ಟಿ20 ವಿಶ್ವಕಪ್ ಮಧ್ಯದಲ್ಲೇ ಇಂಡೋ-ಪಾಕ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ನ್ಯೂಯಾರ್ಕ್​ ಮೈದಾನ ನೆಲಸಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್ ಮಧ್ಯದಲ್ಲೇ ಇಂಡೋ-ಪಾಕ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ನ್ಯೂಯಾರ್ಕ್​ ಮೈದಾನ ನೆಲಸಮ

ಟಿ20 ವಿಶ್ವಕಪ್ ಮಧ್ಯದಲ್ಲೇ ಇಂಡೋ-ಪಾಕ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ನ್ಯೂಯಾರ್ಕ್​ ಮೈದಾನ ನೆಲಸಮ

  • New York stadium: ಟಿ20 ವಿಶ್ವಕಪ್ 2024 ಟೂರ್ನಿಯ ಮಧ್ಯದಲ್ಲೇ ಭಾರತ ಮತ್ತು ಪಾಕಿಸ್ತಾನ ತಂಡಕ್ಕೆ ಆತಿಥ್ಯ ವಹಿಸಿದ್ದ ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ನೆಲಸಮ ಮಾಡಲಾಗುತ್ತಿದೆ.

ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಟೂರ್ನಿಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ದೇಶಗಳು ಜಂಟಿ ಆತಿಥ್ಯ ವಹಿಸುತ್ತಿದೆ. ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸುವ ಸಲುವಾಗಿ ಮೊದಲ ಬಾರಿಗೆ ಅಮೆರಿಕದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಯಿತು. ಇದೇ ಕಾರಣಕ್ಕೆ ನ್ಯೂಯಾರ್ಕ್​ನಲ್ಲಿ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ತಾತ್ಕಲಿಕವಾಗಿ ನಿರ್ಮಿಸಲಾಗಿತ್ತು.
icon

(1 / 7)

ಬರೋಬ್ಬರಿ 250 ಕೋಟಿ ರೂಪಾಯಿ ವೆಚ್ಚದಲ್ಲಿ (30 ಮಿಲಿಯನ್ ಡಾಲರ್) ಈ ತಾತ್ಕಾಲಿಕ ಕ್ರೀಡಾಂಗಣವನ್ನು 106 ದಿನಗಳಲ್ಲಿ ನಿರ್ಮಿಸಲಾಗಿತ್ತು. ಈ ಮೈದಾನ 8 ಪಂದ್ಯಗಳಿಗೆ ಆತಿಥ್ಯ ವಹಿಸಲಾಗಿತ್ತು. ಆದರೀಗ ವಿಶ್ವಕಪ್ ನಡೆಯುತ್ತಿರುವ ಮಧ್ಯದಲ್ಲೇ ಈ ಕ್ರಿಕೆಟ್ ಸ್ಟೇಡಿಯಂ ಅನ್ನು ನೆಲಸಮ ಮಾಡಲಾಗಿದೆ. ಇದು ಎಲ್ಲರನ್ನೂ ಅಚ್ಚರಿ ಮೂಡಿಸಿದೆ.
icon

(2 / 7)

ನಸ್ಸೌ ಕೌಂಟಿ ಕ್ರಿಕೆಟ್ ಮೈದಾನವು 34,000 ಆಸನಗಳ ಸಾಮರ್ಥ್ಯ ಹೊಂದಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನೂತನ ತಂತ್ರಜ್ಞಾನದ ಸುಸಜ್ಜಿತ ಕ್ರೀಡಾಂಗಣ ಕಟ್ಟಲಾಗಿತ್ತು. ಈ ತಾತ್ಕಾಲಿಕ ಮೈದಾನದ ಪಿಚ್ ಅನ್ನು ಅಡಿಲೇಡ್​ನಿಂದ ತರಿಸಲಾಗಿತ್ತು. ಸ್ಟ್ಯಾಂಡ್ ಕೂಡ ತಾತ್ಕಾಲಿಕವಾಗಿ ನಿರ್ಮಿಸಲಾಗಿತ್ತು. ಅಲ್ಯೂಮಿನಿಯಂ ಮತ್ತು ಉಕ್ಕನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಲಾಗಿತ್ತು.
icon

