ಎಸ್‌ಆರ್‌ಎಚ್ ಪರ ಪದಾರ್ಪಣೆ ಪಂದ್ಯದಲ್ಲೇ ಸ್ಫೋಟಕ ಆಟ; ಮುಂಬೈ ಇಂಡಿಯನ್ಸ್ ವಿರುದ್ಧ ಟ್ರಾವಿಸ್ ಹೆಡ್ ದಾಖಲೆಯ ಅರ್ಧಶತಕ
- ಮುಂಬೈ ಇಂಡಿಯನ್ಸ್ ವಿರುದ್ಧ ಟ್ರಾವಿಸ್ ಹೆಡ್ ಅಬ್ಬರಿಸಿದ್ದಾರೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಡ್, ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಕೆಲವೊಂದು ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿದ್ದಾರೆ.

(1 / 7)
ಹೈದರಾಬಾದ್ ಪರ ಇಂದು ಮೊದಲ ಪಂದ್ಯವಾಡಿದ ಹೆಡ್, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಸನ್‌ರೈಸರ್ಸ್ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಆದರೆ, ಕೆಲವೇ ಹೊತ್ತಿನಲ್ಲಿ ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದರು. ಇದೇ ಪಂದ್ಯಗಳಲ್ಲಿ ಅವರು ಕೇವಲ 16 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದರು.(AFP)
(2 / 7)
ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಜೊತೆಗ ಆರಂಭಿಕರಾಗಿ ಕಣಕ್ಕಿಳಿದ ಹೆಡ್, ಕೇವಲ 24 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್ ಸಿಡಿಸಿದರು.(AFP)
(4 / 7)
ಇದೇ ವೇಳೆ ಮುಂಬೈ ವಿರುದ್ಧ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡರು. 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಈ ಹಿಂದೆ ಪ್ಯಾಟ್ ಕಮಿನ್ಸ್ 14 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ದಾಖಲೆ ನಿರ್ಮಿಸಿದ್ದರು.(AFP)
(5 / 7)
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡವು ಬೌಲಿಂಗ್ ಆಯ್ಕೆ ಮಾಡಿತು. ಎಸ್‌ಆರ್‌ಎಚ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಟ್ರಾವಿಸ್ ಹೆಡ್ ಆಡುತ್ತಿದ್ದು, ಜಾನ್ಸೆನ್ ತಂಡದಿಂದ ಹೊರಬಿದ್ದಿದ್ದಾರೆ. ಅತ್ತ ನಟರಾಜನ್ ಬದಲಿಗೆ ಜೈದೇವ್ ಉನದ್ಕತ್ ತಂಡ ಸೇರಿಕೊಂಡಿದ್ದಾರೆ.(AP)
(6 / 7)
ಪಂದ್ಯದಲ್ಲಿ ಹೈದರಾಬಾದ್ ತಂಡವು ಮೊದಲ 10 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 148 ರನ್ ಸಿಡಿಸಿತು. ಇದು ಐಪಿಎಲ್ ದಾಖಲೆಯಾಗಿದೆ.(AP)
ಇತರ ಗ್ಯಾಲರಿಗಳು