ಕನ್ನಡ ಸುದ್ದಿ  /  Photo Gallery  /  Cricket News Prithvi Shaw Hangs Out With His Girlfriend After Ipl Cricketer Appeared In Public With Nidhi Tapadia Prs

Prithvi-Nidhi: ಐಪಿಎಲ್​ ಬಳಿಕ ತನ್ನ ಗೆಳತಿ ಜೊತೆ ಪೃಥ್ವಿ ಶಾ ಸುತ್ತಾಟ; ಭವಿಷ್ಯದ ಸಚಿನ್​ ಈಗ ಕಾಂಬ್ಳಿಯಾದ ಎನ್ನುತ್ತಿದ್ದಾರೆ ನೆಟ್ಟಿಗರು​

  • Prithvi-Nidhi: ಐಪಿಎಲ್​​ ಮುಗಿಸಿದ ಬೆನ್ನಲ್ಲೇ ಮನೆಗೆ ಮರಳಿರುವ ಪೃಥ್ವಿ ಶಾ, ಈಗ ತನ್ನ ದೀರ್ಘಕಾಲದ ಗೆಳತಿ ನಿಧಿ ತಪಾಡಿಯಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಈ ಜೋಡಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ಟೀಮ್​ ಇಂಡಿಯಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಯುವ ಆರಂಭಿಕ ಆಟಗಾರ ಪೃಥ್ವಿ ಶಾ ಐಪಿಎಲ್-16ರಲ್ಲಿ ಸಂಪೂರ್ಣ ವಿಫಲರಾದರು. ಈ ಸೀಸನ್​​​ನಲ್ಲಿ ಸಂಪೂರ್ಣ ಅಟ್ಟರ್​ ಫ್ಲಾಪ್​ ಸ್ಟಾರ್​ ಪಟ್ಟ ಕಟ್ಟಿಕೊಂಡ ಪೃಥ್ವಿ ಈಗ ತನ್ನ ಗೆಳತಿಯೊಂದಿಗೆ ಸುತ್ತಾಟ ಆರಂಭಿಸಿದ್ದಾರೆ.
icon

(1 / 8)

ತನ್ನ ದೀರ್ಘ ಕಾಲದ ಗೆಳತಿ ನಿಧಿ ತಪಾಡಿಯಾ ಅವರೊಂದಿಗೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಐಐಪಿಎ-2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೃಥ್ವಿ ಮತ್ತು ನಿಧಿ ಹಸಿರು ಕಾರ್ಪೆಟ್ ಮೇಲೆ ಮಿಂಚಿದ್ದಾರೆ.
icon

(2 / 8)

ಪೃಥ್ವಿ-ನಿಧಿ ಇಬ್ಬರೂ ಸಹ ಕಪ್ಪು ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಬಹಳ ದಿನಗಳಿಂದ ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಇದೆ. ಆದರೆ ಎಂದೂ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಂತೆ ಕ್ಯಾಮೆರಾಗಳ ಕೇಂದ್ರ ಬಿಂದುವಾದ್ರು.
icon

(3 / 8)

ಕ್ರಿಕೆಟಿಗನಿಗಿಂತ ತಪಾಡಿಯಾ ಕೊಂಚ ಎತ್ತರವಿದ್ದಾರೆ. 2016ರಲ್ಲಿ ತಪಾಡಿಯಾ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು. ಅವರು ಜನಪ್ರಿಯ ಹಿಂದಿ ಅಪರಾಧ ಕಾರ್ಯಕ್ರಮ ಸಿಐಡಿಯಲ್ಲಿ ನಟಿಸಿದ್ದಾರೆ. 2019ರಲ್ಲಿ ನಿಧಿ ನಟಿಸಿದ್ದ ಪಂಜಾಬಿ ಹಾಡು ಜಟ್ಟು ಕೋಕಾ ಎಂಬ ಹಾಡಿನಿಂದ ಸಖತ್​ ಫೇಮಸ್​ ಆದರು.
icon

