ಕನ್ನಡ ಸುದ್ದಿ  /  Photo Gallery  /  Cricket News Ipl 2024 Travis Head Hit Fastest Fifty For Srh In Debut Against Mumbai Indians Vs Sunrisers Hyderabad Jra

ಎಸ್‌ಆರ್‌ಎಚ್‌ ಪರ ಪದಾರ್ಪಣೆ ಪಂದ್ಯದಲ್ಲೇ ಸ್ಫೋಟಕ ಆಟ; ಮುಂಬೈ ಇಂಡಿಯನ್ಸ್ ವಿರುದ್ಧ ಟ್ರಾವಿಸ್‌ ಹೆಡ್ ದಾಖಲೆಯ ಅರ್ಧಶತಕ

  • ಮುಂಬೈ ಇಂಡಿಯನ್ಸ್ ವಿರುದ್ಧ‌ ಟ್ರಾವಿಸ್‌ ಹೆಡ್‌ ಅಬ್ಬರಿಸಿದ್ದಾರೆ. ಹೈದರಾಬಾದ್‌ನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಡ್‌, ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ಇದರೊಂದಿಗೆ ಕೆಲವೊಂದು ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿದ್ದಾರೆ.

ಹೈದರಾಬಾದ್‌ ಪರ ಇಂದು ಮೊದಲ ಪಂದ್ಯವಾಡಿದ ಹೆಡ್‌, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಸನ್‌ರೈಸರ್ಸ್‌ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಆದರೆ, ಕೆಲವೇ ಹೊತ್ತಿನಲ್ಲಿ ಈ ದಾಖಲೆಯನ್ನು ಅಭಿಷೇಕ್‌ ಶರ್ಮಾ ಮುರಿದರು. ಇದೇ ಪಂದ್ಯಗಳಲ್ಲಿ ಅವರು ಕೇವಲ 16 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದರು.
icon

(1 / 7)

ಹೈದರಾಬಾದ್‌ ಪರ ಇಂದು ಮೊದಲ ಪಂದ್ಯವಾಡಿದ ಹೆಡ್‌, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆ ಮೂಲಕ ಸನ್‌ರೈಸರ್ಸ್‌ ಪರ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು. ಆದರೆ, ಕೆಲವೇ ಹೊತ್ತಿನಲ್ಲಿ ಈ ದಾಖಲೆಯನ್ನು ಅಭಿಷೇಕ್‌ ಶರ್ಮಾ ಮುರಿದರು. ಇದೇ ಪಂದ್ಯಗಳಲ್ಲಿ ಅವರು ಕೇವಲ 16 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದರು.(AFP)

ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಜೊತೆಗ ಆರಂಭಿಕರಾಗಿ ಕಣಕ್ಕಿಳಿದ ಹೆಡ್‌, ಕೇವಲ 24 ಎಸೆತಗಳಲ್ಲಿ 62 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್‌ ಸಿಡಿಸಿದರು.
icon

(2 / 7)

ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ಜೊತೆಗ ಆರಂಭಿಕರಾಗಿ ಕಣಕ್ಕಿಳಿದ ಹೆಡ್‌, ಕೇವಲ 24 ಎಸೆತಗಳಲ್ಲಿ 62 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ 3 ಸ್ಫೋಟಕ ಸಿಕ್ಸರ್‌ ಸಿಡಿಸಿದರು.(AFP)

ಹೆಡ್‌ ಸ್ಫೋಟಕ ಆಟದ ನೆರವಿನಿಂದ ಹೈದರಾಬಾದ್‌ ತಂಡವು ಪವರ್‌ಪ್ಲೇನಲ್ಲಿ ಭರ್ಜರಿ 81 ರನ್‌ ಗಳಿಸಿತು.
icon

(3 / 7)

ಹೆಡ್‌ ಸ್ಫೋಟಕ ಆಟದ ನೆರವಿನಿಂದ ಹೈದರಾಬಾದ್‌ ತಂಡವು ಪವರ್‌ಪ್ಲೇನಲ್ಲಿ ಭರ್ಜರಿ 81 ರನ್‌ ಗಳಿಸಿತು.(AFP)

ಇದೇ ವೇಳೆ ಮುಂಬೈ ವಿರುದ್ಧ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡರು. 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಈ ಹಿಂದೆ ಪ್ಯಾಟ್‌ ಕಮಿನ್ಸ್‌ 14 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ದಾಖಲೆ ನಿರ್ಮಿಸಿದ್ದರು.
icon

(4 / 7)

ಇದೇ ವೇಳೆ ಮುಂಬೈ ವಿರುದ್ಧ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಆಟಗಾರ ಎನಿಸಿಕೊಂಡರು. 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಈ ಹಿಂದೆ ಪ್ಯಾಟ್‌ ಕಮಿನ್ಸ್‌ 14 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ದಾಖಲೆ ನಿರ್ಮಿಸಿದ್ದರು.(AFP)

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ತಂಡವು ಬೌಲಿಂಗ್‌ ಆಯ್ಕೆ ಮಾಡಿತು. ಎಸ್‌ಆರ್‌ಎಚ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಟ್ರಾವಿಸ್‌ ಹೆಡ್‌ ಆಡುತ್ತಿದ್ದು, ಜಾನ್ಸೆನ್‌ ತಂಡದಿಂದ ಹೊರಬಿದ್ದಿದ್ದಾರೆ. ಅತ್ತ ನಟರಾಜನ್‌ ಬದಲಿಗೆ ಜೈದೇವ್‌ ಉನದ್ಕತ್‌ ತಂಡ ಸೇರಿಕೊಂಡಿದ್ದಾರೆ.
icon

(5 / 7)

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ತಂಡವು ಬೌಲಿಂಗ್‌ ಆಯ್ಕೆ ಮಾಡಿತು. ಎಸ್‌ಆರ್‌ಎಚ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಟ್ರಾವಿಸ್‌ ಹೆಡ್‌ ಆಡುತ್ತಿದ್ದು, ಜಾನ್ಸೆನ್‌ ತಂಡದಿಂದ ಹೊರಬಿದ್ದಿದ್ದಾರೆ. ಅತ್ತ ನಟರಾಜನ್‌ ಬದಲಿಗೆ ಜೈದೇವ್‌ ಉನದ್ಕತ್‌ ತಂಡ ಸೇರಿಕೊಂಡಿದ್ದಾರೆ.(AP)

ಪಂದ್ಯದಲ್ಲಿ ಹೈದರಾಬಾದ್‌ ತಂಡವು ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 148 ರನ್ ಸಿಡಿಸಿತು. ಇದು ಐಪಿಎಲ್‌ ದಾಖಲೆಯಾಗಿದೆ.
icon

(6 / 7)

ಪಂದ್ಯದಲ್ಲಿ ಹೈದರಾಬಾದ್‌ ತಂಡವು ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 148 ರನ್ ಸಿಡಿಸಿತು. ಇದು ಐಪಿಎಲ್‌ ದಾಖಲೆಯಾಗಿದೆ.(AP)

ಪಂದ್ಯದಲ್ಲಿ ಕೇವಲ 14.4 ಓವರ್‌ಗಳಲ್ಲಿ ತಂಡವು 200ರನ್‌ ಗಳಿಸಿತು.
icon

(7 / 7)

ಪಂದ್ಯದಲ್ಲಿ ಕೇವಲ 14.4 ಓವರ್‌ಗಳಲ್ಲಿ ತಂಡವು 200ರನ್‌ ಗಳಿಸಿತು.(AP)


IPL_Entry_Point

ಇತರ ಗ್ಯಾಲರಿಗಳು