ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್‌ಗೆ ಹೊಸ ಮ್ಯಾಟ್ರಿಕ್ಸ್‌ ಜೆರ್ಸಿ ಅನಾವರಣಗೊಳಿಸಿದ ಪಾಕಿಸ್ತಾನ; ಫ್ಯಾನ್ಸ್‌ ಏನಂದ್ರು ನೋಡಿ

ಟಿ20 ವಿಶ್ವಕಪ್‌ಗೆ ಹೊಸ ಮ್ಯಾಟ್ರಿಕ್ಸ್‌ ಜೆರ್ಸಿ ಅನಾವರಣಗೊಳಿಸಿದ ಪಾಕಿಸ್ತಾನ; ಫ್ಯಾನ್ಸ್‌ ಏನಂದ್ರು ನೋಡಿ

  • ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಟಿ20 ವಿಶ್ವಕಪ್ 2024ಕ್ಕೆ ಹೊಸ ಜೆರ್ಸಿ ಅನಾವರಣಗೊಳಿಸಿದೆ. ಸಾಂಪ್ರದಾಯಿಕ ಹಸಿರು ಥೀಮ್‌ ಇರುವ ಮ್ಯಾಟ್ರಿಕ್ಸ್‌ ಜೆರ್ಸಿ ಇದಾಗಿದೆ. ಇದೇ ಜೆರ್ಸಿಯೊಂದಿಗೆ ತಂಡ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿದೆ.

ಭಾರತವು ತನ್ನ ಹೊಸ ಟಿ20 ಜೆರ್ಸಿಯನ್ನು ಅನಾವರಣಗೊಳಿಸಿದ ದಿನವೇ, ಪಾಕಿಸ್ತಾನ ಕೂಡಾ ತನ್ನ ಟಿ20 ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಸೋಮವಾರ ಪಾಕಿಸ್ತಾನ ತನ್ನ ಮ್ಯಾಟ್ರಿಕ್ಸ್ ಜೆರ್ಸಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ನಾಯಕ ಬಾಬರ್ ಅಜಮ್ ಜೊತೆಗೆ ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಕೂಡ ಹಾಜರಿದ್ದರು.
icon

(1 / 6)

ಭಾರತವು ತನ್ನ ಹೊಸ ಟಿ20 ಜೆರ್ಸಿಯನ್ನು ಅನಾವರಣಗೊಳಿಸಿದ ದಿನವೇ, ಪಾಕಿಸ್ತಾನ ಕೂಡಾ ತನ್ನ ಟಿ20 ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಸೋಮವಾರ ಪಾಕಿಸ್ತಾನ ತನ್ನ ಮ್ಯಾಟ್ರಿಕ್ಸ್ ಜೆರ್ಸಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ನಾಯಕ ಬಾಬರ್ ಅಜಮ್ ಜೊತೆಗೆ ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಕೂಡ ಹಾಜರಿದ್ದರು.(PCB)

ಪಾಕಿಸ್ತಾನವು ಹೊಸ ಜೆರ್ಸಿಯಲ್ಲಿಯೂ ತನ್ನ ಹಸಿರು ಬಣ್ಣದ ಥೀಮ್‌ ಮುಂದುವರೆಸಿದೆ. ಪಿಸಿಬಿ ಲೋಗೋ ಎದೆಯ ಎಡಭಾಗದಲ್ಲಿ ಹಳದಿ ಬಣ್ಣದಲ್ಲಿದೆ. ಅದರ ಮೇಲೆ ಒಂದು ನಕ್ಷತ್ರವಿದೆ. 2009ರಲ್ಲಿ ಪಾಕಿಸ್ತಾನವಯ ಒಂದು ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಕಾರಣಕ್ಕೆ ಈ ನಕ್ಷತ್ರವನ್ನು ಲೋಗೋದಲ್ಲಿ ಚಿತ್ರಿಸಲಾಗಿದೆ. ಎದೆಯ ಬಲಭಾಗದಲ್ಲಿ 2024ರ ಟಿ20 ವಿಶ್ವಕಪ್‌ ಲಾಂಛನವಿದೆ. ಮುಂಭಾಗದಲ್ಲಿ ಪಾಕಿಸ್ತಾನ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ.
icon

(2 / 6)

