ಐಪಿಎಲ್ ಮಧ್ಯದಲ್ಲೇ ಸದ್ದಿಲ್ಲದೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ವಿಶ್ವದಾಖಲೆ ಮುರಿದ ಮೊಹಮ್ಮದ್ ರಿಜ್ವಾನ್
- Rizwan Breaks Kohli's World Record: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಅವರು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಜಂಟಿ ವಿಶ್ವದಾಖಲೆ ಮುರಿದಿದ್ದಾರೆ.
- Rizwan Breaks Kohli's World Record: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡದ ಮೊಹಮ್ಮದ್ ರಿಜ್ವಾನ್ ಅವರು ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಜಂಟಿ ವಿಶ್ವದಾಖಲೆ ಮುರಿದಿದ್ದಾರೆ.
(1 / 6)
ಐಪಿಎಲ್ 2024ರ ಮಧ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಸದ್ದಿಲ್ಲದೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಮ್ ಅವರ ಶ್ರೇಷ್ಠ ವಿಶ್ವದಾಖಲೆ ಮುರಿದಿದ್ದಾರೆ. ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಜ್ವಾನ್, ಕೊಹ್ಲಿ ಮತ್ತು ಬಾಬರ್ ನಂತರ ಅಗ್ರಸ್ಥಾನಕ್ಕೆ ಏರಿದ್ದಾರೆ..
(2 / 6)
ರಾವಲ್ಪಿಂಡಿಯಲ್ಲಿ ಶನಿವಾರ (ಏಪ್ರಿಲ್ 21) ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20ಯಲ್ಲಿ ರಿಜ್ವಾನ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಗಳಿಸಿದರು. ಇದರೊಂದಿಗೆ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೇಗವಾಗಿ 3,000 ರನ್ಗಳ ಗಡಿ ದಾಟಿದ್ದಾರೆ. ರಿಜ್ವಾನ್ 92 ಟಿ20ಐ ಪಂದ್ಯಗಳಲ್ಲಿ 79 ಇನ್ನಿಂಗ್ಸ್ಗಳಲ್ಲಿ 3026 ರನ್ ಗಳಿಸಿದ್ದಾರೆ. 1 ಶತಕ ಮತ್ತು 26 ಅರ್ಧಶತಕಗಳು ಕೂಡ ಸೇರಿವೆ.
(3 / 6)
ರಿಜ್ವಾನ್ 3000 ರನ್ ಗಡಿ ದಾಟಿದ ಕೂಡಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಅತಿ ಕಡಿಮೆ ಇನ್ನಿಂಗ್ಸ್ಗಳಲ್ಲಿ (79) ಈ ಮೈಲಿಗಲ್ಲನ್ನು ಮುಟ್ಟಿದ ಅತ್ಯಂತ ವೇಗದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟಿ20ಐನಲ್ಲಿ ಅತಿ ವೇಗವಾಗಿ 3,000 ರನ್ ಪೂರೈಸಿದ ವಿಶ್ವದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ರಿಜ್ವಾನ್ ಪಾತ್ರರಾಗಿದ್ದಾರೆ. ಇದರೊಂದಿಗೆ ಕೊಹ್ಲಿ ಮತ್ತು ಬಾಬರ್ ಅವರು 81 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು.
(4 / 6)
ಮಾರ್ಚ್ 14, 2021ರಂದು ಅಹಮದಾಬಾದ್ನ ನಡೆದ ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 3000 ರನ್ಗಳ ಗಡಿ ದಾಟಿದರು. ಆ ಪಂದ್ಯದಲ್ಲಿ, ಅವರು 49 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 73 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊಹ್ಲಿ 117 ಟಿ20 ಪಂದ್ಯಗಳಲ್ಲಿ 109 ಇನ್ನಿಂಗ್ಸ್ಗಳಲ್ಲಿ 4037 ರನ್ ಗಳಿಸಿದ್ದಾರೆ. 1 ಶತಕ ಮತ್ತು 37 ಅರ್ಧಶತಕಗಳು ಸಹ ಸೇರಿವೆ.
(5 / 6)
ಸೆಪ್ಟೆಂಬರ್ 30, 2022ರಂದು ಲಾಹೋರ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಬಾಬರ್ 3000 ರನ್ಗಳ ಮೈಲಿಗಲ್ಲನ್ನು ದಾಟಿದ್ದರು. 59 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 87 ರನ್ ಗಳಿಸಿ ಅಜೇಯರಾಗಿ ಉಳಿದರು. ಬಾಬರ್ 111 ಟಿ20 ಪಂದ್ಯಗಳಲ್ಲಿ 104 ಇನ್ನಿಂಗ್ಸ್ಗಳಲ್ಲಿ 3712 ರನ್ ಗಳಿಸಿದ್ದಾರೆ. ಅವರು 3 ಶತಕಗಳು ಮತ್ತು 33 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಇತರ ಗ್ಯಾಲರಿಗಳು