Franchise Brand Value: ಸಿಎಸ್‌ಕೆ ನಂಬರ್ ವನ್ ಫ್ರಾಂಚೈಸ್ ಬ್ರಾಂಡ್; ಕಪ್ ಗೆಲ್ಲದಿದ್ರೂ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಂಡ ಆರ್‌ಸಿಬಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Franchise Brand Value: ಸಿಎಸ್‌ಕೆ ನಂಬರ್ ವನ್ ಫ್ರಾಂಚೈಸ್ ಬ್ರಾಂಡ್; ಕಪ್ ಗೆಲ್ಲದಿದ್ರೂ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಂಡ ಆರ್‌ಸಿಬಿ

Franchise Brand Value: ಸಿಎಸ್‌ಕೆ ನಂಬರ್ ವನ್ ಫ್ರಾಂಚೈಸ್ ಬ್ರಾಂಡ್; ಕಪ್ ಗೆಲ್ಲದಿದ್ರೂ ಬ್ರಾಂಡ್ ಮೌಲ್ಯ ಹೆಚ್ಚಿಸಿಕೊಂಡ ಆರ್‌ಸಿಬಿ

Most valued IPL franchise brand: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ನ ಬ್ರಾಂಡ್‌ ಮೌಲ್ಯವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇದೀಗ ನೂತನವಾಗಿ ಪ್ರಕಟವಾಗಿರುವ ಬ್ರ್ಯಾಂಡ್ ಮೌಲ್ಯಮಾಪನ ಅಧ್ಯಯನದಲ್ಲಿ, ಲೀಗ್‌ನ ಬ್ರ್ಯಾಂಡ್ ಮೌಲ್ಯವು 80 ಶೇಕಡದಷ್ಟು, ಅಂದರೆ 3.2 ಶತಕೋಟಿ ಡಾಲರ್‌ನಷ್ಟು ಬೃಹತ್ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ. 

ಪ್ರಸಕ್ತ ವರ್ಷದ (ಐಪಿಎಲ್ 2023) ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಅತಿ ಹೆಚ್ಚು ಬ್ರಾಂಡ್‌ ಮೌಲ್ಯ ಹೊಂದಿರುವ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2023ರಲ್ಲಿ ಸಿಎಸ್‌ಕೆ ಫ್ರಾಂಚೈಸಿಯ ಬ್ರಾಂಡ್‌ ಮೌಲ್ಯ 212 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದು ಹೌಲಿಹಾನ್ ಲೋಕೆ ಅಧ್ಯಯನದ ವರದಿ ತಿಳಿಸಿದೆ. ಕಳೆದ ವರ್ಷಕ್ಕಿಂತ ಸಿಎಸ್‌ಕೆ ಬ್ರಾಂಡ್‌ ಮೌಲ್ಯದಲ್ಲಿ 45.2 ಶೇಕಡ ಹೆಚ್ಚಳವಾಗಿದೆ. ಈ ವರ್ಷ ಚಾಂಪಿಯನ್‌ ಪಟ್ಟವನ್ನೂ ಅಲಂಕರಿಸಿರುವ ಸಿಎಸ್‌ಕೆ ಅರ್ಹವಾಗಿ ಉನ್ನತ ಬ್ರಾಂಡ್‌ ಆಗಿ ಜನಪ್ರಿಯವಾಗಿದೆ.
icon

(1 / 10)

(Twitter)

ಇದುವರೆಗೂ ಒಂದೇ ಒಂದು ಟ್ರೋಫಿ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಅಧಿಕ ಫ್ಯಾನ್‌ ಬೇಸ್‌ನಿಂದಾಗಿ ಜನಪ್ರಿಯವಾಗಿದೆ. ಇದರ ನಡುವೆ ಕಪ್‌ ಗೆಲ್ಲದಿದ್ದರೂ ತಂಡದ ಬ್ರಾಂಡ್‌ ಮೌಲ್ಯ ಮಾತ್ರ ಕುಂದಿಲ್ಲ. ಅದು ಗಗನಕ್ಕೇರುತ್ತಲೇ ಇದೆ. ಪ್ರಸ್ತುತ 195 ಮಿಲಿಯನ್ ಡಾಲರ್‌ ಬ್ರ್ಯಾಂಡ್ ಮೌಲ್ಯದೊಂದಿಗೆ ಈ ಪಟ್ಟಿಯಲ್ಲಿ ಆರ್‌ಸಿಬಿ 2ನೇ ಸ್ಥಾನದಲ್ಲಿದೆ. ಇದೇ ವೇಳೆ ಕಳೆದ ವರ್ಷಕ್ಕಿಂತ ಮೌಲ್ಯಕ್ಕಿಂತ 52.3 ಶೇ. ಏರಿಕೆಯಾಗಿದೆ. ಇದು ಸಿಎಸ್‌ಕೆಗಿಂತ ಹೆಚ್ಚು ಎನ್ನುವುದು ವಿಶೇಷ. ಟ್ರೋಫಿಯ ಸಮೀಪ ಬಾರದಿದ್ದರೂ ತಂಡದ ಜನಪ್ರಿಯತೆ ಹೆಚ್ಚಿರುವುದೇ ಇದಕ್ಕೆ ಕಾರಣ
icon

