Team India: ಟೀಮ್ ಇಂಡಿಯಾ ಟಿ20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ; ಕಣ್ಣು ಹಾಯಿಸಿದಷ್ಟೂ ಜನ ಸಾಗರ!
- Team India Parade: ಟಿ20 ವಿಶ್ವಕಪ್ ಗೆದ್ದ 5 ದಿನಗಳ ಬಳಿಕ ಟೀಂ ಇಂಡಿಯಾ ತವರಿಗೆ ಮರಳಿದೆ. ಮುಂಬೈನ ಮರೀನ್ ಡ್ರೈವ್ನಲ್ಲಿ ಲಕ್ಷಾಂತರ ಅಭಿಮಾನಿಗಳು ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ ಕೋರಿದರು.
- Team India Parade: ಟಿ20 ವಿಶ್ವಕಪ್ ಗೆದ್ದ 5 ದಿನಗಳ ಬಳಿಕ ಟೀಂ ಇಂಡಿಯಾ ತವರಿಗೆ ಮರಳಿದೆ. ಮುಂಬೈನ ಮರೀನ್ ಡ್ರೈವ್ನಲ್ಲಿ ಲಕ್ಷಾಂತರ ಅಭಿಮಾನಿಗಳು ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ ಕೋರಿದರು.
(1 / 10)
ಟಿ20 ವಿಶ್ವಕಪ್ 2024 ಗೆದ್ದ ಐದು ದಿನಗಳ ನಂತರ ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.
(2 / 10)
ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಬಾರ್ಬಡೋಸ್ನಿಂದ ರೋಹಿತ್ ಶರ್ಮಾ ನೇತೃತ್ವದ ತಂಡ ದೆಹಲಿಗೆ ಬಂದಿಳಿಯಿತು.
(AFP)(3 / 10)
ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಘೋಷಣೆಯೊಂದಿಗೆ ಕ್ರಿಕೆಟಿಗರು ದೆಹಲಿಯ ಐಟಿಸಿ ಮೌರ್ಯ ಹೋಟೆಲ್ಗೆ ತೆರಳಿದರು.
(AFP)(4 / 10)
ಹೋಟೆಲ್ನಲ್ಲಿ ಕೆಲಹೊತ್ತು ವಿಶ್ರಾಂತಿ ಪಡೆದ ಆಟಗಾರರು ನಂತರ ಪ್ರಧಾನಿ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು.
(PTI)(5 / 10)
ಬಳಿಕ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಪ್ರಯಾಣಿಸಿದರು. ಮುಂಬೈನ ಮರಿನ್ ಡ್ರೈವ್ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ತೆರೆದ ಬಸ್ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಾಯಿತು.
(6 / 10)
ಆದರೆ, ಮೆರವಣಿಗೆ ವೇಳೆ ಭಾರಿ ಜನಸ್ತೋಮ ನೆರೆದಿತ್ತು. ಕಣ್ಣು ಹಾಯಿಸಿದಷ್ಟೂ ಜನವೋ ಜನವೋ ಜನ. ಲಕ್ಷಗಳಲ್ಲಿ ಜನರು ನೆರೆದಿದ್ದರು.
(7 / 10)
ತಂಡವು ತೆರೆದ ಬಸ್ನಲ್ಲಿ ವಾಂಖೆಡೆ ಕ್ರೀಡಾಂಗಣವನ್ನು ತಲುಪಿತು. ನಂತರ ಮೈದಾನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬಿಸಿಸಿಐ 125 ಕೋಟಿ ಬಹುಮಾನದ ಮೊತ್ತ ಚೆಕ್ ಪಡೆದರು.
(8 / 10)
ಭಾರತ ತಂಡ ಮುಂಬೈಗೆ ಬಂದಿಳಿದ ವಿಮಾನಕ್ಕೆ 'ಯುಕೆ 1845' ಎಂದು ಹೆಸರಿಡಲಾಗಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಜರ್ಸಿ ಸಂಖ್ಯೆಗಳು ಕ್ರಮವಾಗಿ '18' ಮತ್ತು '45' ಆಗಿವೆ.
(9 / 10)
ಏಕೆಂದರೆ ರೋಹಿತ್ ಮತ್ತು ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಹೀಗಾಗಿ, ಅವರಿಗೆ ಗೌರವ ನೀಡುವ ಸಲುವಾಗಿ ಈ ಜೆರ್ಸಿ ಸಂಖ್ಯೆಗಳನ್ನು ವಿಮಾನಕ್ಕೆ ಇಡಲಾಗಿದೆ.
(ANI )ಇತರ ಗ್ಯಾಲರಿಗಳು