ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಭಾವುಕ
- Manoj Tiwary Retirement: ಎರಡು ದಶಕಗಳ ಸುದೀರ್ಘ ವೃತ್ತಿಬದುಕಿನ ಬಳಿಕ ಬಂಗಾಳ ಕ್ರಿಕೆಟ್‌ಗೆ ಮನೋಜ್ ತಿವಾರಿ ಅವರ ವಿದಾಯ ಹೇಳಿದ್ದಾರೆ. ನಿವೃತ್ತಿಯ ಕೊನೆಯ ಪಂದ್ಯದಲ್ಲಿ ತವರು ಮೈದಾನ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಂಪೂರ್ಣ ಭಾವೋದ್ವೇಗದಿಂದ ತುಂಬಿತ್ತು.
- Manoj Tiwary Retirement: ಎರಡು ದಶಕಗಳ ಸುದೀರ್ಘ ವೃತ್ತಿಬದುಕಿನ ಬಳಿಕ ಬಂಗಾಳ ಕ್ರಿಕೆಟ್‌ಗೆ ಮನೋಜ್ ತಿವಾರಿ ಅವರ ವಿದಾಯ ಹೇಳಿದ್ದಾರೆ. ನಿವೃತ್ತಿಯ ಕೊನೆಯ ಪಂದ್ಯದಲ್ಲಿ ತವರು ಮೈದಾನ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಂಪೂರ್ಣ ಭಾವೋದ್ವೇಗದಿಂದ ತುಂಬಿತ್ತು.
(1 / 6)
2004ರ ಫೆಬ್ರವರಿ ತಿಂಗಳಲ್ಲಿ ಈಡನ್‌ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಲಿಸ್ಟ್ ಎ ಪಂದ್ಯದಲ್ಲಿ ಮನೋಜ್ ತಿವಾರಿ ಬಂಗಾಳ ಪರ ಪದಾರ್ಪಣೆ ಮಾಡಿದರು. 2024ರ ಫೆಬ್ರವರಿಯಲ್ಲಿ ತಿವಾರಿ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಅದೇ ಈಡನ್‌ನಲ್ಲಿ ಮುಕ್ತಾಯಗೊಳಿಸುತ್ತಿದ್ದಾರೆ. ಎರಡು ದಶಕಗಳ ಕಾಲ ಬಂಗಾಳ ಕ್ರಿಕೆಟ್ ಪರ ಆಡಿದ ತಿವಾರಿ ಕ್ರಿಕೆಟ್ ಅಧ್ಯಾಯ ಅಂತ್ಯಗೊಂಡಿದೆ.(CAB)
(2 / 6)
ಮನೋಜ್ ತಿವಾರಿ ನಿವೃತ್ತಿ ದಿನವಾದ ಭಾನುವಾರ ಈಡನ್ ಮೈದಾನವೇ ಭಾವುಕವಾಗಿತ್ತು. ಬಿಹಾರ ವಿರುದ್ಧದ ರಣಜಿ ಪಂದ್ಯದಲ್ಲಿ ಗೆಲುವಿನೊಂದಿಗೆ ತಮ್ಮ ಕ್ರಿಕೆಟ್ ವೃತ್ತಿಬದುಕಿಗೆ ಅಂತ್ಯ ಹಾಡಿದರು.
(3 / 6)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ, ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಮನೋಜ್‌ಗೆ ಚಿನ್ನದ ಬ್ಯಾಟ್‌ನೊಂದಿಗೆ ಸನ್ಮಾನಿಸಲಾಯಿತು.(CAB)
(4 / 6)
ಸೌರವ್ ಗಂಗೂಲಿ ಕೂಡಾ ಸನ್ಮಾನ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಂಗಾಳ ಕ್ರಿಕೆಟ್ ಇತಿಹಾಸದಲ್ಲಿ ಮನೋಜ್ ತಿವಾರಿ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. ನೀನು ತುಂಬಾ ಪ್ರತಿಭಾವಂತ. ಬಂಗಾಳ ಕ್ರಿಕೆಟ್‌ಗೆ ನಿಮ್ಮ ಅತ್ಯುತ್ತಮ ಕೊಡುಗೆ ನೀಡಿದ್ದೀರಿ. ಬಂಗಾಳ ಕ್ರಿಕೆಟ್‌ನ ಹೊಸ ಪೀಳಿಗೆಗೆ ನೀವು ಸ್ಫೂರ್ತಿಯಾಗುತ್ತೀರಿ ಎಂದು ಗಂಗೂಲಿ ಹೇಳಿದ್ದಾರೆ.(CAB)
(5 / 6)
ಬಿಹಾರ ವಿರುದ್ಧದ ರಣಜಿ ಪಂದ್ಯದ ಕೊನೆಯಲ್ಲಿ ಮನೋಜ್ ಎಲ್ಲರಿಗೂ ಧನ್ಯವಾದ ಹೇಳಿದರು. ತಂಡ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಪ್ರತ್ಯೇಕವಾಗಿ ಛಾಯಾಚಿತ್ರ ತೆಗೆಸಿಕೊಂಡರು.(CAB)
(6 / 6)
ತಿವಾರಿ ಅವರು 148 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 47.86ರ ಸರಾಸರಿಯಲ್ಲಿ 10,195 ರನ್ ಗಳಿಸಿದ್ದಾರೆ. ಅವರು ಲಿಸ್ಟ್-ಎ ಪಂದ್ಯಗಳಲ್ಲಿ 5,581 ರನ್ ಮತ್ತು ಟಿ20ಗಳಲ್ಲಿ 3,436 ರನ್ ಗಳಿಸಿದ್ದಾರೆ. 2011ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 104 ರನ್ ಗಳಿಸಿದ್ದರು. ತಿವಾರಿ ಅವರು 12 ಏಕದಿನ ಪಂದ್ಯಗಳಲ್ಲಿಯೂ ಭಾರತದ ಪರ ಆಡಿದ್ದಾರೆ. ಮೂರು ಟಿ20ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇತರ ಗ್ಯಾಲರಿಗಳು