ರಾಹುಲ್ ದ್ರಾವಿಡ್ ಕೊನೆಯ ಪಂದ್ಯ; ಟಿ20 ವಿಶ್ವಕಪ್ ಜೊತೆಗೆ ಭಾರತೀಯ ಕ್ರಿಕೆಟ್‌ನಲ್ಲಿ 6 ಅಧ್ಯಾಯಗಳು ಅಂತ್ಯ!
- South Africa vs India: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವು, ಭಾರತ ತಂಡದ ಪಾಲಿಗೆ ತುಂಬಾ ಭಾವನಾತ್ಮಕ. ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಕೊನೆಯ ಪಂದ್ಯವಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೂ ಕೊನೆಯ ವಿಶ್ವಕಪ್ ಎನ್ನಲಾಗುತ್ತಿದೆ.
- South Africa vs India: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವು, ಭಾರತ ತಂಡದ ಪಾಲಿಗೆ ತುಂಬಾ ಭಾವನಾತ್ಮಕ. ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಇದು ಕೊನೆಯ ಪಂದ್ಯವಾಗಿದೆ. ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಲಿಗೂ ಕೊನೆಯ ವಿಶ್ವಕಪ್ ಎನ್ನಲಾಗುತ್ತಿದೆ.
(1 / 7)
ಈ ವರ್ಷ ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲುತ್ತೋ ಗೊತ್ತಿಲ್ಲ. ಆದರೆ, ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯುವುದು ಖಚಿತ. ರಾಹುಲ್ ದ್ರಾವಿಡ್ ಅವರ ಮೊದಲ ಒಪ್ಪಂದ 2023ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಕೊನೆಗೊಂಡಿತ್ತು. ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋತ ಬೆನ್ನಲ್ಲೇ ದ್ರಾವಿಡ್ ಅವರೊಂದಿಗಿನ ಒಪ್ಪಂದವನ್ನು ಬಿಸಿಸಿಐ ನವೀಕರಿಸಿತು. 2024ರ ಟಿ20 ವಿಶ್ವಕಪ್‌ವರೆಗೆ ಅವರನ್ನು ಭಾರತದ ಮುಖ್ಯ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿತು. ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದ ನಂತರ ದ್ರಾವಿಡ್ ಭಾರತದ ಮಾಜಿ ಕೋಚ್ ಆಗಲಿದ್ದಾರೆ.
(BCCI)(2 / 7)
ದ್ರಾವಿಡ್ ಮತ್ತೆ ಕೋಚ್ ಆಗಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ. ಬಿಸಿಸಿಐ ಹೊಸ ಕೋಚ್ ನೇಮಕ ಪ್ರಕ್ರಿಯೆಯನ್ನು ಆರಂಭಿಸಿದೆ. ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರ ಅಧಿಕಾರಾವಧಿ ಶನಿವಾರ ಕೊನೆಗೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದ್ರಾವಿಡ್ ಅವರ ಕೋಚಿಂಗ್ ಅಡಿಯಲ್ಲಿ ಟೀಮ್ ಇಂಡಿಯಾ ಕೊನೆಯ ಬಾರಿಗೆ ಮೈದಾನಕ್ಕಿಳಿಯಲಿದೆ.
(ANI)(3 / 7)
ರಾಹುಲ್ ದ್ರಾವಿಡ್ ಒಬ್ಬರೇ ಅಲ್ಲ, ಭಾರತೀಯ ಕ್ರಿಕೆಟ್‌ನ ಆರು ಅಧ್ಯಾಯಗಳು ಶನಿವಾರ ಒಟ್ಟಿಗೆ ಕೊನೆಗೊಳ್ಳಬಹುದು. ಅಂದರೆ, 6 ಜನರ ವೃತ್ತಿಜೀವನದ ಒಂದು ಅಧ್ಯಾಯವು ಟಿ20 ವಿಶ್ವಕಪ್ ಫೈನಲ್ ನಂತರ ಕೊನೆಗೊಳ್ಳಬಹುದು. ಅವರಲ್ಲಿ ಇಬ್ಬರು ಸ್ಟಾರ್ ಕ್ರಿಕೆಟಿಗರು ಸೇರಿದ್ದಾರೆ. ದ್ರಾವಿಡ್ ಅವರಲ್ಲದೆ, ಟೀಮ್ ಇಂಡಿಯಾದ ಮೂವರು ಸಹಾಯಕ ತರಬೇತುದಾರರ ಅಧಿಕಾರಾವಧಿಯೂ ಶನಿವಾರ ಕೊನೆಗೊಳ್ಳಲಿದೆ. ಒಂದು ವೇಳೆ ಬಿಸಿಸಿಐ ಅವರೊಂದಿಗಿನ ಒಪ್ಪಂದವನ್ನು ನವೀಕರಿಸದಿದ್ದರೆ, ಟೀಮ್ ಇಂಡಿಯಾದ ಪ್ರಸ್ತುತ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಸ್ಥಾನ ತೊರೆಯಬೇಕಾಗುತ್ತದೆ.
(ANI)(4 / 7)
ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಟಿ20 ವಿಶ್ವಕಪ್ ನಂತರ ತಮ್ಮ ಒಪ್ಪಂದ ಕೊನೆಗೊಳಿಸಲು ಸಜ್ಜಾಗಿದ್ದಾರೆ. ಕಳೆದ ವರ್ಷ, ಮಂಡಳಿಯು ದ್ರಾವಿಡ್ ಅವರ ನೇತೃತ್ವದ ಸಂಪೂರ್ಣ ಕೋಚಿಂಗ್ ಸಿಬ್ಬಂದಿಯನ್ನು ಉಳಿಸಿಕೊಂಡಿತು. ಆದಾಗ್ಯೂ, ಹೊಸ ಮುಖ್ಯ ಕೋಚ್ ನೇಮಕಗೊಂಡಾಗ ಅವರು ತಮ್ಮ ಆಯ್ಕೆಯ ಸಹಾಯಕ ಸಿಬ್ಬಂದಿ ತಂಡವನ್ನು ಕರೆತರುವುದು ಖಚಿತ.
(ANI)(5 / 7)
ಒಂದು ವೇಳೆ ಭಾರತ ಟಿ20 ವಿಶ್ವಕಪ್ ಗೆದ್ದರೆ, ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಗುಡ್‌ಬಾಯ್ ಹೇಳುವುದು ಬಹುತೇಕ ಖಚಿತ. ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಹೊಸ ನಾಯಕನ ಅಡಿಯಲ್ಲಿ ತಂಡವನ್ನು ಸಿದ್ಧಪಡಿಸುವ ಬಗ್ಗೆ ಯೋಚಿಸುತ್ತಿದೆ. ಹೀಗಾದಲ್ಲಿ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಟಿ20 ನಾಯಕನಾಗಬಹುದು. ರೋಹಿತ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಮುಂದುವರೆಯಬಹುದು.
(ANI)(6 / 7)
ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ತಮ್ಮ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನವನ್ನು ಮುಂದುವರೆಸುವುದು ಕಷ್ಟಸಾಧ್ಯ. ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ ಟೀಮ್ ಇಂಡಿಯಾಗೆ ಎಂಟ್ರಿಕೊಡಲು ಕಾಯುತ್ತಿದ್ದಾರೆ. ಹೀಗಾಗಿ ಕೊಹ್ಲಿಯ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನ ಕೂಡಾ ವಿಶ್ವಕಪ್ ನಂತರ ಕೊನೆಗೊಳ್ಳಬಹುದು.
(ANI)ಇತರ ಗ್ಯಾಲರಿಗಳು