India vs West Indies: ಮೊದಲ ಏಕದಿನ ಪಂದ್ಯದಲ್ಲಿ ಹಲವು ದಾಖಲೆ ಬರೆದ ಭಾರತ; ವಿಂಡೀಸ್ ಕಳಪೆ ರೆಕಾರ್ಡ್
- India vs West Indies 1st ODI Photos : ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 114 ರನ್‌ಗಳಿಗೆ ಆಲೌಟ್ ಆಯ್ತು. ರೋಹಿತ್ ಶರ್ಮಾ 7ನೇ ಕ್ರನಾಂಕದಲ್ಲಿ ಬ್ಯಾಟ್ ಬೀಸಿದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲೇ ಇಲ್ಲ.
- India vs West Indies 1st ODI Photos : ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 114 ರನ್‌ಗಳಿಗೆ ಆಲೌಟ್ ಆಯ್ತು. ರೋಹಿತ್ ಶರ್ಮಾ 7ನೇ ಕ್ರನಾಂಕದಲ್ಲಿ ಬ್ಯಾಟ್ ಬೀಸಿದರು. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಲೇ ಇಲ್ಲ.
(1 / 7)
ಏಕದಿನ ಕ್ರಿಕೆಟ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡರೂ, ಹೆಚ್ಚು ಎಸೆತಗಳನ್ನು ಬಾಕಿ ಉಳಿಸಿ ಗೆದ್ದವರ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಈ ಹಿಂದೆ ಶ್ರೀಲಂಕಾ ತಂಡವು ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ 180 ಎಸೆತಗಳನ್ನು ಉಳಿಸಿ ಗೆದ್ದಿತ್ತು. ಗುರುವಾರ ಭಾರತವು ವಿಂಡೀಸ್ ವಿರುದ್ಧ 163 ಎಸೆತಗಳನ್ನು ಉಳಿಸಿ ಗೆದ್ದಿದೆ.(AFP)
(2 / 7)
ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ ಎರಡನೇ ಅತಿ ಕಡಿಮೆ ಮೊತ್ತವನ್ನು ದಾಖಲಿಸಿತು. ಭಾರತವು ಈ ಹಿಂದೆ 2018ರಲ್ಲಿ ತಿರುವನಂತಪುರಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 104 ರನ್‌ಗಳಿಗೆ ಆಲೌಟ್ ಮಾಡಿತ್ತು.(BCCI Twitter)
(3 / 7)
ಕುಲ್ದೀಪ್ (4/6) ಮತ್ತು ಜಡೇಜಾ (3/37) ಜೋಡಿಯು ಏಕದಿನ ಕ್ರಿಕೆಟ್‌ನಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್‌ಗಳ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.(BCCI Twitter)
(4 / 7)
ಮೊದಲು ಬ್ಯಾಟಿಂಗ್ ಮಾಡಿ ವೆಸ್ಟ್ ಇಂಡೀಸ್ ಕಡಿಮೆ ಓವರ್‌ಗಳಲ್ಲಿ ಆಲೌಟ್ ಆಯ್ತು. ಈ ಹಿಂದೆ ಬಾಂಗ್ಲಾದೇಶ ವಿರುದ್ಧ 2011ರಲ್ಲಿ 22.0 ಓವರ್‌ಗಳಲ್ಲಿ ಆಲೌಟ್ ಆಗಿತ್ತು. ಈ ಬಾರಿ ಭಾರತದ ವಿರುದ್ಧ ಕೇವಲ 23.0 ಓವರ್‌ಗಳಿಗೆ ಸರ್ವಪತನವಾಯ್ತು.(AP)
(5 / 7)
ವೆಸ್ಟ್ ಇಂಡೀಸ್ ತನ್ನದೇ ತವರಿನಲ್ಲಿ ನಾಲ್ಕನೇ ಅತಿ ಕಡಿಮೆ ಮೊತ್ತ ದಾಖಲಿಸಿತು. ಈ ಹಿಂದೆ ಪಾಕ್ ವಿರುದ್ಧ 98, ಬಾಂಗ್ಲಾದೇಶದ ವಿರುದ್ಧ 108 ಹಾಗೂ ಪಾಕ್ ವಿರುದ್ಧ 114 ರನ್ ಕಲೆ ಹಾಕಿತ್ತು. ಇದೀಗ ಭಾರತದ ವಿರುದ್ಧವೂ ಕೇವಲ 114 ರನ್‌ಗಳಿಗೆ ಆಲೌಟ್ ಆಗಿದೆ.(AFP)
(6 / 7)
ಕೇವಲ 23 ಓವರ್‌ಗಳಲ್ಲಿ 114 ರನ್ ಗಳಿಸಿ ವೆಸ್ಟ್ ಇಂಡೀಸ್ ಆಲೌಟ್ ಆಯ್ತು. ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಇತರ ಗ್ಯಾಲರಿಗಳು