ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pakistan Super 8 Scenario: ಮಳೆಯಿಂದ ಒಂದು ಪಂದ್ಯ ರದ್ದಾದರೂ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಿಂದ ಹೊರಕ್ಕೆ

Pakistan Super 8 Scenario: ಮಳೆಯಿಂದ ಒಂದು ಪಂದ್ಯ ರದ್ದಾದರೂ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಿಂದ ಹೊರಕ್ಕೆ

  • ಟಿ20 ವಿಶ್ವಕಪ್ 2024ರಲ್ಲಿ ಸೂಪರ್‌ ಫೋರ್‌ ಹಂತಕ್ಕೆ ಪ್ರವೇಶಿಸುವ ಅವಕಾಶವನ್ನು ಪಾಕಿಸ್ತಾನ ತಂಡ ಬಹುತೇಕ ಕಳೆದುಕೊಂಡಿದೆ. ಇಂದು ಕೆನಡಾ ವಿರುದ್ಧದ ಪಂದ್ಯದಲ್ಲಿ ಗೆದ್ದರೂ, ತಂಡ ಟೂರ್ನಿಯಲ್ಲಿ ಉಳಿಯುವ ಸಾಧ್ಯತೆ ಇಲ್ಲ. ಹಾಗಿದ್ದರೆ ತಂಡದ ಮುಂದಿರುವ ಅವಕಾಶಗಳೇನು ಎಂಬುದನ್ನು ನೋಡೋಣ.

2024ರ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಅಮೆರಿಕ ತಂಡಗಳಿವೆ. ಟೂರ್ನಿಯ ಆರಂಭಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ತಂಡಗಳು ಗುಂಪಿನಿಂದ ಸೂಪರ್ ಎಂಟರ ಹಂತಕ್ಕೆ ಅರ್ಹತೆ ಪಡೆಯುವ ನೆಚ್ಚಿನ ತಂಡಗಳಾಗಿದ್ದವು. ಆದರೆ, ಪಾಕಿಸ್ತಾನ ತಂಡ ಮೊದಲ ಎರಡು ಪಂದ್ಯಗಳನ್ನು ಸೋತ ನಂತರ, ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. 'ಎ' ಗುಂಪಿನಿಂದ ಸೂಪರ್ ಎಂಟಕ್ಕೆ ಹೋಗುವ ರೇಸ್‌ನಲ್ಲಿ ಈಗ ಭಾರತ ಯುಎಸ್‌ ತಂಡಗಳು ಮುಂಚೂಣಿಯಲ್ಲಿವೆ.
icon

(1 / 6)

2024ರ ಟಿ20 ವಿಶ್ವಕಪ್‌ನಲ್ಲಿ ಎಲ್ಲಾ ನಾಲ್ಕು ಗುಂಪುಗಳಿಂದ ತಲಾ ಎರಡು ತಂಡಗಳು ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುತ್ತವೆ. 'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ ಮತ್ತು ಆತಿಥೇಯ ಅಮೆರಿಕ ತಂಡಗಳಿವೆ. ಟೂರ್ನಿಯ ಆರಂಭಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ತಂಡಗಳು ಗುಂಪಿನಿಂದ ಸೂಪರ್ ಎಂಟರ ಹಂತಕ್ಕೆ ಅರ್ಹತೆ ಪಡೆಯುವ ನೆಚ್ಚಿನ ತಂಡಗಳಾಗಿದ್ದವು. ಆದರೆ, ಪಾಕಿಸ್ತಾನ ತಂಡ ಮೊದಲ ಎರಡು ಪಂದ್ಯಗಳನ್ನು ಸೋತ ನಂತರ, ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. 'ಎ' ಗುಂಪಿನಿಂದ ಸೂಪರ್ ಎಂಟಕ್ಕೆ ಹೋಗುವ ರೇಸ್‌ನಲ್ಲಿ ಈಗ ಭಾರತ ಯುಎಸ್‌ ತಂಡಗಳು ಮುಂಚೂಣಿಯಲ್ಲಿವೆ.(ANI)

ಪಾಕಿಸ್ತಾನವು ಈಗಾಗಲೇ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದೆ. ಹೀಗಾಗಿ ಯುಎಸ್ ತಂಡವು ಸೂಪರ್ ಎಂಟಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಭಾರತ ಮತ್ತು ಯುಎಸ್ಎ ತಲಾ 2 ಪಂದ್ಯಗಳಲ್ಲಿ ಗೆದ್ದು 4 ಅಂಕಗಳನ್ನು ಗಳಿಸಿವೆ. ಹೀಗಾಗಿ ಅಂಕ ಖಾತೆ ತೆರೆಯದ ಪಾಕ್‌ ಸಂಕಷ್ಟದಲ್ಲಿದೆ. ಪಾಕಿಸ್ತಾವು ಮುಂದೆ ಕೊನೆಯ ಎರಡು ಪಂದ್ಯಗಳಲ್ಲಿ ಕೆನಡಾ ಮತ್ತು ಐರ್ಲೆಂಡ್ ಅನ್ನು ಸೋಲಿಸಿದರೆ ಮಾತ್ರ ನಾಲ್ಕು ಅಂಕಗಳನ್ನು ಗಳಿಸಲು ಸಾಧ್ಯ. ಆದರೆ, ಇಲ್ಲಿ ಸಣ್ಣ ಅಂತರದ ಗೆಲುವು ಸಾಕಾಗುವುದಿಲ್ಲ.
icon

