ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‌4 ಓವರ್, 3 ವಿಕೆಟ್, 0 ರನ್; ನಾಲ್ಕು ಮೇಡನ್ ಓವರ್ ಎಸೆದು ಟಿ20 ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ಆರ್‌ಸಿಬಿ ಬೌಲರ್‌

‌4 ಓವರ್, 3 ವಿಕೆಟ್, 0 ರನ್; ನಾಲ್ಕು ಮೇಡನ್ ಓವರ್ ಎಸೆದು ಟಿ20 ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ಬರೆದ ಆರ್‌ಸಿಬಿ ಬೌಲರ್‌

  • 4-4-0-3. ಈ ಬೌಲಿಂಗ್‌ ಅಂಕಿ-ಅಂಶ ನೋಡಿದ್ರೆ ನಂಬಲು ಸಾಧ್ಯವೇ ಇಲ್ಲ. ಇದು ಟಿ20 ವಿಶ್ವಕಪ್‌ನಲ್ಲಿ ಕಿವೀಸ್‌ ವೇಗಿ ಲಾಕಿ ಫರ್ಗ್ಯುಸನ್ ಅವರ ಬೌಲಿಂಗ್ ಅಂಕಿ-ಅಂಶ. ಪಪುವಾ ನ್ಯೂಗಿನಿಯಾ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲಿಂಗ್‌ ಮಾಡಿದ ಅವರು, ಒಂದೇ ಒಂದು ರನ್‌ ಬಿಟ್ಟುಕೊಡದೆ, ದಾಖಲೆ ನಿರ್ಮಿಸಿದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಬೌಲರ್ ಒಬ್ಬರು ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲ್ಯಾಂಡ್‌ ವೇಗಿ ಫರ್ಗ್ಯುಸನ್ ಪಪುವಾ ನ್ಯೂ ಗಿನಿಯಾ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್‌ (ಅತ್ಯಂತ ಕಡಿಮೆ ರನ್) ಪ್ರದರ್ಶನ ನೀಡಿದ ದಾಖಲೆ ನಿರ್ಮಿಸಿದ್ದಾರೆ.
icon

(1 / 5)

ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಬೌಲರ್ ಒಬ್ಬರು ನಾಲ್ಕು ಓವರ್‌ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲ್ಯಾಂಡ್‌ ವೇಗಿ ಫರ್ಗ್ಯುಸನ್ ಪಪುವಾ ನ್ಯೂ ಗಿನಿಯಾ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್‌ (ಅತ್ಯಂತ ಕಡಿಮೆ ರನ್) ಪ್ರದರ್ಶನ ನೀಡಿದ ದಾಖಲೆ ನಿರ್ಮಿಸಿದ್ದಾರೆ.

ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ (ನಾಲ್ಕು ಓವರ್‌ ಎಸೆದು) ಅತ್ಯಂತ ಕಡಿಮೆ ರನ್‌ ಬಿಟ್ಟು ಕೊಟ್ಟವರ ಪಟ್ಟಿಯಲ್ಲಿ ಟಿಮ್ ಸೌಥಿ ಎರಡನೇ ಸ್ಥಾನದಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್ ಗಳಿಗೆ ಮೂರು ವಿಕೆಟ್ ಪಡೆದಿದ್ದಾರೆ. ಉಗಾಂಡಾದ ಫ್ರಾಂಕ್ ನೊಬುಗಾ ಮೂರನೇ ಸ್ಥಾನದಲ್ಲಿದ್ದಾರೆ. ಅವರು ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್ ನೀಡಿ ಎರಡು ವಿಕೆಟ್ ಪಡೆದಿದ್ದಾರೆ.
icon

(2 / 5)

ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ (ನಾಲ್ಕು ಓವರ್‌ ಎಸೆದು) ಅತ್ಯಂತ ಕಡಿಮೆ ರನ್‌ ಬಿಟ್ಟು ಕೊಟ್ಟವರ ಪಟ್ಟಿಯಲ್ಲಿ ಟಿಮ್ ಸೌಥಿ ಎರಡನೇ ಸ್ಥಾನದಲ್ಲಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್ ಗಳಿಗೆ ಮೂರು ವಿಕೆಟ್ ಪಡೆದಿದ್ದಾರೆ. ಉಗಾಂಡಾದ ಫ್ರಾಂಕ್ ನೊಬುಗಾ ಮೂರನೇ ಸ್ಥಾನದಲ್ಲಿದ್ದಾರೆ. ಅವರು ನಾಲ್ಕು ಓವರ್‌ಗಳಲ್ಲಿ ನಾಲ್ಕು ರನ್ ನೀಡಿ ಎರಡು ವಿಕೆಟ್ ಪಡೆದಿದ್ದಾರೆ.(PTI)