(3 / 7)

ಟಿ20 ವಿಶ್ವಕಪ್​ ಟೂರ್ನಿ ನಂತರ ಅಮೆರಿಕದಲ್ಲಿ ಟೂರ್ನಿಗಳು ನಡೆಯುವುದು ತೀರಾ ಕಡಿಮೆ. ಹೀಗಾಗಿ, ವಿಶ್ವಕಪ್​ ನಂತರ ಈ ಮೈದಾನವನ್ನು ನೆಲಸಮಗೊಳಿಸುವುದಾಗಿ ಐಸಿಸಿ ಹೇಳಿತ್ತು. ಅದರಂತೆ ಈ ಕ್ರೀಡಾಂಗಣವನ್ನು ನೆಲಸಮಗೊಳಿಸಿ ಆ ಜಾಗವನ್ನು ತನ್ನ ಹಳೆಯ ಸ್ವರೂಪಕ್ಕೆ ತರಲಾಗುತ್ತಿದೆ.
icon

(4 / 7)

ನಸ್ಸೌ ಕ್ರಿಕೆಟ್ ಮೈದಾನದಲ್ಲಿ ಆತಿಥ್ಯ ವಹಿಸಲಾಗಿದ್ದ ಪಂದ್ಯಗಳು ಮುಕ್ತಾಯಗೊಂಡ ಬೆನ್ನಲ್ಲೇ ಮೈದಾನವನ್ನು ನೆಲಸಮ ಮಾಡುವ ಕಾರ್ಯಗಳು ಆರಂಭಗೊಂಡಿವೆ. ಈ ಬಗ್ಗೆ ಕ್ರಿಕ್​​ಬಜ್ ವರದಿ ಮಾಡಿದೆ.
icon

(5 / 7)

ಅಡಿಲೇಡ್​​ನಿಂದ ತರಿಸಲಾಗಿದ್ದ ಡ್ರಾಪ್ ಇನ್ ಪಿಚ್​​ ಅನ್ನು ತಮಗೆ ಉಳಿಸಿಕೊಳ್ಳಲು ಬಯಸಿದರೆ ಉಳಿಸಿಕೊಳ್ಳಬಹುದು ಎಂದು ಐಸಿಸಿ, ನಸ್ಸೌ ಕೌಂಟಿ ಅಧಿಕಾರಿಗಳಿಗೆ ತಿಳಿಸಿದೆ. ಪಿಚ್ ಬೇಡವೆಂದರೆ ಬೇರೆಡೆ ಸ್ಥಳಾಂತರಿಸಬಹುದು ಎಂದು ಸೂಚಿಸಿದೆ. ಹಾಗಾಗಿ ಈ ಪಿಚ್​ ಅನ್ನು ಫ್ಲೋರಿಡಾಕ್ಕೆ ಸ್ಥಳಾಂತರ ಮಾಡಬಹುದು ಎಂದು ಹೇಳಲಾಗಿದೆ.
icon

(6 / 7)

ಟೂರ್ನಿ ಆರಂಭದಿಂದಲೂ ಈ ಪಿಚ್​​ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದು ಅತ್ಯಂತ ಕೆಟ್ಟ ಪಿಚ್ ಎಂದು ಮಾಜಿ ಕ್ರಿಕೆಟರ್​ಗಳು ಟೀಕಿಸಿದ್ದರು. ಇದೇ ಮೈದಾನದಲ್ಲಿ ವಿಶ್ವಕಪ್ ಟೂರ್ನಿಯ ಹೈವೋಲ್ಟೇಜ್ ಇಂಡೋ-ಪಾಕ್ ಪಂದ್ಯ ಕೂಡ ನಡೆದಿತ್ತು. ಭಾರತ 119 ರನ್ ಗಳಿಸಿದ್ದರೆ, ಪಾಕ್ 113 ರನ್ ಗಳಿಸಿ ಆಲೌಟ್​ ಆಗಿತ್ತು.
icon

(7 / 7)

ಇತರ ಗ್ಯಾಲರಿಗಳು