ಕನ್ನಡ ಸುದ್ದಿ  /  Photo Gallery  /  Cricket News Mumbai Indians Players Fans Troll Naveen Ul Haq With Mango Posts After Lsg Vs Mi Ipl Eliminator Clash Prs

Naveen ul haq Troll: ಕೆಜಿ ಮಾವಿನ ಹಣ್ಣು ಎಷ್ಟು ಬ್ರೋ; ನವೀನ್ ಜೊತೆ ಚೆಲ್ಲಾಟವಾಡ್ತಿರುವ ಮುಂಬೈ ಇಂಡಿಯನ್ಸ್ ಪ್ಲೇಯರ್ಸ್, ನೆಟಿಜನ್ಸ್

  • ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಸೋತ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್​ ತಂಡದ ವೇಗಿ ನವೀನ್ ಉಲ್​ ಹಕ್​ ಅವರನ್ನು ಮತ್ತೆ ಟ್ರೋಲ್​ ಮಾಡಲಾಗುತ್ತಿದೆ. ಮೀಮ್ಸ್ ಹೇಗಿವೆ ಅಂತ ನೀವೇ ನೋಡಿ.

16ನೇ ಆವೃತ್ತಿಯ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಗೆದ್ದು ಕ್ವಾಲಿಫೈಯರ್​ 2ಕ್ಕೆ ಪ್ರವೇಶ ಪಡೆದಿದೆ. ಲಕ್ನೋ ಸೂಪರ್ ಜೈಂಟ್ಸ್​ ತಂಡವು ಸೋತು ಮತ್ತೊಮ್ಮೆ ಎಲಿಮಿನೇಟರ್​ನಲ್ಲೇ ನಿರ್ಗಮಿಸಿದೆ.
icon

(1 / 10)

16ನೇ ಆವೃತ್ತಿಯ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಗೆದ್ದು ಕ್ವಾಲಿಫೈಯರ್​ 2ಕ್ಕೆ ಪ್ರವೇಶ ಪಡೆದಿದೆ. ಲಕ್ನೋ ಸೂಪರ್ ಜೈಂಟ್ಸ್​ ತಂಡವು ಸೋತು ಮತ್ತೊಮ್ಮೆ ಎಲಿಮಿನೇಟರ್​ನಲ್ಲೇ ನಿರ್ಗಮಿಸಿದೆ.(IPL Twitter)

ಈ ಪಂದ್ಯದ ಸೋಲಿನ ಬೆನ್ನಲ್ಲೇ ಲಕ್ನೋ ತಂಡದ ವೇಗಿ ನವೀನ್​ ಉಲ್​ ಹಕ್​ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗುತ್ತಿದೆ. ವಿರಾಟ್​ ಕೊಹ್ಲಿ ಔಟಾಗಿದ್ದಾಗ ಬಳಸಿದ್ದ ಮಾವಿನ ಹಣ್ಣಿನ ಥಿಯರಿಯನ್ನೇ ನವೀನ್​ಗೂ ಬಳಸುತ್ತಿರುವುದು ವಿಶೇಷ.
icon

(2 / 10)

ಎಲಿಮಿನೇಟರ್ ಪಂದ್ಯದಲ್ಲಿ ನವೀನ್​ ಉಲ್​ ಹಕ್​ 4 ವಿಕೆಟ್ ಪಡೆದರು. ಆ ಮೂಲಕ ಮುಂಬೈ ತಂಡವನ್ನು ಕಟ್ಟಿಹಾಕಲು ಶ್ರಮಿಸಿದರು. ಇವರ ಅಮೋಘ ಬೌಲಿಂಗ್​ ಹೊರತಾಗಿಯೂ ಮುಂಬೈ 7 ವಿಕೆಟ್ ನಷ್ಟಕ್ಕೆ 182 ರನ್​ ಗಳಿಸಿತು. ಕೊನೆಗೆ ಲಕ್ನೋ 101 ರನ್​ಗೆ ಆಲೌಟಾಯಿತು.
icon

(3 / 10)

ಎಲಿಮಿನೇಟರ್​ನಲ್ಲಿ ಲಕ್ನೋ ಸೋತ ನಂತರ ನೆಟಿಜನ್ಸ್​, ನವೀನ್ ಅವರನ್ನು ಗೇಲಿ ಮಾಡುತ್ತಿದ್ದಾರೆ. ಅಭಿಮಾನಿಗಳಷ್ಟೇ ಅಲ್ಲ, ಮುಂಬೈ ಆಟಗಾರರು, ಸ್ವಿಗ್ಗಿ ಮತ್ತು ಜೊಮಾಟೊ ಇದರಲ್ಲಿ ಪಾಲ್ಗೊಂಡಿದೆ.
icon

(4 / 10)