ಫರ್ಗುಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಒಂದೇ ಒಂದು ರನ್ ನೀಡದೆ ನಾಲ್ಕು ಓವರ್‌ ಎಸೆದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗಿಂತ ಮೊದಲು ಕೆನಡಾದ ಸಾದ್ ಬಿನ್ ಜಾಫರ್ ಈ ದಾಖಲೆ ಮಾಡಿದ್ದಾರೆ. ಕೆನಡಾದ ಬೌಲರ್ 2021ರಲ್ಲಿ ಪನಾಮ ವಿರುದ್ಧ ಯಾವುದೇ ರನ್ ನೀಡದೆ ನಾಲ್ಕು ಓವರ್‌ ಎಸೆದಿದ್ದರು. ಅಮೆರಿಕದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದಿದ್ದರು.
icon

(3 / 5)

ಫರ್ಗುಸನ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಒಂದೇ ಒಂದು ರನ್ ನೀಡದೆ ನಾಲ್ಕು ಓವರ್‌ ಎಸೆದ ವಿಶ್ವದ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರಿಗಿಂತ ಮೊದಲು ಕೆನಡಾದ ಸಾದ್ ಬಿನ್ ಜಾಫರ್ ಈ ದಾಖಲೆ ಮಾಡಿದ್ದಾರೆ. ಕೆನಡಾದ ಬೌಲರ್ 2021ರಲ್ಲಿ ಪನಾಮ ವಿರುದ್ಧ ಯಾವುದೇ ರನ್ ನೀಡದೆ ನಾಲ್ಕು ಓವರ್‌ ಎಸೆದಿದ್ದರು. ಅಮೆರಿಕದ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದಿದ್ದರು.(X)

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಬಾರಿಗೆ ಫರ್ಗುಸನ್ ನಾಲ್ಕು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ಮೂರು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇವರು ಆಡುತ್ತಿದ್ದಾರೆ.
icon

(4 / 5)

ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮೊದಲ ಬಾರಿಗೆ ಫರ್ಗುಸನ್ ನಾಲ್ಕು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ಮೂರು ವಿಕೆಟ್ ಪಡೆದ ದಾಖಲೆ ನಿರ್ಮಿಸಿದರು. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇವರು ಆಡುತ್ತಿದ್ದಾರೆ.(X)

ಪುರುಷರ ಟಿ20 ಪಂದ್ಯಗಳಲ್ಲಿ ನಾಲ್ಕು ಮೇಡನ್ ಓವರ್‌ ಎಸೆದ ವಿಶ್ವದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಫರ್ಗುಸನ್ ಪಾತ್ರರಾದರು. ಮೊದಲ ದಾಖಲೆಯನ್ನು ವಿದರ್ಭದ ಅಕ್ಷಯ್ ಕರ್ನೆವಾರ್ ನಿರ್ಮಿಸಿದ್ದಾರೆ. ಅವರು 2021ರಲ್ಲಿ ಮಣಿಪುರ ವಿರುದ್ಧ ಇತಿಹಾಸ ನಿರ್ಮಿಸಿದ್ದರು.
icon

(5 / 5)

ಪುರುಷರ ಟಿ20 ಪಂದ್ಯಗಳಲ್ಲಿ ನಾಲ್ಕು ಮೇಡನ್ ಓವರ್‌ ಎಸೆದ ವಿಶ್ವದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಫರ್ಗುಸನ್ ಪಾತ್ರರಾದರು. ಮೊದಲ ದಾಖಲೆಯನ್ನು ವಿದರ್ಭದ ಅಕ್ಷಯ್ ಕರ್ನೆವಾರ್ ನಿರ್ಮಿಸಿದ್ದಾರೆ. ಅವರು 2021ರಲ್ಲಿ ಮಣಿಪುರ ವಿರುದ್ಧ ಇತಿಹಾಸ ನಿರ್ಮಿಸಿದ್ದರು.(PTI)


ಇತರ ಗ್ಯಾಲರಿಗಳು