ಪಾಕಿಸ್ತಾನ ವಿರುದ್ಧ 6 ರನ್ಗಳ ರೋಚಕ ಜಯ; 10 ವರ್ಷಗಳ ಶ್ರೀಲಂಕಾ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ
- Team India Record: ಪಾಕಿಸ್ತಾನ ತಂಡದ ವಿರುದ್ಧ 6ರನ್ಗಳಿಂದ ಗೆದ್ದ ಟೀಂ ಇಂಡಿಯಾ ವಿಶೇಷ ದಾಖಲೆ ಬರೆದಿದೆ. 10 ವರ್ಷಗಳ ಹಿಂದೆ ಶ್ರೀಲಂಕಾ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದೆ.
- Team India Record: ಪಾಕಿಸ್ತಾನ ತಂಡದ ವಿರುದ್ಧ 6ರನ್ಗಳಿಂದ ಗೆದ್ದ ಟೀಂ ಇಂಡಿಯಾ ವಿಶೇಷ ದಾಖಲೆ ಬರೆದಿದೆ. 10 ವರ್ಷಗಳ ಹಿಂದೆ ಶ್ರೀಲಂಕಾ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದೆ.
(1 / 6)
ಪಾಕಿಸ್ತಾನ ವಿರುದ್ಧ 119 ರನ್ಗಳನ್ನು ರಕ್ಷಿಸಿಕೊಂಡು 6 ರನ್ಗಳಿಂದ ಜಯಿಸಿದ ಟೀಮ್ ಇಂಡಿಯಾ ವಿನೂತನ ದಾಖಲೆ ನಿರ್ಮಿಸಿದೆ. ಕಡಿಮೆ ಸ್ಕೋರ್ ಪಂದ್ಯದಲ್ಲೂ 113 ರನ್ಗಳಿಗೆ ಆಲೌಟ್ ಆಗುವ ಮೂಲಕ ಪಾಕ್ ಕೆಟ್ಟ ದಾಖಲೆ ನಿರ್ಮಿಸಿದೆ.
(2 / 6)
119 ರನ್ ಗಳಿಸಿದ ನಂತರ ಟೀಮ್ ಇಂಡಿಯಾ ಗೆಲ್ಲುತ್ತದೆ ಎಂದು ಅನೇಕರು ಭಾವಿಸಿರಲಿಲ್ಲ. ಆದರೆ ಭಾರತೀಯ ಬೌಲರ್ಗಳ ಹೋರಾಟದ ಫಲವಾಗಿ ಜಯದ ನಗೆ ಬೀರಿತು. ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಅತಿ ಕಡಿಮೆ ರನ್ಗಳನ್ನು ಡಿಫೆಂಡ್ ಮಾಡಿಕೊಂಡ ಎರಡನೇ ತಂಡ ಎನಿಸಿದೆ. ಅಲ್ಲದೆ, ಇನ್ನೂ ಎರಡು ದಾಖಲೆ ಬರೆದಿದೆ.
(3 / 6)
ಟಿ20ಐ ಕ್ರಿಕೆಟ್ನಲ್ಲಿ ಕಡಿಮೆ ಸ್ಕೋರ್ಗೆ ಪಾಕಿಸ್ತಾನ ತಂಡವನ್ನು ಡಿಫೆಂಡ್ ಮಾಡಿಕೊಂಡು ತನ್ನದೇ 8 ವರ್ಷಗಳ ದಾಖಲೆ ಮುರಿದಿದೆ. ಈ ಹಿಂದೆ 2016ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ 139 ರನ್ ಗಳಿಸಿತ್ತು. 2017ರಲ್ಲಿ ಇಂಗ್ಲೆಂಡ್ ವಿರುದ್ಧ 145 ರನ್ ಹಾಗೂ 2016ರಲ್ಲಿ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಆಡಿತ್ತು. ಈ ಸ್ಕೋರ್ಗಳನ್ನು ಭಾರತ ರಕ್ಷಿಸಿಕೊಂಡಿತ್ತು.
(4 / 6)
ಟಿ 20 ವಿಶ್ವಕಪ್ ಇತಿಹಾಸದಲ್ಲಿ, ಭಾರತ ತಂಡವು ಲೋ ಸ್ಕೋರ್ ಅನ್ನು ರಕ್ಷಿಸುವ ಮೂಲಕ ಜಂಟಿ ದಾಖಲೆಯನ್ನು ನಿರ್ಮಿಸಿದೆ. ಈ ಮೂಲಕ ರೋಹಿತ್ ಶರ್ಮಾ ಶ್ರೀಲಂಕಾದ 10 ವರ್ಷಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 2014ರಲ್ಲಿ ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ 120 ರನ್ಗಳನ್ನು ರಕ್ಷಿಸಿಕೊಂಡಿತ್ತು.
(5 / 6)
ನ್ಯೂಯಾರ್ಕ್ನಲ್ಲಿ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತ 19 ಓವರ್ಗಳಲ್ಲಿ 119 ರನ್ ಗಳಿಸಿತು. ಟಿ20 ಇತಿಹಾಸದಲ್ಲಿ ಭಾರತದ ಕನಿಷ್ಠ ಸ್ಕೋರ್ ಇದಾಗಿದೆ.
ಇತರ ಗ್ಯಾಲರಿಗಳು