ಕನ್ನಡ ಸುದ್ದಿ  /  Photo Gallery  /  Cricket News Kuldeep Yadav Takes 50 Test Wickets In Least Balls For India Ind Vs Eng 5th Test Jasprit Bumrah Jra

ಟೆಸ್ಟ್ ಕ್ರಿಕೆಟ್‌ನಲ್ಲಿ ಕುಲ್ದೀಪ್‌ ಯಾದವ್‌ ಮತ್ತೊಂದು ದಾಖಲೆ; ಕಡಿಮೆ ಎಸೆತಗಳಲ್ಲಿ ವೇಗವಾಗಿ 50 ವಿಕೆಟ್ ಕಿತ್ತ ಸ್ಪಿನ್ನರ್

  • ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್ ಇತಿಹಾಸ ನಿರ್ಮಿಸಿದ್ದಾರೆ. ಧರ್ಮಶಾಲಾದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 5 ಪ್ರಮುಖ ವಿಕೆಟ್ ಪಡೆದ ಅವರು ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯನ್ನು ವೇಗವಾಗಿ ಮಾಡಿದ ಭಾರತದ ಬೌಲರ್‌ ಎನಿಸಿಕೊಂಡಿದ್ದಾರೆ.

ಸುಂದರ ಧರ್ಮಾಶಾಲಾ ಮೈದಾನದಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಇತಿಹಾಸ ನಿರ್ಮಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 50 ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕುಲ್ದೀಪ್ ಕೇವಲ 1,871 ಎಸೆತಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50ನೇ ವಿಕೆಟ್ ಪಡೆದರು. ಈ ಹಿಂದೆ ಅಕ್ಷರ್ ಪಟೇಲ್ 50 ಟೆಸ್ಟ್ ವಿಕೆಟ್‌ ಪಡೆಯಲು 2,205 ಎಸೆತಗಳನ್ನು ತೆಗೆದುಕೊಂಡಿದ್ದರು. ಜಸ್ಪ್ರೀತ್ ಬುಮ್ರಾ 2,465 ಎಸೆತಗಳನ್ನು ತೆಗೆದುಕೊಂಡಿದ್ದರು,
icon

(1 / 5)

ಸುಂದರ ಧರ್ಮಾಶಾಲಾ ಮೈದಾನದಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ ಇತಿಹಾಸ ನಿರ್ಮಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 50 ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕುಲ್ದೀಪ್ ಕೇವಲ 1,871 ಎಸೆತಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50ನೇ ವಿಕೆಟ್ ಪಡೆದರು. ಈ ಹಿಂದೆ ಅಕ್ಷರ್ ಪಟೇಲ್ 50 ಟೆಸ್ಟ್ ವಿಕೆಟ್‌ ಪಡೆಯಲು 2,205 ಎಸೆತಗಳನ್ನು ತೆಗೆದುಕೊಂಡಿದ್ದರು. ಜಸ್ಪ್ರೀತ್ ಬುಮ್ರಾ 2,465 ಎಸೆತಗಳನ್ನು ತೆಗೆದುಕೊಂಡಿದ್ದರು,

ಅಷ್ಟೇ ಅಲ್ಲ, ಕಳೆದ 100 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ವೇಗದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ 15 ಓವರ್‌ ಬೌಲಿಂಗ್‌ ಮಾಡಿದ ಅವರು, 72 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದಾರೆ. ಬೆನ್ ಡಕೆಟ್, ಒಲ್ಲಿ ಪೋಪ್, ಜಾಕ್ ಕ್ರಾಲೆ, ಜಾನಿ ಬೇರ್‌ಸ್ಟೋ ಮತ್ತು ಬೆನ್ ಸ್ಟೋಕ್ಸ್ ವಿಕೆಟ್‌ ಪಡೆದು ಕುಲ್ದೀಪ್‌ ಅಬ್ಬರಿಸಿದ್ದಾರೆ.
icon

(2 / 5)

ಅಷ್ಟೇ ಅಲ್ಲ, ಕಳೆದ 100 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ವೇಗದ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ 15 ಓವರ್‌ ಬೌಲಿಂಗ್‌ ಮಾಡಿದ ಅವರು, 72 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದಿದ್ದಾರೆ. ಬೆನ್ ಡಕೆಟ್, ಒಲ್ಲಿ ಪೋಪ್, ಜಾಕ್ ಕ್ರಾಲೆ, ಜಾನಿ ಬೇರ್‌ಸ್ಟೋ ಮತ್ತು ಬೆನ್ ಸ್ಟೋಕ್ಸ್ ವಿಕೆಟ್‌ ಪಡೆದು ಕುಲ್ದೀಪ್‌ ಅಬ್ಬರಿಸಿದ್ದಾರೆ.(Reuters)

ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ (ಪಂದ್ಯಗಳ ಲೆಕ್ಕದಲ್ಲಿ) 50 ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಒಂಬತ್ತನೇ ಟೆಸ್ಟ್ ನಲ್ಲಿ 50 ವಿಕೆಟ್ ಮೈಲಿಗಲ್ಲನ್ನು ದಾಟಿದರು. ಅಶ್ವಿನ್ ತಮ್ಮ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ದಿನದಂದೇ, ಕುಲ್ದೀಪ್ 50 ವಿಕೆಟ್‌ಗಳ ಗಡಿ ದಾಟಿದ್ದಾರೆ. ಕುಲ್ದೀಪ್ ಇಂದು ತಮ್ಮ 12ನೇ ಟೆಸ್ಟ್ ಆಡುತ್ತಿದ್ದಾರೆ. ಅತ್ತ ಅಕ್ಷರ್ ಪಟೇಲ್‌ ಕೂಡಾ ತಮ್ಮ 12ನೇ ಟೆಸ್ಟ್‌ನಲ್ಲಿ 50 ವಿಕೆಟ್‌ ಗಡಿ ದಾಟಿದ್ದಾರೆ.
icon

(3 / 5)

ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ (ಪಂದ್ಯಗಳ ಲೆಕ್ಕದಲ್ಲಿ) 50 ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಒಂಬತ್ತನೇ ಟೆಸ್ಟ್ ನಲ್ಲಿ 50 ವಿಕೆಟ್ ಮೈಲಿಗಲ್ಲನ್ನು ದಾಟಿದರು. ಅಶ್ವಿನ್ ತಮ್ಮ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ದಿನದಂದೇ, ಕುಲ್ದೀಪ್ 50 ವಿಕೆಟ್‌ಗಳ ಗಡಿ ದಾಟಿದ್ದಾರೆ. ಕುಲ್ದೀಪ್ ಇಂದು ತಮ್ಮ 12ನೇ ಟೆಸ್ಟ್ ಆಡುತ್ತಿದ್ದಾರೆ. ಅತ್ತ ಅಕ್ಷರ್ ಪಟೇಲ್‌ ಕೂಡಾ ತಮ್ಮ 12ನೇ ಟೆಸ್ಟ್‌ನಲ್ಲಿ 50 ವಿಕೆಟ್‌ ಗಡಿ ದಾಟಿದ್ದಾರೆ.(AFP)

ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಕುಲ್ದೀಪ್ ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಆಗಿದ್ದಾರೆ. ಉಳಿದ ಇಬ್ಬರೆಂದರೆ ಇಂಗ್ಲೆಂಡ್‌ನ ಜಾನಿ ವಾರ್ಡ್ಲ್, ಮತ್ತು ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್.
icon

(4 / 5)

ಟೆಸ್ಟ್ ಕ್ರಿಕೆಟ್‌ನಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಕುಲ್ದೀಪ್ ವಿಶ್ವದ ಮೂರನೇ ಎಡಗೈ ಸ್ಪಿನ್ನರ್ ಆಗಿದ್ದಾರೆ. ಉಳಿದ ಇಬ್ಬರೆಂದರೆ ಇಂಗ್ಲೆಂಡ್‌ನ ಜಾನಿ ವಾರ್ಡ್ಲ್, ಮತ್ತು ದಕ್ಷಿಣ ಆಫ್ರಿಕಾದ ಪಾಲ್ ಆಡಮ್ಸ್.(AFP)

ಕುಲ್ದೀಪ್ ಯಾದವ್‌ 2017ರಲ್ಲಿ ನಡೆದ ಧರ್ಮಶಾಲಾ ಟೆಸ್ಟ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ 23 ಓವರ್ ಬೌಲಿಂಗ್‌ ಮಾಡಿ 68 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಯಾವುದೇ ವಿಕೆಟ್ ಪಡೆಯಲಿಲ್ಲ.
icon

(5 / 5)

ಕುಲ್ದೀಪ್ ಯಾದವ್‌ 2017ರಲ್ಲಿ ನಡೆದ ಧರ್ಮಶಾಲಾ ಟೆಸ್ಟ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಇನ್ನಿಂಗ್ಸ್ ನಲ್ಲಿ 23 ಓವರ್ ಬೌಲಿಂಗ್‌ ಮಾಡಿ 68 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಯಾವುದೇ ವಿಕೆಟ್ ಪಡೆಯಲಿಲ್ಲ.(Reuters)


IPL_Entry_Point

ಇತರ ಗ್ಯಾಲರಿಗಳು