ಪಾಕಿಸ್ತಾನವು ಹೊಸ ಜೆರ್ಸಿಯಲ್ಲಿಯೂ ತನ್ನ ಹಸಿರು ಬಣ್ಣದ ಥೀಮ್‌ ಮುಂದುವರೆಸಿದೆ. ಪಿಸಿಬಿ ಲೋಗೋ ಎದೆಯ ಎಡಭಾಗದಲ್ಲಿ ಹಳದಿ ಬಣ್ಣದಲ್ಲಿದೆ. ಅದರ ಮೇಲೆ ಒಂದು ನಕ್ಷತ್ರವಿದೆ. 2009ರಲ್ಲಿ ಪಾಕಿಸ್ತಾನವಯ ಒಂದು ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿರುವ ಕಾರಣಕ್ಕೆ ಈ ನಕ್ಷತ್ರವನ್ನು ಲೋಗೋದಲ್ಲಿ ಚಿತ್ರಿಸಲಾಗಿದೆ. ಎದೆಯ ಬಲಭಾಗದಲ್ಲಿ 2024ರ ಟಿ20 ವಿಶ್ವಕಪ್‌ ಲಾಂಛನವಿದೆ. ಮುಂಭಾಗದಲ್ಲಿ ಪಾಕಿಸ್ತಾನ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ.(PCB)

ಪಿಸಿಬಿಯು ತನ್ನ ಹೊಸ ವಿಶ್ವಕಪ್ ಜೆರ್ಸಿಯನ್ನು ಏಕತೆಯ ಸಂಕೇತ ಎಂದು ಬಣ್ಣಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಜರ್ಸಿಯ ವಿಡಿಯೊವನ್ನು ಬಿಡುಗಡೆ ಮಾಡಿದೆ. 'ಲೋಪೆಟ್ ಖುದ್ ಪರ್ ವತನ್ ಕಾ ಪರ್ಚಮ್, ಬಜಾ ದೇ ಡಂಕಾ, ಮಚಾ ದೇ ಶೋರ್' ಎಂದು ಘೋಷವಾಕ್ಯ ಹಾಕಿದೆ.
icon

(3 / 6)

ಪಿಸಿಬಿಯು ತನ್ನ ಹೊಸ ವಿಶ್ವಕಪ್ ಜೆರ್ಸಿಯನ್ನು ಏಕತೆಯ ಸಂಕೇತ ಎಂದು ಬಣ್ಣಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡ ಜರ್ಸಿಯ ವಿಡಿಯೊವನ್ನು ಬಿಡುಗಡೆ ಮಾಡಿದೆ. 'ಲೋಪೆಟ್ ಖುದ್ ಪರ್ ವತನ್ ಕಾ ಪರ್ಚಮ್, ಬಜಾ ದೇ ಡಂಕಾ, ಮಚಾ ದೇ ಶೋರ್' ಎಂದು ಘೋಷವಾಕ್ಯ ಹಾಕಿದೆ.(PCB)

ವಿಶ್ವಕಪ್‌ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಎರಡು ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಆಡಲಿದೆ. ಬಾಬರ್ ಅಜಾಮ್ ಬಳಗ ಸೋಮವಾರ ರಾತ್ರಿ ಐರ್ಲೆಂಡ್‌ಗೆ ತೆರಳಿದೆ. ಪಾಕಿಸ್ತಾನ ತಂಡವು ಐರ್ಲೆಂಡ್‌ನಿಂದ ಇಂಗ್ಲೆಂಡ್ ಮತ್ತು ಅಲ್ಲಿಂದ ವಿಶ್ವಕಪ್ ಪಂದ್ಯಾವಳಿಗಾಗಿ ಅಮೆರಿಕಕ್ಕೆ ಹಾರಲಿದೆ.
icon

(4 / 6)

ವಿಶ್ವಕಪ್‌ ಟೂರ್ನಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್‌ನಲ್ಲಿ ಎರಡು ದ್ವಿಪಕ್ಷೀಯ ಟಿ20 ಸರಣಿಗಳಲ್ಲಿ ಆಡಲಿದೆ. ಬಾಬರ್ ಅಜಾಮ್ ಬಳಗ ಸೋಮವಾರ ರಾತ್ರಿ ಐರ್ಲೆಂಡ್‌ಗೆ ತೆರಳಿದೆ. ಪಾಕಿಸ್ತಾನ ತಂಡವು ಐರ್ಲೆಂಡ್‌ನಿಂದ ಇಂಗ್ಲೆಂಡ್ ಮತ್ತು ಅಲ್ಲಿಂದ ವಿಶ್ವಕಪ್ ಪಂದ್ಯಾವಳಿಗಾಗಿ ಅಮೆರಿಕಕ್ಕೆ ಹಾರಲಿದೆ.