(2 / 10)

ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯ ಬ್ರಾಂಡ್‌ ಮೌಲ್ಯವು 190 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕಿಂತ 34.8 ಶೆ. ಹೆಚ್ಚಳವಾಗಿದೆ.
icon

(3 / 10)

ಕೆಕೆಆರ್‌ ಬ್ರಾಂಡ್‌ ಮೌಲ್ಯವು 181 ಮಿಲಿಯನ್‌ ಡಾಲರ್‌ಗೆ ಬಂದು ನಿಂತಿದೆ. ಇದು ಕಳೆದ ವರ್ಷಕ್ಕಿಂತ 48.4 ಶೇ ಏರಿಕೆ ಕಂಡಿದೆ.
icon

(4 / 10)

ಡೆಲ್ಲಿ ಕ್ಯಾಪಿಟಲ್ಸ್‌ ಬ್ರಾಂಡ್‌ ಮೌಲ್ಯವು 133 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಇದು ಕಳೆದ ವರ್ಷಕ್ಕಿಂತ 60.2 ಶೇಕಡ ಹೆಚ್ಚು.
icon

(5 / 10)

ಸನ್‌ರೈಸರ್ಸ್‌ ಹೈದರಾಬಾದ್‌ ಬ್ರಾಂಡ್‌ ಮೌಲ್ಯವು 128 ಮಿಲಿಯನ್‌ ಡಾಲರ್‌ ಆಗಿದೆ. ಇದು ಕಳೆದ ವರ್ಷಕ್ಕಿಂತ 58.02 ಶೇಕಡ ಹೆಚ್ಚು.
icon

(6 / 10)

ರಾಜಸ್ತಾನ್‌ ರಾಯಲ್ಸ್‌ ಬ್ರಾಂಡ್‌ ಮೌಲ್ಯ 120 ಮಿಲಿಯನ್‌ ಡಾಲರ್‌ ಆಗಿದ್ದು, ಇದು 103.4 ಶೇ ಹೆಚ್ಚಾಗಿದೆ.
icon

(7 / 10)

ಗುಜರಾತ್‌ ಟೈಟಾನ್ಸ್‌ ಬ್ರಾಂಡ್‌ ಮೌಲ್ಯವು 120 ರಷ್ಟಿದೆ. ಈ ಫ್ರಾಂಚೈಸಿ ಎರಡು ವರ್ಷಗಳ ಹಿಂದಷ್ಟೇ ಐಪಿಎಲ್‌ಗೆ ಎಂಟ್ರಿ ಕೊಟ್ಟಿತ್ತು.  ಎರಡೂ ವರ್ಷಗಳಲ್ಲಿ ಫೈನಲ್‌ಗೆ ಲಗ್ಗೆ ಇಟ್ಟು ಬ್ರಾಂಡ್‌ ಆಗಿ ರೂಪುಗೊಂಡಿದೆ.
icon

(8 / 10)

ಪಂಜಾಬ್‌ ಕಿಂಗ್ಸ್‌ ಬ್ರಾಂಡ್‌ ಮೌಲ್ಯವು 90 ಮಿಲಿಯನ್‌ ಡಾಲರ್‌ ಆಗಿದ್ದು, ಇದು 42.85 ಶೇಕಡ ಹೆಚ್ಚಳವಾಗಿದೆ.
icon

(9 / 10)

ಲಖನೌ ಸೂಪರ್‌ ಜೈಂಟ್ಸ್‌ ಬ್ರಾಂಡ್‌ ಮೌಲ್ಯವು 83 ಮಿಲಿಯನ್‌ ಡಾಲರ್‌ ಆಗಿದೆ.
icon

(10 / 10)

ಇತರ ಗ್ಯಾಲರಿಗಳು