(4 / 8)

ನಂತರ ನಿಧಿ ಯಾದ್ ಕರ್ಕೆ, ಸೋನ್ ಡಿ ದುಬ್ಬಿ ಆಲ್ಬಂಗಳೊಂದಿಗೆ ಮತ್ತಷ್ಟು ಕ್ರೇಜ್ ಸಂಪಾದಿಸಿದರು. ವಾಣಿಜ್ಯ ವಿಭಾಗದಲ್ಲಿ ಪದವಿ ಮುಗಿಸಿರುವ ನಿಧಿ ತಪಾಡಿಯಾ ಮಾಡೆಲಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಅದರತ್ತ ಹೆಜ್ಜೆ ಹಾಕುತ್ತಿದ್ದಾರೆ.
icon

(5 / 8)

ಇನ್​​ಸ್ಟಾಗ್ರಾಂನಲ್ಲಿ 117K ಫಾಲೋವರ್ಸ್​ ಹೊಂದಿದ್ದಾರೆ. ಸದಾ ಹಾಟ್ ಫೋಟೋಗಳೊಂದಿಗೆ ಗಮನ ಸೆಳೆಯುತ್ತಿದ್ದಾರೆ. ತಪಾಡಿಯಾ, ಆಲ್ಬಮ್ ಮತ್ತು ಟಿವಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಪೃಥ್ವಿ ಐಪಿಎಲ್‌ನಲ್ಲಿ ಕೇವಲ 8 ಪಂದ್ಯಗಳನ್ನಾಡಿದ್ದು, 106 ರನ್ ಗಳಿಸಿದ್ದಾರೆ.
icon

(6 / 8)

ಮೊದಲ ಆರು ಪಂದ್ಯಗಳಲ್ಲಿ ಫ್ಲಾಪ್​ ಆಗಿದ್ದ ಪೃಥ್ವಿ ಶಾ ಅವರು ತಮ್ಮ 7ನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದರು. ಈ ಪಂದ್ಯಕ್ಕೆ ಗೆಳತಿ ನಿಧಿ ತಪಾಡಿಯಾ ಆಗಮಿಸಿದ್ದರು. ಇಬ್ಬರೂ ಒಂದೇ ರೀತಿ ಸೆಲೆಬ್ರೇಷನ್​ ಕೂಡ ಮಾಡಿದ್ದರು. ಈ ಚಿತ್ರ ಭಾರಿ ಟ್ರೋಲ್​ ಆಗಿತ್ತು.
icon

(7 / 8)

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ದೀರ್ಘ ಸಮಯದ ಬಳಿಕ ತಂಡಕ್ಕೆ ಕಂಬ್ಯಾಕ್​ ಮಾಡಿದ್ದ ಪೃಥ್ವಿ, ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯುವುದು ಅನುಮಾನ ಎನಿಸಿದೆ. ಐಪಿಎಲ್​ನಲ್ಲಿ ಫೇಲ್​ ಆಗಿದ್ದೂ ಇದಕ್ಕೆ ಪ್ರಮುಖ ಕಾರಣ. ಭವಿಷ್ಯದ ಸಚಿನ್​ ತೆಂಡೂಲ್ಕರ್​ ಈಗ ವಿನೋದ್​ ಕಾಂಬ್ಳಿಯಾದ ಎನ್ನುತ್ತಿದ್ದಾರೆ ಫ್ಯಾನ್ಸ್​. ವಿನೋದ್​ ಕಾಂಬ್ಳಿ ಕುಡಿತದ ಚಟಕ್ಕೆ ಒಳಗಾಗಿ ಕರಿಯರ್ ಹಾಳು ಮಾಡಿಕೊಂಡಿದ್ದರು. ಆದರೆ ಪೃಥ್ವಿ, ಸುತ್ತಾಟ ನಡೆಸುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.
icon

(8 / 8)

IPL_Entry_Point

ಇತರ ಗ್ಯಾಲರಿಗಳು