49 ಎಸೆತಗಳಲ್ಲಿ ಶತಕ ಸಿಡಿಸಿದ ಸುನಿಲ್ ನರೈನ್; ಐಪಿಎಲ್‌ನಲ್ಲಿ ಈ ದಾಖಲೆ ನಿರ್ಮಿಸಿದ ಮೊದಲ ಆಟಗಾರ
- Sunil Narine: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಸುನಿಲ್ ನರೈನ್, ಐಪಿಎಲ್ 2024ರಲ್ಲಿ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟಿ20 ಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

(1 / 6)
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ನ 35 ವರ್ಷದ ಅನುಭವಿ ಆಟಗಾರ ಕೇವಲ 49 ಎಸೆತಗಳಲ್ಲಿ ಅಮೋಘ ಶತಕ ಸಿಡಿಸಿದರು. ಇದರೊಂದಿಗೆ ಕೆಕೆಆರ್ ಪರ ಐಪಿಎಲ್ ಶತಕ ಸಿಡಿಸಿದ ಮೂರನೇ ಆಟಗಾರ ಎನಿಸಿಕೊಂಡರು.
(PTI)(2 / 6)
ಈ ಹಿಂದೆ ಬ್ರೆಂಡನ್ ಮೆಕಲಮ್ (2008) ಮತ್ತು ವೆಂಕಟೇಶ್ ಅಯ್ಯರ್ (2023) ಮಾತ್ರವೇ ಕೋಲ್ಕತ್ತಾ ತಂಡದ ಪರ ಶತಕ ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ನರೈನ್ ಮೂರನೇ ಆಟಗಾರನಾಗಿ ಸೇರಿಕೊಂಡಿದ್ದಾರೆ.
(ANI )(3 / 6)
ಪಂದ್ಯದಲ್ಲಿ ಅಂತಿಮವಾಗಿ ನರೈನ್ 56 ಎಸೆತಗಳಲ್ಲಿ 109 ರನ್ ಗಳಿಸಿ ಟ್ರೆಂಟ್ ಬೋಲ್ಟ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. 194.64ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು, 13 ಬೌಂಡರಿ ಹಾಗೂ 6 ಮಾರಕ ಸಿಕ್ಸರ್ ಸಿಡಿಸಿದರು.
(PTI)(4 / 6)
ಇದರೊಂದಿಗೆ ವಿಶೇಷ ದಾಖಲೆಯನ್ನು ನರೈನ್ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಶತಕ ಹಾಗೂ 100 ವಿಕೆಟ್‌ಗಳನ್ನು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(AP)(5 / 6)
ಸುನಿಲ್ ನರೈನ್ ಐಪಿಎಲ್‌ನಲ್ಲಿ ಈವರೆಗೆ 168 ಪಂದ್ಯಗಳನ್ನು ಆಡಿದ್ದಾರ. ಒಟ್ಟಾರೆ ಟಿ20ಯಲ್ಲಿ 503 ಪಂದ್ಯಗಳಲ್ಲಿ ಆಡಿದ್ದಾರೆ.
(AP)ಇತರ ಗ್ಯಾಲರಿಗಳು