Anushka Ritika:ಮನಸ್ತಾಪ ಬಿಟ್ಟು ಒಂದಾಗ್ತಾರಾ ಕೊಹ್ಲಿ-ರೋಹಿತ್ ಪತ್ನಿಯರು; ದೇವರೇ ಅನುಷ್ಕಾ-ರಿತಿಕಾ ಒಂದಾಗಲಿ ಎಂದು ಪ್ರಾರ್ಥಿಸಿದ ಫ್ಯಾನ್ಸ್
- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಅನುಷ್ಕಾ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಅವರು ಒಟ್ಟಾಗಿ ವೀಕ್ಷಿಸಿದರು. ಇದರ ಬೆನ್ನಲ್ಲೇ ಇವರಿಬ್ಬರು ಬೇಗ ಒಂದಾಗಲಿ ಎಂದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಅನುಷ್ಕಾ ಶರ್ಮಾ ಮತ್ತು ರಿತಿಕಾ ಸಜ್ದೇಹ್ ಅವರು ಒಟ್ಟಾಗಿ ವೀಕ್ಷಿಸಿದರು. ಇದರ ಬೆನ್ನಲ್ಲೇ ಇವರಿಬ್ಬರು ಬೇಗ ಒಂದಾಗಲಿ ಎಂದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
(1 / 9)
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಪ್ರಶಸ್ತಿಗಾಗಿ ಹೋರಾಟ ಮುಂದುವರಿದಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ 10 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಆದರೆ ಈ ಪಂದ್ಯಕ್ಕಿಂತ ಒಂದು ಫೋಟೋ ಎಲ್ಲರ ಗಮನ ಸೆಳೆದಿದ್ದು ವಿಶೇಷ.
(2 / 9)
ಮಾಜಿ ನಾಯಕ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಅವರು ಒಟ್ಟಿಗೆ ಓವಲ್ ಮೈದಾನದ ಸ್ಟ್ಯಾಂಡ್‌ನಲ್ಲಿ ಪಂದ್ಯ ವೀಕ್ಷಿಸಿದ್ದಾರೆ. ಆದರೆ ಇದು ಫೈನಲ್ ಪಂದ್ಯಕ್ಕಿಂತ ಹೆಚ್ಚು ಟ್ರೆಂಡ್ ಆಗುತ್ತಿರುವುದು ಗಮನಾರ್ಹ.
(3 / 9)
ಅನುಷ್ಕಾ ಶರ್ಮಾ ಹಾಗೂ ರಿತಿಕಾ ಸಜ್ದೇಹ್ ಅವರನ್ನು ಜೊತೆಯಾಗಿ ನೋಡಿದ ಉಭಯ ಆಟಗಾರರ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ನಡುವೆ ಶೀತಲ ಸಮರ ಮುಗಿಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
(4 / 9)
ಕೆಲವು ವರ್ಷಗಳಿಂದ ರಿತಿಕಾ ಮತ್ತು ಅನುಷ್ಕಾ ನಡುವೆ ಮನಸ್ತಾಪ ಏರ್ಪಟ್ಟಿದೆ. ಇಬ್ಬರೂ ಪರಸ್ಪರ ಮಾತನಾಡುತ್ತಿಲ್ಲ ಎಂದು ವರದಿಗಳು ಬಂದಿವೆ. 2019ರಲ್ಲಿ ರೋಹಿತ್ ಶರ್ಮಾ ಇನ್‌ಸ್ಟಾದಲ್ಲಿ ಕೊಹ್ಲಿ ಮತ್ತು ಅನುಷ್ಕಾ ಅವರನ್ನು ಅನ್‌ಫಾಲೋ ಮಾಡಿದ್ದರು. ಇದು ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
(5 / 9)
ಹಾಗಾಗಿ ಇಬ್ಬರ ನಡುವೆ ಏನು ನಡೆಯುತ್ತಿದೆ ಎಂಬುದು ತಿಳಿಯದೇ ಫ್ಯಾನ್ಸ್ ಗೊಂದಲಕ್ಕೆ ಸಿಲುಕಿದ್ದರು. 2019ರಲ್ಲಿ ವರ್ಷಗಳ ಹಿಂದೆ ರವಿಶಾಸ್ತ್ರಿ ಒಂದು ಬಾರಿ ತಮ್ಮ ಪತ್ರಿಕಾಗೋಷ್ಠಿಯನ್ನು ಮುಂದೂಡಿದ್ದರು. ಕೊಹ್ಲಿ-ರೋಹಿತ್ ಸಲುವಾಗಿಯೇ ಮುಂದೂಡಲಾಗಿದೆಯೆಂದು ತಿಳಿದರು. ನಂತರ ರಿತಿಕಾ - ಅನುಷ್ಕಾ ಬಗ್ಗೆಯೂ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
(6 / 9)
ಅಷ್ಟೇ ಅಲ್ಲ.. ರಿತಿಕಾ ಮತ್ತು ಅನುಷ್ಕಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದೇ ಅಪರೂಪ. ಇಬ್ಬರೂ ಕ್ರೀಡಾಂಗಣದಲ್ಲಿ ಬೇರೆ ಬೇರೆ ಕುಳಿತು ಪಂದ್ಯ ವೀಕ್ಷಿಸಿದ ಉದಾಹರಣೆಗಳು ಇವೆ. ರಿತಿಕಾ ತನ್ನ ಸ್ನೇಹಿತರೊಂದಿಗೆ ಕುಳಿತು ಪಂದ್ಯ ನೋಡುವುದೇ ಹೆಚ್ಚು. ಅನುಷ್ಕಾ ಏಕಾಂಗಿಯಾಗಿ ಕುಳಿತದ್ದು ಕಂಡು ಬಂದಿತ್ತು.
(7 / 9)
ಇದೀಗ ಬಹಳ ಸಮಯದ ನಂತರ ಅನುಷ್ಕಾ ಮತ್ತು ರಿತಿಕಾ ಒಂದೇ ಚೌಕಟ್ಟಿನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. ಅಲ್ಲದೇ ಇಬ್ಬರೂ ತುಂಬಾ ಕ್ಲೋಸ್ ಆಗಿರುವಂತೆ ಕಾಣ್ತಿದ್ದಾರೆ. ಅವರ ನಡುವೆ ಎಲ್ಲವೂ ಚೆನ್ನಾಗಿದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎನ್ನುವಂತೆ ಈ ಚಿತ್ರ ತೋರುತ್ತಿದೆ ಎನ್ನುತ್ತಿದ್ದಾರೆ ಫ್ಯಾನ್ಸ್.
(8 / 9)
ದೇವರೇ ಅನುಷ್ಕಾ ಮತ್ತು ರಿತಿಕಾ ಇಬ್ಬರು ಬೇಗ ಒಂದಾಗಲಿ ಎನ್ನುವ ರೀತಿ ಬಗೆಬಗೆ ಕಾಮೆಂಟ್ಗಳ ಮೂಲಕ ಪ್ರಾರ್ಥಿಸುತ್ತಿದ್ದಾರೆ ಉಭಯ ಆಟಗಾರರ ಅಭಿಮಾನಿಗಳು. ಆದರೆ ಯಾವ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಇದೆ ಅಥವಾ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದಾರೆಯೇ ಎಂಬುದರ ಕುರಿತು ಖಚಿತ ಮಾಹಿತಿ ಇಲ್ಲ.
ಇತರ ಗ್ಯಾಲರಿಗಳು