ಅಂಡರ್ 19 ವಿಶ್ವಕಪ್‌ನಲ್ಲಿ 2ನೇ ಶತಕ ಸಿಡಿಸಿದ ಮುಶೀರ್ ಖಾನ್; ಧವನ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ
- ICC U19 World Cup India vs New Zealand: ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ತಂಡದ ಆಟಗಾರ ಮುಶೀರ್ ಖಾನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಟೂರ್ನಮೆಂಟ್‌ನಲ್ಲಿ ಎರಡನೇ ಶತಕ ಸಿಡಿಸಿದ ಸರ್ಫರಾಜ್ ಖಾನ್ ತಮ್ಮ, ನ್ಯೂಜಿಲ್ಯಾಂಡ್ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯದಲ್ಲಿ ಅಬ್ಬರಿಸಿದರು. ಇದರೊಂದಿಗೆ ಶಿಖರ್ ಧವನ್ ಅವರ ದೀರ್ಘಾಕಾಲದ ದಾಖಲೆಯನ್ನು ಸರಿಗಟ್ಟಿದರು.

(1 / 6)
ಬ್ಲೋಮ್‌ಫಾಂಟೈನ್‌ನ ಮಂಗಾಂಗ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಮುಶೀರ್ ಖಾನ್ 131 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಕೇವಲ 125 ಎಸೆತ ಎದುರಿಸಿದ ಅವರು, 13 ಬೌಂಡರಿ ಮತ್ತು ಮೂರು ಸಿಕ್ಸರ್ ಸಹಿತ ಅಬ್ಬರಿಸಿದರು.
(2 / 6)
ಮುಶೀರ್ ಈಗ ಟೂರ್ನಿಯಲ್ಲಿ ಕೇವಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 81.25ರ ಸರಾಸರಿಯಲ್ಲಿ 325 ರನ್ ಗಳಿಸಿದ್ದಾರೆ. ಇದು ಒಂದೇ ಅಂಡರ್ 19 ವಿಶ್ವಕಪ್ ಆವೃತ್ತಿಯಲ್ಲಿ ಭಾರತೀಯ ಬ್ಯಾಟರ್ ಗಳಿಸಿದ ಏಳನೇ ಅತಿ ಹೆಚ್ಚು ವೈಯಕ್ತಿಕ ಮೊತ್ತವಾಗಿದೆ. ಧವನ್ 2004ರಲ್ಲಿ 505 ರನ್ ಗಳಿಸುವುದರೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
(3 / 6)
ಈ ಶತಕದೊಂದಿಗೆ ಒಂದೇ ಅಂಡರ್ 19 ವಿಶ್ವಕಪ್ ಆವೃತ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಮುಶೀರ್ ಪಾತ್ರರಾದರು. ಈ ಹಿಂದೆ ಧವನ್ 2004ರಲ್ಲಿ ಮೂರು ಶತಕಗಳನ್ನು ಸಿಡಿಸಿದ್ದರು.
(4 / 6)
ಭಾರತಕ್ಕೆ ಆರಂಭಿಕ ಆಘಾತದ ನಂತರ ಮುಶೀರ್ ಮತ್ತು ಆದರ್ಶ್ ಜೊತೆಗೂಡಿ ಎರಡನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವಾಡಿದರು.
(5 / 6)
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು, 8 ವಿಕೆಟ್ ಕಳೆದುಕೊಂಡು 295 ರನ್ ಗಳಿಸಿತು. ಬೃಹತ್ ಗುರಿ ಬೆನ್ನಟ್ಟಿದ ಕಿವೀಸ್, ಕೇವಲ 28.1 ಓವರ್‌ಗಳಲ್ಲಿ ಕೇವಲ 81 ರನ್‌ಗಳಿಗೆ ಆಲೌಟ್ ಆಯ್ತು.
ಇತರ ಗ್ಯಾಲರಿಗಳು