Virat Kohli: ಎಷ್ಟು ಸಲ ಹೇಳೋದು, ವಿರಾಟ್ ಕೊಹ್ಲಿ ನೋಡಿ ಕಲಿ; ಬಾಬರ್ ಅಜಮ್ಗೆ ಬೆಂಡೆತ್ತಿದ ಪಾಕಿಸ್ತಾನ ಮಾಜಿ ನಾಯಕ
- Virat Kohli: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಕ್ಯಾಪ್ಟನ್ ಯೂನಿಸ್ ಖಾನ್ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ.
- Virat Kohli: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಕಳಪೆ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಕ್ಯಾಪ್ಟನ್ ಯೂನಿಸ್ ಖಾನ್ ಅತ್ಯುತ್ತಮ ಸಲಹೆಯೊಂದನ್ನು ನೀಡಿದ್ದಾರೆ.
(1 / 9)
ಪಾಕಿಸ್ತಾನದ ಏಕದಿನ ಮತ್ತು ಟಿ20ಐ ನಾಯಕ ಬಾಬರ್ ಅಜಮ್ ಈಗ ತಮ್ಮ ವೃತ್ತಿಜೀವನದ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಬ್ಯಾಟರ್ ಆಗಿಯೂ ಸತತ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಭಾರೀ ಟೀಕೆ ಎದುರಿಸುತ್ತಿದ್ದಾರೆ.(AFP)
(2 / 9)
ಬಾಂಗ್ಲಾದೇಶ ವಿರುದ್ಧದ ಇತ್ತೀಚಿನ 2 ಟೆಸ್ಟ್‌ಗಳ ಸರಣಿಯಲ್ಲಿ ಬಾಬರ್ 4 ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ದಾಖಲಿಸಿಲ್ಲ. ಅಲ್ಲದೆ, ಬಾಂಗ್ಲಾ ಎದುರು 0-2 ಅಂತರದಲ್ಲಿ ಸರಣಿ ಸೋಲು ಕೂಡ ಕಂಡರು. ಆದರೆ ತಂಡದ ನಾಯಕನಾಗಿದ್ದದ್ದು ಬೇರೆ. ಶಾನ್ ಮಸೂದ್ ಪ್ರಸ್ತುತ ಟೆಸ್ಟ್ ತಂಡದ ನಾಯಕ.(AP)
(3 / 9)
ಈ ಅವಮಾನಕರ ಸೋಲಿನ ನಂತರ ಬಾಬರ್ ಅಜಮ್ ಅವರನ್ನು ಟೀಕೆ ಮಾಡಲಾಗುತ್ತಿದೆ. ಕಳಪೆ ಫಾರ್ಮ್ನಿಂದ ತಂಡವು ಸೋಲಿಗೆ ಕಾರಣವಾಗುತ್ತಿದೆ. ಅವರ ಬದಲಿಗೆ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.(AP)
(4 / 9)
ಇದರ ನಡುವೆ 2009ರಲ್ಲಿ ಪಾಕಿಸ್ತಾನ ತಂಡವನ್ನು ಟಿ20 ವಿಶ್ವಕಪ್ ವಿಜೇತರನ್ನಾಗಿಸಿದ್ದ ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್ ಕೂಡ ಬಾಬರ್ರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂದಿದ್ದಾರೆ. ಇದು ಫಾರ್ಮ್ಗೆ ಮರಳಲು ನೆರವಾಗುತ್ತದೆ ಎಂದು ಹೇಳಿದ್ದಾರೆ.
(5 / 9)
2019ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಅವರಿಗೆ ನಾಯಕತ್ವ ನೀಡಲಾಗಿತ್ತು. ಈಗ ಅವರು ತಮ್ಮ ಆಟದ ಮೇಲೆ ಗಮನ ಹರಿಸಬೇಕಾಗಿದೆ. ಹೀಗಾಗಿ ಫಾರ್ಮ್ ಮರಳಿ ಪಡೆಯಲು ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯಬೇಕು ಎಂದು ಸಲಹೆ ನೀಡಿದ್ದಾರೆ.
(6 / 9)
ಬಾಬರ್ಗೆ ನನ್ನದೊಂದು ಸಲಹೆ. ಅವರು ನಾಯಕತ್ವದಿಂದ ಕೆಳಗಿಳಿದು ಬ್ಯಾಟಿಂಗ್‌ನತ್ತ ಗಮನ ಹರಿಸಬೇಕು. ವಿರಾಟ್ ಕೊಹ್ಲಿಯಿಂದ ಬಾಬರ್ ಅಜಮ್ ಪಾಠ ಕಲಿಯಬೇಕು. ಕ್ಯಾಪ್ಟನ್ಸಿ ತೊರೆದು ಕೊಹ್ಲಿ ಅವರಂತೆ ಫಾರ್ಮ್ಗೆ ಮರಳಬೇಕು ಎಂದು ಸೂಚಿಸಿದ್ದಾರೆ.
(7 / 9)
ನಾಯಕತ್ವ ತುಂಬಾ ಚಿಕ್ಕ ವಿಷಯ. ಆಟಗಾರರಿಗೆ ಪ್ರದರ್ಶನ ಮುಖ್ಯ. ಕೊಹ್ಲಿಯನ್ನು ನೋಡಿ.. ನಾಯಕತ್ವದಿಂದ ತಾವಾಗಿಯೇ ಹಿಂದೆ ಸರಿದರು. ನಂತರ ವಿಶ್ವದಾಖಲೆಗಳನ್ನು ಮುರಿಯುತ್ತಿದ್ದಾರೆ. ಯಾವುದೇ ಆಟಗಾರ ದೇಶಕ್ಕಾಗಿ ಆಡುವುದಕ್ಕೆ ಆದ್ಯತೆ ನೀಡಬೇಕು. ನಂತರ ವೈಯಕ್ತಿಕ ದಾಖಲೆಗಳು ಬರುತ್ತವೆ ಎಂದು ಯೂನಿಸ್ ಹೇಳಿದ್ದಾರೆ.
(8 / 9)
ಪಾಕಿಸ್ತಾನಿ ಕ್ರಿಕೆಟಿಗರು ಮೈದಾನದಲ್ಲಿ ಪ್ರದರ್ಶನಕ್ಕಿಂತ ಮೈದಾನದ ಹೊರಗೆ ಮಾತನಾಡುವುದೇ ಹೆಚ್ಚು ಎಂದು ಯೂನಿಸ್ ಟೀಕಿಸಿದ್ದಾರೆ. ಮುಂದಿನ ವರ್ಷ ಪಾಕ್ ನೆಲದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಈಗಾಗಲೇ ತಯಾರಿ ನಡೆಸುತ್ತಿದೆ.
ಇತರ ಗ್ಯಾಲರಿಗಳು