ಹೊಸ ಜರ್ಸಿ ಬಿಡುಗಡೆಗೂ ಮುನ್ನ, ಪಿಸಿಬಿ ತಮ್ಮ ಹಳೆಯ ಜೆರ್ಸಿಯ ಮಾರಾಟದ ಮೇಲೆ ವಿಶೇಷ ರಿಯಾಯಿತಿ ನೀಡಿತು. 2022ರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಎರಡು ಜರ್ಸಿಗಳನ್ನು ಖರೀದಿಸಿದರೆ, ಒಂದು ಜೆರ್ಸಿ ಉಚಿತವಾಗಿ ನೀಡಲಾಗುವುದು ಎಂದು ಅಭಿಮಾನಿಗಳಿಗೆ ತಿಳಿಸಿತು.
icon

(5 / 6)

ಹೊಸ ಜರ್ಸಿ ಬಿಡುಗಡೆಗೂ ಮುನ್ನ, ಪಿಸಿಬಿ ತಮ್ಮ ಹಳೆಯ ಜೆರ್ಸಿಯ ಮಾರಾಟದ ಮೇಲೆ ವಿಶೇಷ ರಿಯಾಯಿತಿ ನೀಡಿತು. 2022ರ ಟಿ20 ವಿಶ್ವಕಪ್‌ ಪಂದ್ಯಾವಳಿಯ ಎರಡು ಜರ್ಸಿಗಳನ್ನು ಖರೀದಿಸಿದರೆ, ಒಂದು ಜೆರ್ಸಿ ಉಚಿತವಾಗಿ ನೀಡಲಾಗುವುದು ಎಂದು ಅಭಿಮಾನಿಗಳಿಗೆ ತಿಳಿಸಿತು.

ಹೊಸ ಜೆರ್ಸಿಗೆ ನೆಟ್ಟಿಗರಿಂದ ಬಗೆಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಬ್ಬರು ಚೆನ್ನಾಗಿದೆ ಎಂದು ಹೊಗಳಿದರೆ, ಇನ್ನೂ ಕೆಲವರು ಸಾಧಾರಣ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ, ಕಸದ ಬುಟ್ಟಿಯಿಂದ ಸ್ಫೂರ್ತಿ ಪಡೆದ ಜೆರ್ಸಿ ಎಂದು ಟೀಕಿಸಿದ್ದಾರೆ. ಇದೇ ವೇಳೆ ಗಾಢ ಹಸಿರು ಬಣ್ಣದ ಜೆರ್ಸಿಯಿಂದ ನಮ್ಮ ತಂಡವನ್ನು ಕೂಡಾ ಬಾಂಗ್ಲಾದೇಶ ಎಂದು ಹೇಳಬಹುದು ಎಂದು ಹೇಳಿದ್ದಾರೆ.
icon

(6 / 6)

ಹೊಸ ಜೆರ್ಸಿಗೆ ನೆಟ್ಟಿಗರಿಂದ ಬಗೆಬಗೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಬ್ಬರು ಚೆನ್ನಾಗಿದೆ ಎಂದು ಹೊಗಳಿದರೆ, ಇನ್ನೂ ಕೆಲವರು ಸಾಧಾರಣ ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ, ಕಸದ ಬುಟ್ಟಿಯಿಂದ ಸ್ಫೂರ್ತಿ ಪಡೆದ ಜೆರ್ಸಿ ಎಂದು ಟೀಕಿಸಿದ್ದಾರೆ. ಇದೇ ವೇಳೆ ಗಾಢ ಹಸಿರು ಬಣ್ಣದ ಜೆರ್ಸಿಯಿಂದ ನಮ್ಮ ತಂಡವನ್ನು ಕೂಡಾ ಬಾಂಗ್ಲಾದೇಶ ಎಂದು ಹೇಳಬಹುದು ಎಂದು ಹೇಳಿದ್ದಾರೆ.(PCB)


IPL_Entry_Point

ಇತರ ಗ್ಯಾಲರಿಗಳು