(2 / 6)

ಪಾಕಿಸ್ತಾನವು ಈಗಾಗಲೇ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದೆ. ಹೀಗಾಗಿ ಯುಎಸ್ ತಂಡವು ಸೂಪರ್ ಎಂಟಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಭಾರತ ಮತ್ತು ಯುಎಸ್ಎ ತಲಾ 2 ಪಂದ್ಯಗಳಲ್ಲಿ ಗೆದ್ದು 4 ಅಂಕಗಳನ್ನು ಗಳಿಸಿವೆ. ಹೀಗಾಗಿ ಅಂಕ ಖಾತೆ ತೆರೆಯದ ಪಾಕ್‌ ಸಂಕಷ್ಟದಲ್ಲಿದೆ. ಪಾಕಿಸ್ತಾವು ಮುಂದೆ ಕೊನೆಯ ಎರಡು ಪಂದ್ಯಗಳಲ್ಲಿ ಕೆನಡಾ ಮತ್ತು ಐರ್ಲೆಂಡ್ ಅನ್ನು ಸೋಲಿಸಿದರೆ ಮಾತ್ರ ನಾಲ್ಕು ಅಂಕಗಳನ್ನು ಗಳಿಸಲು ಸಾಧ್ಯ. ಆದರೆ, ಇಲ್ಲಿ ಸಣ್ಣ ಅಂತರದ ಗೆಲುವು ಸಾಕಾಗುವುದಿಲ್ಲ.(AFP)

ಭಾರತ ಮತ್ತು ಯುಎಸ್ಎ ಮುಂದಿನ ಎರಡೂ ಪಂದ್ಯಗಳಲ್ಲಿ ಸೋತರೆ ಮಾತ್ರ ಪಾಕಿಸ್ತಾನಕ್ಕೆ ಅದೃಷ್ಠ ಖುಲಾಯಿಸಲಿದೆ. ಆಗ ಪಾಕಿಸ್ತಾನ ತನ್ನ ಕೊನೆಯ ಎರಡು ಗುಂಪು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆಲ್ಲಬೇಕು. ಈ ವೇಳೆ ಈ ಮೂರು ತಂಡಗಳ ನಡುವಿನ ನೆಟ್ ರನ್ ರೇಟ್ ಪೈಪೋಟಿ ಮುಂದುವರಿಯುತ್ತದೆ. ಒಂದು ವೇಳೆ ಯುಎಸ್ ಮತ್ತು ಭಾರತ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ, ಪಾಕ್‌ ಟೂರ್ನಿಯಿಂದ ನಿರ್ಗಮಿಸಲಿದೆ. ಆಗ ಪಾಕಿಸ್ತಾನ ತನ್ನ ಎರಡೂ ಪಂದ್ಯಗಳಲ್ಲಿ ಎಷ್ಟೇ ಅಂತರದಿಂದ ಗೆದ್ದರೂ ಟೂರ್ನಿಯಿಂದ ಹೊರಬೀಳಲಿದೆ.
icon

(3 / 6)

ಭಾರತ ಮತ್ತು ಯುಎಸ್ಎ ಮುಂದಿನ ಎರಡೂ ಪಂದ್ಯಗಳಲ್ಲಿ ಸೋತರೆ ಮಾತ್ರ ಪಾಕಿಸ್ತಾನಕ್ಕೆ ಅದೃಷ್ಠ ಖುಲಾಯಿಸಲಿದೆ. ಆಗ ಪಾಕಿಸ್ತಾನ ತನ್ನ ಕೊನೆಯ ಎರಡು ಗುಂಪು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆಲ್ಲಬೇಕು. ಈ ವೇಳೆ ಈ ಮೂರು ತಂಡಗಳ ನಡುವಿನ ನೆಟ್ ರನ್ ರೇಟ್ ಪೈಪೋಟಿ ಮುಂದುವರಿಯುತ್ತದೆ. ಒಂದು ವೇಳೆ ಯುಎಸ್ ಮತ್ತು ಭಾರತ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ, ಪಾಕ್‌ ಟೂರ್ನಿಯಿಂದ ನಿರ್ಗಮಿಸಲಿದೆ. ಆಗ ಪಾಕಿಸ್ತಾನ ತನ್ನ ಎರಡೂ ಪಂದ್ಯಗಳಲ್ಲಿ ಎಷ್ಟೇ ಅಂತರದಿಂದ ಗೆದ್ದರೂ ಟೂರ್ನಿಯಿಂದ ಹೊರಬೀಳಲಿದೆ.

ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನವು ಕೆನಡಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸೋತರೆ, ಪಾಕಿಸ್ತಾನವು ಅಧಿಕೃತವಾಗಿ ಪಂದ್ಯಾವಳಿಯಿಂದ ಹೊರಗುಳಿಯುತ್ತದೆ. ಈ ಪಂದ್ಯವು ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ. ಟೂರ್ನಿಯಲ್ಲಿ ಪಾಕಿಸ್ತಾನವು ಈ ಪಂದ್ಯವನ್ನು ಗೆಲ್ಲಬೇಕಾಗಿದೆ.
icon

(4 / 6)

ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನವು ಕೆನಡಾವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸೋತರೆ, ಪಾಕಿಸ್ತಾನವು ಅಧಿಕೃತವಾಗಿ ಪಂದ್ಯಾವಳಿಯಿಂದ ಹೊರಗುಳಿಯುತ್ತದೆ. ಈ ಪಂದ್ಯವು ಪಾಕಿಸ್ತಾನಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ. ಟೂರ್ನಿಯಲ್ಲಿ ಪಾಕಿಸ್ತಾನವು ಈ ಪಂದ್ಯವನ್ನು ಗೆಲ್ಲಬೇಕಾಗಿದೆ.

ಅತ್ತ ಕೆನಡಾ ತಂಡವು ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೋತಿತು. ಆದರೆ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿತು. ಹೀಗಾಗಿ ಇಂದು ಕೆನಡಾ ತಂಡ ಪಾಕಿಸ್ತಾನಕ್ಕೆ ಸೋಲುಣಿಸಿದರೂ ಅಚ್ಚರಿಯಿಲ್ಲ. ಗಮನಾರ್ಹವಾಗಿ, ಈಗಾಗಲೇ ಪಾಕಿಸ್ತಾನವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೋತಿದೆ. ಹೀಗಾಗಿ ಇಂದು ಪಾಕಿಸ್ತಾನ ಎಚ್ಚರಿಕೆಯಿಂದ ಆಡಬೇಕಿದೆ.
icon

(5 / 6)

ಅತ್ತ ಕೆನಡಾ ತಂಡವು ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೋತಿತು. ಆದರೆ, ಎರಡನೇ ಪಂದ್ಯದಲ್ಲಿ ಐರ್ಲೆಂಡ್ ಅನ್ನು ಸೋಲಿಸಿತು. ಹೀಗಾಗಿ ಇಂದು ಕೆನಡಾ ತಂಡ ಪಾಕಿಸ್ತಾನಕ್ಕೆ ಸೋಲುಣಿಸಿದರೂ ಅಚ್ಚರಿಯಿಲ್ಲ. ಗಮನಾರ್ಹವಾಗಿ, ಈಗಾಗಲೇ ಪಾಕಿಸ್ತಾನವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಸೋತಿದೆ. ಹೀಗಾಗಿ ಇಂದು ಪಾಕಿಸ್ತಾನ ಎಚ್ಚರಿಕೆಯಿಂದ ಆಡಬೇಕಿದೆ.(AFP)

ಒಂದು ವೇಳೆ ಕೆನಡಾ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾದರೂ, ಬಾಬರ್ ಪಡೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುತ್ತದೆ. ಏಕೆಂದರೆ, ಮುಂದೆ ತಂಡವು ಒಂದು ಪಂದ್ಯ ಮಾತ್ರ ಆಡಲಿದ್ದು, ಅದರಲ್ಲಿ ಗೆದ್ದರೂ 2 ಅಂಕ ಪಡೆಯಬಹುದು. ಅತ್ತ ಯುಎಸ್‌ಎ ಹಾಗೂ ಭಾರತ ಈಗಾಗಲೇ 4 ಅಂಕ ಪಡೆದು ಮುನ್ನಡೆಯಲ್ಲಿದೆ.
icon

(6 / 6)

ಒಂದು ವೇಳೆ ಕೆನಡಾ ವಿರುದ್ಧದ ಪಂದ್ಯವು ಮಳೆಯಿಂದಾಗಿ ರದ್ದಾದರೂ, ಬಾಬರ್ ಪಡೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳುತ್ತದೆ. ಏಕೆಂದರೆ, ಮುಂದೆ ತಂಡವು ಒಂದು ಪಂದ್ಯ ಮಾತ್ರ ಆಡಲಿದ್ದು, ಅದರಲ್ಲಿ ಗೆದ್ದರೂ 2 ಅಂಕ ಪಡೆಯಬಹುದು. ಅತ್ತ ಯುಎಸ್‌ಎ ಹಾಗೂ ಭಾರತ ಈಗಾಗಲೇ 4 ಅಂಕ ಪಡೆದು ಮುನ್ನಡೆಯಲ್ಲಿದೆ.(Getty Images via AFP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು