Brother's Day 2024: ಪಠಾಣ್ ಸಹೋದರರಿಂದ ಪಾಂಡ್ಯವರೆಗೆ; ಭಾರತೀಯ ಕ್ರಿಕೆಟ್‌ನ ಸ್ಟಾರ್ ಅಣ್ಣ-ತಮ್ಮಂದಿರಿವರು
- National Brother's Day 2024: ಸಹೋದರರ ನಡುವಿನ ವಿಶೇಷ ಸಂಬಂಧವನ್ನು ಗೌರವಿಸಲು ಪ್ರತಿವರ್ಷ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಣ್ಣ-ತಮ್ಮಂದಿರ ದಿನದ ವಿಶೇಷ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್‌ನ ಜನಪ್ರಿಯ ಸಹೋದರರ ಕುರಿತು ತಿಳಿಯೋಣ.
- National Brother's Day 2024: ಸಹೋದರರ ನಡುವಿನ ವಿಶೇಷ ಸಂಬಂಧವನ್ನು ಗೌರವಿಸಲು ಪ್ರತಿವರ್ಷ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಣ್ಣ-ತಮ್ಮಂದಿರ ದಿನದ ವಿಶೇಷ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್‌ನ ಜನಪ್ರಿಯ ಸಹೋದರರ ಕುರಿತು ತಿಳಿಯೋಣ.
(1 / 6)
ಪ್ರತಿ ವರ್ಷ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಅಣ್ಣ-ತಮ್ಮಂದಿರು ಭಾವನಾತ್ಮಕವಾಗಿ ಹೆಚ್ಚು ಬೆರೆಯದಿದ್ದರೂ, ಈ ಸಂಬಂಧವು ಸ್ನೇಹಕ್ಕೆ ಪರ್ಯಾಯ. ಒಬ್ಬರ ನಲಿವಿಗೆ ಜೊತೆಯಾಗಿರುವುದಕ್ಕಿಂತ ನೋವಿನಲ್ಲಿ ಸಹೋದರ ಕೈಹಿಡಿಯುತ್ತಾನೆ. ಸಹೋದರರ ದಿನದ ವಿಶೇಷ ಸಂದರ್ಭದಲ್ಲಿ, ಭಾರತೀಯ ಕ್ರಿಕೆಟ್‌ನ ಸ್ಟಾರ್ ಅಣ್ಣ-ತಮ್ಮಂದಿರ ಕುರಿತು ತಿಳಿಯೋಣ.
(2 / 6)
ರಾಹುಲ್ ಚಹರ್-ದೀಪಕ್ ಚಹರ್: ರಾಹುಲ್ ಮತ್ತು ದೀಪಕ್ ಇಬ್ಬರೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಬೌಲರ್‌ಗಳು. ಇಬ್ಬರೂ ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ದೀಪಕ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದರೆ, ರಾಹುಲ್ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ.
(3 / 6)
ಸಂಜು ಸ್ಯಾಮ್ಸನ್-ಸ್ಯಾಲಿ ಸ್ಯಾಮ್ಸನ್: ಸಂಜು ಸ್ಯಾಮ್ಸನ್ ಅವರ ಸಹೋದರನ ಹೆಸರು ಸ್ಯಾಲಿ ಸ್ಯಾಮ್ಸನ್. ಅವನು ನೋಡಲು ಸಂಜುವಿನಂತೆಯೇ ಕಾಣುತ್ತಾನೆ. ಅವರ ಮತ್ತು ಸಂಜು ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸ್ಯಾಲಿ ಸ್ಯಾಮ್ಸನ್ ಇದುವರೆಗೆ ಲಿಸ್ಟ್ ಎ ಕ್ರಿಕೆಟ್ ಮಾತ್ರ ಆಡಿದ್ದಾರೆ.
(4 / 6)
ಇರ್ಫಾನ್ ಪಠಾಣ್-ಯೂಸುಫ್ ಪಠಾಣ್- ಭಾರತದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಇರ್ಫಾನ್ ಮತ್ತು ಯೂಸುಫ್ ಪಠಾಣ್ ಅಗ್ರಗಣ್ಯರು. ಈ ಇಬ್ಬರು ಸಹೋದರರು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಸದ್ಯ ಇಬ್ಬರೂ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಇರ್ಫಾನ್ ಮತ್ತು ಯೂಸುಫ್ ಇಬ್ಬರೂ 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರು. ಯೂಸುಫ್ 2011ರ ಏಕದಿನ ವಿಶ್ವಕಪ್ ತಂಡದಲ್ಲಿ ಆಡಿದ್ದರು.
(5 / 6)
ಹಾರ್ದಿಕ್ ಪಾಂಡ್ಯ-ಕೃನಾಲ್ ಪಾಂಡ್ಯ: ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಇಬ್ಬರೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಹಾರ್ದಿಕ್ ಟೀಮ್ ಇಂಡಿಯಾದಲ್ಲಿ ಅಪರೂಪದ ಸದಸ್ಯರಾಗಿದ್ದಾರೆ. ಕೃನಾಲ್ ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಐಪಿಎಲ್‌ನಲ್ಲಿ ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿದ್ದರೆ, ಕೃನಾಲ್ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ.
ಇತರ ಗ್ಯಾಲರಿಗಳು