ಲಕ್ನೋ-ಬೆಂಗಳೂರು ಪಂದ್ಯದಲ್ಲಿ ಕೊಹ್ಲಿ ಜೊತೆ ನವೀನ್​ ಜಗಳವಾಡಿದ್ದರು. ಮುಂಬೈ-ಬೆಂಗಳೂರು ಪಂದ್ಯದಲ್ಲಿ ಕೊಹ್ಲಿ ಔಟಾದಾಗ ಮ್ಯಾಚ್ ವೀಕ್ಷಿಸುತ್ತಿದ್ದ ವೇಳೆ ಮಾವಿನ ಹಣ್ಣಿನ ಬಟ್ಟಲನ್ನು ಹಂಚಿ ‘ಸ್ವೀಟ್ ಮ್ಯಾಂಗೋಸ್’ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಕಿಂಡಲ್​ ಮಾಡಿದ್ದರು.
icon

(5 / 10)

ಅಂದಿನಿಂದ ನವೀನ್, ಭಾರತೀಯ ಅಭಿಮಾನಿಗಳಿಗೆ ಟ್ರೋಲಿಂಗ್ ಸರಕು ಆಗಿದ್ದಾರೆ. ನಿನ್ನೆ ಮುಂಬೈ ವಿರುದ್ಧದ ಪಂದ್ಯದಲ್ಲಿ ನವೀನ್, ನಾಲ್ಕು ವಿಕೆಟ್ ಕಬಳಿಸಿದ ಬಳಿಕವೂ ಕೆಎಲ್ ರಾಹುಲ್ ಸಂಭ್ರಮಾಚರಣೆ ಶೈಲಿ ಅವರನ್ನು ಮತ್ತಷ್ಟು ಕೆರಳಿಸಿತ್ತು.
icon

(6 / 10)

ಆದರೆ, ಈ ಪಂದ್ಯದಲ್ಲಿ ಸೋತ ನಂತರ ಅಭಿಮಾನಿಗಳು ನವೀನ್ ಮೇಲಿನ ಕರುಣೆ, ಮರೆತು ಟ್ರೋಲ್ ಮಾಡಲಾರಂಭಿಸಿದ್ದಾರೆ. ನವೀನ್‌ನೊಂದಿಗೆ ಮಾವು ಮಾರಾಟಗಾರನಂತೆ ಮೀಮ್‌ಗಳನ್ನು ರಚಿಸಲಾಗಿದೆ ಮತ್ತು ಆಡಲಾಗುತ್ತದೆ.
icon

(7 / 10)

ಮುಂಬೈ ಆಟಗಾರರಾದ ಕುಮಾರ್ ಕಾರ್ತಿಕೇಯ, ವಿಷ್ಣು ವಿನೋದ್ ಮತ್ತು ಸಂದೀಪ್ ವಾರಿಯರ್ ಕೂಡ ಮಾವಿನ ಹಣ್ಣುಗಳನ್ನು ಮೇಜಿನ ಮೇಲಿಟ್ಟು 'ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಮಾತನಾಡಬೇಡಿ' ಎಂಬ ಶೈಲಿಯಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದು ಸಖತ್​ ವೈರಲ್ ಆಗುತ್ತಿದೆ. ಸಂದೀಪ್ ವಾರಿಯರ್ ಈ ಫೋಟೋವನ್ನು ಪೋಸ್ಟ್ ಮಾಡಿ ನಂತರ ಅಳಿಸಿದ್ದಾರೆ. 
icon

(8 / 10)

ಫುಡ್ ಡೆಲಿವರಿ ಆ್ಯಪ್​ಗಳಾದ ಜೊಮಾಟೊ ಮತ್ತು ಸ್ವಿಗ್ಗಿ ಕೂಡ ಟ್ರೋಲ್ ಮಾಡುತ್ತಿವೆ. ನವೀನ್ ಬ್ಯಾಟಿಂಗ್ ಮಾಡುತ್ತಿರುವ ಫೋಟೋವನ್ನು ಜೊಮಾಟೊ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, 'ನಾಟ್ ಸೋ ಸ್ವೀಟ್ ಮ್ಯಾಂಗೋಸ್' ಎಂದು ಪೋಸ್ಟ್ ಮಾಡಿದೆ. 
icon

(9 / 10)

ಕತ್ತರಿಸಿದ ಮಾವಿನ ಹಣ್ಣಿನ ಫೋಟೋವನ್ನು ಶೇರ್ ಮಾಡುವ ಮೂಲಕ ಸ್ವಿಗ್ಗಿ ಕೂಡ ಟ್ರೋಲ್ ಮಾಡಿದೆ. ಮ್ಯಾಂಗೋ ಹೆಸರಿನಲ್ಲಿ ನವೀನ್ ಸಖತ್​ ಟ್ರೋಲ್​ ಆಗುತ್ತಿದ್ದಾರೆ. ಈ ಸೀಸನ್​ ಮುಗೀತು, ಮುಂದಿನ ಸೀಸನ್​ನಲ್ಲಿ ಮಾವಿನ ಹಣ್ಣು ತನ್ನಿ ಎಂದು ವ್ಯಂಗ್ಯವಾಡಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು