ಗೌತಮ್ ಗಂಭೀರ್ ಮಾತ್ರವಲ್ಲ, ಭಾರತ ಕ್ರಿಕೆಟ್ ತಂಡದ ಹೆಡ್​ಕೋಚ್ ಹುದ್ದೆಗೆ ಮತ್ತೊಬ್ಬರು ಎಂಟ್ರಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗೌತಮ್ ಗಂಭೀರ್ ಮಾತ್ರವಲ್ಲ, ಭಾರತ ಕ್ರಿಕೆಟ್ ತಂಡದ ಹೆಡ್​ಕೋಚ್ ಹುದ್ದೆಗೆ ಮತ್ತೊಬ್ಬರು ಎಂಟ್ರಿ!

ಗೌತಮ್ ಗಂಭೀರ್ ಮಾತ್ರವಲ್ಲ, ಭಾರತ ಕ್ರಿಕೆಟ್ ತಂಡದ ಹೆಡ್​ಕೋಚ್ ಹುದ್ದೆಗೆ ಮತ್ತೊಬ್ಬರು ಎಂಟ್ರಿ!

  • Gautam Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಗಂಭೀರ್​​ಗೆ ಪ್ರತಿಸ್ಫರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

ಭಾರತೀಯ ಕ್ರಿಕೆಟ್​ ತಂಡದ ಹೆಡ್​ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅವಿರೋಧ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಅವರಿಗೆ ಪ್ರತಿಸ್ಫರ್ಧಿ ಕಾಣಿಸಿಕೊಂಡಿದ್ದಾರೆ.
icon

(1 / 8)

ಹೆಡ್​ಕೋಚ್ ಸ್ಥಾನಕ್ಕೆ ಜೂನ್ 18ರಂದು ಬಿಸಿಸಿಐ ನಡೆಸಿದ ಸಂದರ್ಶನದಲ್ಲಿ ಡಬ್ಲ್ಯುವಿ ರಾಮನ್ ಕೂಡ ಹಾಜರಾಗಿದ್ದಾರೆ. ಅವರು ಸಹ ಉನ್ನತ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು.
icon

(2 / 8)

ಗೌತಮ್ ಹಾಗೂ ರಾಮನ್ ಅವರನ್ನು ಸಂದರ್ಶಿಸಿರುವ ಬಿಸಿಸಿಐ, ಕ್ರಿಕೆಟ್ ಸಲಹಾ ಸಮಿತಿ ಇಬ್ಬರೊಂದಿಗೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದೆ ಎಂದು ತಿಳಿದು ಬಂದಿದೆ.
icon

(3 / 8)

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಲು ಗಂಭೀರ್ ಅವರ ಪ್ರತಿಸ್ಪರ್ಧಿಯಾಗಿ ಡಬ್ಲ್ಯೂವಿ ರಾಮನ್ ಹೊರಹೊಮ್ಮಿದರು. ನ್ಯೂಸ್ 18 ಪ್ರಕಾರ, ಟೀಮ್ ಇಂಡಿಯಾದ ಮಾಜಿ ತಾರೆ ಮಂಗಳವಾರ ಕ್ರಿಕೆಟ್ ಸಲಹಾ ಸಮಿತಿಯ ಮುಂದೆ ಖುದ್ದಾಗಿ ಹಾಜರಾಗಿ ಸಂದರ್ಶನ ನೀಡಿದರು. ರಾಮನ್ ಈ ಹಿಂದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ರಾಮನ್ ಅವರ ಸಂದರ್ಶನವು ಕ್ರಿಕೆಟ್ ಸಲಹಾ ಸಮಿತಿಗೆ ಸಂತೋಷ ತಂದಿದೆ ಎಂದು ವರದಿಯಾಗಿದೆ. ಗೆಟ್ಟಿ ಅವರ ಫೋಟೋ.
icon

(4 / 8)

ಗೌತಮ್ ಗಂಭೀರ್ ಅವರು ಐಪಿಎಲ್​ನಲ್ಲಿ ಮೆಂಟರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಲಕ್ನೋ ಸೂಪರ್​ ಜೈಂಟ್ಸ್ ತಂಡಕ್ಕೆ 2022, 2023ರಲ್ಲಿ ಮೆಂಟರ್ ಆಗಿದ್ದರು.
icon

(5 / 8)

ಮೇ 26ಕ್ಕೆ ಮುಕ್ತಾಯಗೊಂಡ ಐಪಿಎಲ್​​​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದರು. ಲಕ್ನೋ ತೊರೆದು ಕೆಕೆಆರ್ ಮೆಂಟರ್ ಆಗಿ ಐಪಿಎಲ್ ಆರಂಭಕ್ಕೂ ಮುನ್ನ ನೇಮಕಗೊಂಡಿದ್ದರು.
icon

(6 / 8)

ಇನ್ನು 2021ರಲ್ಲಿ ಭಾರತ ಮಹಿಳಾ ತಂಡದ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದ ರಾಮನ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿವಿಧ ರಾಜ್ಯಗಳ ಮತ್ತು ಐಪಿಎಲ್​ನಲ್ಲಿ ಬ್ಯಾಟಿಂಗ್ ಕೋಚ್ ಆಗಿದ್ದರು.
icon

(7 / 8)

ಈ ಅನುಭವದೊಂದಿಗೆ ಡಬ್ಲ್ಯುವಿ ರಾಮನ್, ಟೀಮ್ ಇಂಡಿಯಾ ಪುರುಷರ ತಂಡಕ್ಕೆ ಹೆಡ್​ಕೋಚ್ ಆಗಲು ಬಯಸಿದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ಅಧಿಕೃತವಾಗಿ ಬಿಸಿಸಿಐ ಘೋಷಿಸಲಿದೆ.
icon

(8 / 8)

ಇತರ ಗ್ಯಾಲರಿಗಳು