Ravichandran Ashwin: ಹೊಸ ತಂಡವೊಂದನ್ನು ಖರೀದಿಸಿದ ಆರ್ ಅಶ್ವಿನ್; ಆದರೆ ಕ್ರಿಕೆಟ್ನಲ್ಲಿ ಅಲ್ಲ!
- Ravichandran Ashwin: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಚೆಸ್ನಲ್ಲಿ ಹೊಸ ತಂಡವನ್ನು ಖರೀದಿಸಿದ್ದಾರೆ. ಯಾವ ಟೂರ್ನಿಯಲ್ಲಿ ಈ ತಂಡ ಸ್ಪರ್ಧಿಸಲಿದೆ?
- Ravichandran Ashwin: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವರು ಚೆಸ್ನಲ್ಲಿ ಹೊಸ ತಂಡವನ್ನು ಖರೀದಿಸಿದ್ದಾರೆ. ಯಾವ ಟೂರ್ನಿಯಲ್ಲಿ ಈ ತಂಡ ಸ್ಪರ್ಧಿಸಲಿದೆ?
(1 / 5)
ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಚೆಸ್ ಅಶ್ವಿನ್ ತಂಡವೊಂದನ್ನು ಖರೀದಿಸಿದ್ದು, ಮುಂಬರುವ ಗ್ಲೋಬಲ್ ಚೆಸ್ ಲೀಗ್ 2024ರಲ್ಲಿ ಈ ತಂಡ ಸ್ಪರ್ಧಿಸಲಿದೆ. ತಂಡದ ಹೆಸರು ಅಮೆರಿಕನ್ ಗ್ಯಾಂಬಿಟ್ಸ್.
(2 / 5)
ಟೆಕ್ ಮಹೀಂದ್ರಾ ಮತ್ತು ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ ಫಿಡೆ ಜಂಟಿಯಾಗಿ ಆಯೋಜಿಸಿರುವ ಗ್ಲೋಬಲ್ ಚೆಸ್ ಲೀಗ್ನ 2ನೇ ಆವೃತ್ತಿಯಲ್ಲಿ ಅಮೆರಿಕನ್ ಗ್ಯಾಂಬಿಟ್ಸ್ ತಂಡ ಕಾಣಿಸಿಕೊಳ್ಳಲಿದೆ. ಅಶ್ವಿನ್ ಅವರ ನೂತನ ತಂಡವನ್ನು ಸ್ವಾಗತಿಸಲು ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.
(3 / 5)
ಅಮೆರಿಕನ್ ಗ್ಯಾಂಬಿಟ್ಸ್ ತಂಡಕ್ಕೆ ಅಶ್ವಿನ್ ಮಾತ್ರ ಮಾಲೀಕರಲ್ಲದೆ, ಪ್ರಚುರ ಪಿಪಿ ಮತ್ತು ವೆಂಕಟ್ ಕೆ ನಾರಾಯಣ್ ಕೂಡ ಜಂಟಿ ಮಾಲೀಕತ್ವ ಹೊಂದಿದ್ದಾರೆ. 6 ತಂಡಗಳ ಟೂರ್ನಮೆಂಟ್ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 12ರಂದು ಕೊನೆಗೊಳ್ಳಲಿದೆ. ಪಂದ್ಯಾವಳಿ ಲಂಡನ್ನಲ್ಲಿ ನಡೆಯಲಿದೆ.
(4 / 5)
ರವಿಚಂದ್ರನ್ ಅಶ್ವಿನ್ ಮಾತನಾಡಿ, "ಚೆಸ್ ಜಗತ್ತಿನಲ್ಲಿ ಅಮೆರಿಕನ್ ಗ್ಯಾಂಬಿಟ್ಸ್ ತಂಡವನ್ನು ಹೊಂದಲು ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ತಂಡವು ಕಾರ್ಯತಂತ್ರದ ದೃಢತೆ ಮತ್ತು ಅಚಲ ದೃಢನಿಶ್ಚಯದೊಂದಿಗೆ ಆಟವನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸಲು ನಿರ್ಧರಿಸಿದೆ. ಮಾಲೀಕರಲ್ಲಿ ಒಬ್ಬನಾಗಿ, ನಾನು ತಂಡದ ಪ್ರಯಾಣದ ಭಾಗವಾಗಲು ಮತ್ತು ಅವರ ಯಶಸ್ಸಿನ ಭಾಗವಾಗಲು ಬಯಸುತ್ತೇನೆ ಎಂದಿದ್ದಾರೆ.
ಇತರ ಗ್ಯಾಲರಿಗಳು