2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್; ಕಾಂಗರೂಗಳ ಪ್ರಾಬಲ್ಯ, ಅಗ್ರ 10ರಲ್ಲಿ ಏಕೈಕ ಭಾರತೀಯ
- Most Test Runs In 2023: 2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿದವರು ಯಾರು? ಯಾರು ಹೆಚ್ಚು ರನ್ ಗಳಿಸಿದರು? ಅಗ್ರ ಹತ್ತು ಆಟಗಾರರ ಪಟ್ಟಿ ಇಲ್ಲಿದೆ.
- Most Test Runs In 2023: 2023ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿದವರು ಯಾರು? ಯಾರು ಹೆಚ್ಚು ರನ್ ಗಳಿಸಿದರು? ಅಗ್ರ ಹತ್ತು ಆಟಗಾರರ ಪಟ್ಟಿ ಇಲ್ಲಿದೆ.
(1 / 11)
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ 2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಕಲೆಹಾಕಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ 1210 ರನ್ ಗಳಿಸಿದ್ದಾರೆ. 2023ರಲ್ಲಿ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಕ್ರಿಕೆಟಿಗ ಖವಾಜಾ. ಅವರು 3 ಶತಕ ಮತ್ತು 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.(AFP)
(2 / 11)
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 2023ರಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು 24 ಇನ್ನಿಂಗ್ಸ್‌ಗಳಲ್ಲಿ 929 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 3 ಅರ್ಧ ಶತಕಗಳು ಸೇರಿವೆ.(AFP)
(3 / 11)
ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಆಸೀಸ್‌ನ ಮತ್ತೊಬ್ಬ ಆಟಗಾರ ಟ್ರಾವಿಸ್ ಹೆಡ್ ಇದ್ದಾರೆ. ಅವರು 2023ರಲ್ಲಿ 23 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 919 ರನ್ ಗಳಿಸಿದರು. ಹೆಡ್ 1 ಶತಕ ಮತ್ತು 5 ಅರ್ಧ ಶತಕ ಸಿಡಿಸಿದ್ದಾರೆ.(AFP)
(4 / 11)
ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಶೆನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 25 ಇನ್ನಿಂಗ್ಸ್‌ಗಳಲ್ಲಿ 803 ರನ್ ಗಳಿಸಿದ್ದಾರೆ. ಲ್ಯಾಬುಶೆನ್ 2023ರಲ್ಲಿ 1 ಟೆಸ್ಟ್ ಶತಕ ಗಳಿಸಿದ್ದಾರೆ. ಉಳಿದಂತೆ 4 ಅರ್ಧಶತಕ ಸಿಡಿಸಿದ್ದಾರೆ.(AP)
(5 / 11)
ಇಂಗ್ಲೆಂಡ್‌ನ ಜೋ ರೂಟ್ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 787 ರನ್ ಗಳಿಸಿದರು. 2 ಶತಕ ಹಾಗೂ 5 ಅರ್ಧ ಶತಕ ಬಾರಿಸಿದ್ದಾರೆ.(Reuters)
(6 / 11)
ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 701 ರನ್ ಗಳಿಸಿದರು. 1 ಶತಕ ಮತ್ತು 6 ಅರ್ಧ ಶತಕ ಗಳಿಸಿದ್ದಾರೆ.(Reuters)
(7 / 11)
ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಈ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಅವರು 2023 ರಲ್ಲಿ 13 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 695 ರನ್ ಗಳಿಸಿದ್ದಾರೆ. ಕಿವೀಸ್ ಸ್ಟಾರ್ 4 ಶತಕ ಸಿಡಿಸಿದ್ದಾರೆ.(AP)
(8 / 11)
ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಅವರು ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. 2023ರಲ್ಲಿ ಕೊಹ್ಲಿ 12 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 671 ರನ್ ಕಲೆಹಾಕಿದ್ದಾರೆ. 2 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ.(PTI)
(9 / 11)
ಇಂಗ್ಲೆಂಡ್‌ನ ಬೆನ್ ಡಕೆಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಅವರು 2023ರಲ್ಲಿ 15 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 654 ರನ್ ಗಳಿಸಿದ್ದಾರೆ. 1 ಶತಕ ಮತ್ತು 3 ಅರ್ಧ ಶತಕ ಗಳಿಸಿದ್ದಾರೆ.(AFP)
(10 / 11)
ಶ್ರೀಲಂಕಾದ ದಿಮುತ್ ಕರುಣರತ್ನೆ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಅವರು 2023 ರಲ್ಲಿ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 608 ರನ್ ಗಳಿಸಿದ್ದಾರೆ.(AFP)
ಇತರ ಗ್ಯಾಲರಿಗಳು