ಹಾಗಾದರೆ ಯಾವ ತಂಡದ ಯಾವ ಸ್ಥಾನ ಪಡೆದಿದೆ? ಇಲ್ಲಿದೆ ವಿವರ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ ಅಗ್ರ 4ರೊಳಗೆ ಸ್ಥಾನ ಪಡೆಯಿತು. ಪ್ಲೇ ಆಫ್ ಪ್ರವೇಶಿಸಲು ಇನ್ನು ಮೂರು ಪಂದ್ಯ ಗೆದ್ದರೆ ಸಾಕು. ಆಡಿದ 8 ಪಂದ್ಯಗಳಲ್ಲಿ 5 ಗೆಲುವು, 3 ಸೋತಿರುವ ಎಲ್​ಎಸ್​ಜಿ, 10 ಅಂಕ ಸಂಪಾದಿಸಿದೆ. ಇದೀಗ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ ಲಕ್ನೋ 4ನೇ ಸ್ಥಾನಕ್ಕೇರಿದೆ. ನೆಟ್ ರನ್ ರೇಟ್ +0.148 ಆಗಿದೆ.
icon

(1 / 7)

ತವರಿನಲ್ಲಿ ಲಕ್ನೋ ವಿರುದ್ಧ ಸೋತ ಸಿಎಸ್​ಕೆ 8 ಪಂದ್ಯಗಳಲ್ಲಿ 8 ಅಂಕ ಗಳಿಸಿದೆ. 4ರಲ್ಲಿ 4ರಲ್ಲಿ ಸೋತಿದೆ. ಗುಜರಾತ್ ಟೈಟಾನ್ಸ್ ಕೂಡ ಆಡಿರುವ 8ರಲ್ಲಿ ತಲಾ 4 ಸೋಲು-ಗೆಲುವು ದಾಖಲಿಸಿ 8 ಅಂಕ ಗಳಿಸಿದೆ. ಆದಾಗ್ಯೂ, ಚೆನ್ನೈ ನೆಟ್ ರನ್ ರೇಟ್ ಗುಜರಾತ್​ಗಿಂತ ಉತ್ತಮವಾಗಿದೆ. ಚೆನ್ನೈ (+0.415) ಪ್ರಸ್ತುತ ಲೀಗ್ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿದೆ. ಗುಜರಾತ್ (-1.055) 6ನೇ ಸ್ಥಾನದಲ್ಲಿದೆ.
icon

(2 / 7)

ಚೆನ್ನೈ ಮತ್ತು ಲಕ್ನೋ ನಡುವಿನ ಪಂದ್ಯದ ಫಲಿತಾಂಶವು ಲೀಗ್ ಟೇಬಲ್​​ನಲ್ಲಿ ಅಗ್ರ ಮೂರು ಸ್ಥಾನಗಳ ಮೇಲೆ ಪರಿಣಾಮ ಬೀರಲಿಲ್ಲ. ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಆಡಿರುವ 8 ಪಂದ್ಯಗಳಲ್ಲಿ 7 ಗೆಲುವು ಸೇರಿದಂತೆ 14 ಅಂಕಗಳೊಂದಿಗೆ ಪ್ಲೇ ಆಫ್ ಹಂತದಲ್ಲಿದೆ. ಈವರೆಗೆ 1 ಪಂದ್ಯವನ್ನು ಸೋತಿದೆ. ಸದ್ಯ ನೆಟ್ ರನ್ ರೇಟ್ +0.698 ಆಗಿದೆ.
icon

(3 / 7)

ಕೋಲ್ಕತಾ ನೈಟ್ ರೈಡರ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಉಳಿಸಿಕೊಂಡಿದೆ. ಕೆಕೆಆರ್ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸೇರಿದಂತೆ 10 ಅಂಕಗಳನ್ನು ಗಳಿಸಿದೆ. ನೆಟ್ ರನ್ ರೇಟ್ +1.206 ಆಗಿದೆ. ಸನ್​ರೈಸರ್ಸ್ ಹೈದರಾಬಾದ್ ಕೂಡ ತನ್ನ ಮೊದಲ 7 ಪಂದ್ಯಗಳಲ್ಲಿ 5 ಗೆಲುವು ಸೇರಿದಂತೆ 10 ಅಂಕಗಳನ್ನು ಗಳಿಸಿದೆ. ಆದಾಗ್ಯೂ, ನೆಟ್ ರನ್ ರೇಟ್ನಲ್ಲಿ ಕೆಕೆಆರ್​ಗಿಂತ ಹಿಂದುಳಿದಿರುವ ಕಾರಣ ಎಸ್​ಆರ್​ಹೆಚ್​ ಲೀಗ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದೆ. ಸದ್ಯ ಹೈದರಾಬಾದ್ ನೆಟ್ ರನ್ ರೇಟ್ +0.914 ಆಗಿದೆ.
icon

(4 / 7)

ಮುಂಬೈ ಇಂಡಿಯನ್ಸ್ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದ್ದು, 5ರಲ್ಲಿ ಸೋತಿದ್ದು, ಒಟ್ಟು 6 ಅಂಕ ಸಂಪಾದಿಸಿದೆ. ಮುಂಬೈ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದು, ನೆಟ್ ರನ್ ರೇಟ್ ಪ್ರಸ್ತುತ -0.227 ಆಗಿದೆ. ಮುಂಬೈನಂತೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ 8 ಪಂದ್ಯಗಳಿಂದ 6 ಅಂಕ ಗಳಿಸಿದೆ. 8ನೇ ಸ್ಥಾನದಲ್ಲಿರುವ ಡೆಲ್ಲಿಯ ನೆಟ್ ರನ್ ರೇಟ್ -0.477 ಆಗಿದೆ.
icon

(5 / 7)

ಪಂಜಾಬ್ ಕಿಂಗ್ಸ್ ಆಡಿರುವ 8 ಪಂದ್ಯಗಳಲ್ಲಿ 2 ಗೆಲುವು ಹಾಗೂ 4 ಅಂಕ ಗಳಿಸಿದೆ. ನೆಟ್ ರನ್ ರೇಟ್ -0.292 ಆಗಿದೆ. ಅಂಕಪಟ್ಟಿಯಲ್ಲಿ ಪಂಜಾಬ್ 9ನೇ ಸ್ಥಾನದಲ್ಲಿದೆ. ಆರ್​​ಸಿಬಿ ಆಡಿರುವ 8 ಪಂದ್ಯಗಳಲ್ಲಿ 1 ಗೆಲುವು ಸೇರಿದಂತೆ 2 ಅಂಕಗಳನ್ನು ಗಳಿಸಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬೆಂಗಳೂರಿನ ನೆಟ್ ರನ್ ರೇಟ್ -1.046 ಆಗಿದೆ.
icon

(6 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

IPL_Entry_Point

ಇತರ ಗ್ಯಾಲರಿಗಳು